ಮೂಲ್ಕಿ ಬಂಟರ ಸಂಘದ ವತಿಯಿಂದ ಮೂಲ್ಕಿ ಬಂಟರ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ, ಆಟಿದ ತಮ್ಮನ ಅದ್ದೂರಿ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಮಂಗಳೂರು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಆಡಳಿತ ನಿರ್ದೇಶಕ ಡಾ ಎ. ಸದಾನಂದ ಶೆಟ್ಟಿಯವರಿಗೆ 2023-24 ನೇ ಸಾಲಿನ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನಿಸಿ ಗೌರವಿಸಲಾಯಿತು.
ಮೂಲ್ಕಿ ಬಂಟರ ಸಂಘದ 2022-24ನೇ ಸಾಲಿನ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ ಹಾಗೂ ಆಟಿದ ತಮ್ಮನದ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಧಕರ ನೆಲೆಯಲ್ಲಿ ಕರುಣಾಕರ ಶೆಟ್ಟಿ ಉಳೆಪಾಡಿ ಮುಗೇರಬೆಟ್ಟು ( ಕೃಷಿ ಕ್ಷೇತ್ರ ), ಸಾಯಿನಾಥ ಶೆಟ್ಟಿ ಮುಂಡ್ಕೂರು ( ಶಿಕ್ಷಣ ಕ್ಷೇತ್ರ ), ಡಾ. ಹರಿಪ್ರಸಾದ್ ಶೆಟ್ಟಿ (ಪಿಎಚ್ ಡಿ ಪ್ರಾಣಿಶಾಸ್ತ್ರ ವಿಭಾಗ ), ನಿಹಾರಿಕಾ ಶೆಟ್ಟಿ ಮಾನಂಪಾಡಿ ( ಕ್ರೀಡಾ ಕ್ಷೇತ್ರ ) ಅವರನ್ನು ಗೌರವಿಸಲಾಯಿತು.
ಆಟಿದ ತಮ್ಮನ ಮದಿಪು : ನಿಟ್ಟೆ ವಿವಿಯ ಮುಖ್ಯಸ್ಥೆ ಡಾ. ಸಾಯಿ ಗೀತಾ ಹೆಗ್ಡೆಯವರು ಆಟಿದ ತಮ್ಮನದ ಕುರಿತು ಉಪನ್ಯಾಸಗೈದರು. ಸಾಧಕ ವಿದ್ಯಾರ್ಥಿಗಳಿಗೆ ಗೌರವ ವಿದ್ಯಾರ್ಥಿವೇತನ ಕಾರ್ಯಕ್ರಮ ನಡೆಯಿತು. ಮುಂಬಯಿ ವಿ. ಕೆ. ಸಮೂಹ ಸಂಸ್ಥೆಯ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಬೆಂಗಳೂರು ಬಂಟರ ಸಂಘದ ವಿದ್ಯಾನಿಧಿ ಕಮಿಟಿಯ ಸದಾನಂದ ಸುಲಾಯ, ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಸುಕುಮಾರ್ ಶೆಟ್ಟಿ ಕಕ್ವಗುತ್ತು, ಕರ್ನಿರೆ ವಿಶ್ವನಾಥ ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಎಸ್. ಮನೋಹರ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಉಪಾಧ್ಯಕ್ಷ ರಾಜೇಶ್ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಯುವ ವಿಭಾಗದ ದಾಮೋದರ ಶೆಟ್ಟಿ, ಮಹಿಳಾ ವಿಭಾಗದ ಚಂದ್ರಕಲಾ ಎಸ್. ಶೆಟ್ಟಿ, ಪ್ರಚಾರ ವಿಭಾಗದ ನಿಶಾಂತ್ ಶೆಟ್ಟಿ ಕಿಲೆಂಜೂರು, ಶ್ರೀಶ ಶೆಟ್ಟಿ ಐಕಳ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ವಿ. ಶೆಟ್ಟಿ ಪ್ರಸ್ತಾವಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ನಿರ್ವಹಿಸಿದರು. ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು.