ಬಂಟರ ಸಂಘದ ಮುಂಬಯಿಯ ಕಾರ್ಯಕ್ರಮಗಳಲ್ಲಿ ಅತೀ ಮಹತ್ವದ ಹಾಗು ಪ್ರೀತಿಯ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮವೆಂದರೆ, ಸಮಾಜ ಕಲ್ಯಾಣ ಕಾರ್ಯಕ್ರಮ. ಸಮಾಜ ಬಾಂಧವರು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸುಮಾರು 2.5 ಕೋಟಿಗೂ ಮಿಕ್ಕಿ ಶೈಕ್ಷಣಿಕ ಸಹಾಯ ನೀಡುವ ಸಂಸ್ಥೆ ಬಂಟರ ಸಂಘ ಮುಂಬಯಿ ಎಂದು ಹೆಮ್ಮೆಯಿಂದ ಹೇಳಬಹುದು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಮಾಜ ಬಾಂಧವರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ನಾಲಾಸೋಪಾರ ಪೂರ್ವದ
ರಿಜೆನ್ಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಂಘದ ಶಿಕ್ಷಣ ಮತ್ತುಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿಯವರು ಮಾತನಾಡುತ್ತಾ ಇಂದು ನಾವು ಇತರರಿಗೆ ಸಹಾಯ ಮಾಡಿದರೆ ದೇವರು ಇನ್ನೊಂದು ವಿಧದಲ್ಲಿ ನಮಗೆ ಸಹಾಯ ಮಾಡುತ್ತಾರೆ. ಸಮಾಜ ಬಾಂಧವರಿಗೆ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುವ ಸೌಲಭ್ಯಗಳಿವೆ. ಅದರ ಲಾಭವನ್ನು ಸಮಾಜ ಬಾಂಧವರು ಪಡೆಯಬೇಕು. ಎಂದು ನುಡಿದರು
ಬಂಟರ ಸಂಘ ಮುಂಬಯಿಯ ಪಶ್ಚಿಮ ವಲಯ ಸಮನ್ವಯಕರಾದ ಶಶಿಧರ್ ಕೆ . ಶೆಟ್ಟಿ ಇನ್ನಂಜೆ ಮಾತನಾಡುತ್ತಾ ಸಮಾಜ ಬಾಂಧವರಿಗೆ ವಿವಿಧ ರೀತಿಯಲ್ಲಿ ಸಂಘ ಸಹಾಯ ಮಾಡಿದಾಗ ಸಂಘಟನೆಯ ಮೇಲೆ ಪ್ರೀತಿ ಹುಟ್ಟುತ್ತದೆ ಅಲ್ಲದೇ ಓರ್ವ ವಿದ್ಯಾರ್ಥಿ ವಿದ್ಯಾವಂತನಾದರೆ ಒಂದು ಕುಟುಂಬ ಉದ್ಧಾರವಾದಂತೆ ಎಂದರು. ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಕಲಿತು ಒಳ್ಳೆಯ ಉದ್ಯೋಗ ಪಡೆದು ಸಮಾಜದ ಋಣ ತೀರಿಸುವಂತಾಗಬೇಕು ಎಂದರು.
ಸಂಘದ ಉಪಾಧ್ಯಕ್ಷರಾದ ರತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಬಂಟರ ಸಂಘದ ನೆರವಿನಿಂದ ಕಲಿತು ಕೆಲಸಕ್ಕೆ ಸೇರಿದ ನಂತರ ಓರ್ವ ವಿದ್ಯಾರ್ಥಿ ಫೋನ್ ಮುಖಾಂತರ ಸ್ವಯಂ ಮುಂದೆ ಬಂದು ತಾನು ಎರಡು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡುವ ಇಚ್ಛೆಯನ್ನು ಮುಂದಿಟ್ಟ ವಿಚಾರವನ್ನು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಂಟರ ಸಂಘದ ಉಪಾಧ್ಯಕ್ಷರಾದ ಮುಂಡ್ಕೂರು ರತ್ನಾಕರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿ ಎ ಹರೀಶ್ ಶೆಟ್ಟಿ, ಪಶ್ಚಿಮ ವಲಯದ ಸಮನ್ವಯಕಾರ ಶಶಿಧರ ಕೆ ಶೆಟ್ಟಿ ಇನ್ನಂಜೆ, ಸಮಾಜ ಕಲ್ಯಾಣದ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಂತಾರಾಮ್ ಶೆಟ್ಟಿ, ಉಪಾಧ್ಯಕ್ಷರಾದ ಕಾಂದೇಶ್ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ಜಯ ಎ ಶೆಟ್ಟಿ, ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನ ಬಾಳಿಕೆ, ಪ್ರಾದೇಶಿಕ ಸಮಿತಿಯ ಸಂಚಾಲಕ ಜಯಂತ್ ಪಕ್ಕಳ, ಕಾರ್ಯಾಧ್ಯಕ್ಷ ಹರೀಶ್ ಪಾಂಡು ಶೆಟ್ಟಿ,
ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಸಮಿತಿಯ ಸಲಹೆಗಾರಾದ ಅಲ್ಲದೆ ಹಿರಿಯ ಸಮಾಜ ಸೇವಕ ಪಾಂಡು ಎಲ್ ಶೆಟ್ಟಿ, ಕಾರ್ಯದರ್ಶಿ ಜಗನ್ನಾಥ ಡಿ ಶೆಟ್ಟಿ ಪಳ್ಳಿ, ಕೋಶಾಧಿಕಾರಿ ವಿಜಯ ಎಮ್ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಜಯ ಅಶೋಕ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜತೆ ಕೋಶಾಧಿಕಾರಿ ಸತೀಶ್ ಶೆಟ್ಟಿ ಹಾಗು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ ನೀರೆ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಪಾಂಡು ಶೆಟ್ಟಿ , ಮತ್ತಿತರ ಪದಾಧಿಕಾರಿಗಳು ಅತಿಥಿ ಗಣ್ಯರನ್ನು ಶಾಲು – ಹೂಗುಚ್ಛದೊಂದಿಗೆ ಗೌರವಿಸಿದರು.
ಲೀಲಾವತಿ ಆಳ್ವರವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿ ಗಣ್ಯರನ್ನು, ನೆರೆದ ಸಮಾಜ ಬಾಂಧವರನ್ನೆಲ್ಲ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಜಯ ಅಶೋಕ ಶೆಟ್ಟಿಯವರು ಸ್ವಾಗತಿಸಿದರು.
ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್ ನಿರೂಪಿಸಿದರೆ, ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಪಳ್ಳಿ ಇವರಿಂದ ಧನ್ಯವಾದ ಸಮರ್ಪಣೆ ನೀಡುವ ಮೂಲಕ ಲಘು ಉಪಹಾರದೊಂದಿಗೆ ಸಭೆಯು ಮುಕ್ತಾಯಗೊಂಡಿತು.