
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ ದಿನಾಂಕ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮಿಲನದ ಪ್ರಯುಕ್ತ ನಡೆಯಲಿರುವ ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಕರಪತ್ರವನ್ನು ದಿನಾಂಕ 15/09/2023ರಂದು ಬೆಂಗಳೂರಿನ ಬಂಟರ ಸಂಘದಲ್ಲಿ ಅಧ್ಯಕ್ಷರಾದ ಶ್ರೀಯುತ ಎಂ ಮುರಲೀಧರ ಹೆಗ್ಡೆಯವರು ಬಿಡುಗಡೆ ಮಾಡಿದರು.


ಜಾಗತಿಕ ಸಂಘಗಳ ಒಕ್ಕೂಟದ ಅದ್ಯಕ್ಷರಾದ ಶ್ರೀ ಐಕಳ ಹರೀಶ ಶೆಟ್ಟಿಯವರು ಕಾರ್ಯಕ್ರಮದ ವಿವರ ನೀಡಿ ಬೆಂಗಳೂರಿನ ಸಮಸ್ತ ಬಂಟರನ್ನು ಕಾರ್ಯಕ್ರಮಕ್ಕೆ ಪ್ರಿತಿಪೂರ್ವಕವಾಗಿ ಆಹ್ವಾನಿಸಿದರು. ಶ್ರೀ ಅಜಿತ್ ಶೆಟ್ಟಿ ಉಳ್ತೂರು ಇವರು ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಸಮಿತಿ ಸಂಚಾಲಕರಾದ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿಯವರು ಕಾರ್ಯಕ್ರಮದ ರೂಪುರೇಷೆ, ನಿಯಮಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಬೆಂಗಳೂರು ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿ, ಶ್ರೀ ಎಂ. ನಂದ್ಯಪ್ಪ ಶೆಟ್ಟಿ ಗೌ ಕಾರ್ಯದರ್ಶಿ ಬಂಟರ ಸಂಘ ಮೈಸೂರು, ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾದಿಕಾರಿ ಶ್ರೀ ಉಳ್ತೂರು ಮೋಹನದಾಸ್ ಶೆಟ್ಟಿ, ಬಂಟರ ಸಂಘ ಬೆಂಗಳೂರು ಇದರ ಮಾಜಿ ಅಧ್ಯಕ್ಷರಾದ ಶ್ರೀ ಉಪೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿಗಳಾದ ಶ್ರೀ ಆನಂದರಾಮ ಶೆಟ್ಟಿ, ಉಪಾದ್ಯಕ್ಷರಾದ ಡಾ. ಜಗದೀಶ ವಿ ಶೆಟ್ಟಿ, ಶ್ರೀಮತಿ ಗೀತಾಂಜಲಿ ಅಜಿಲ, ಖಜಾಂಚಿ ಶ್ರೀ ಅಮರನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಮತಿ ಶ್ಯಾಮಲ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸುದೀಪ ನಾಯ್ಕ್ ,ಶ್ರೀ ಕೀರ್ತನ್ ಶೆಟ್ಟಿ, ಶ್ರೀ ನಿರಂಜನ್ ಶೆಟ್ಟಿ, ಶ್ರೀಮತಿ ಜಯಶ್ರೀ ಸಿ ರೈ, ಶ್ರೀ ಸುಧಾಕರ ಶೆಟ್ಟಿ, ಶ್ರೀ ಸಂದೀಪ್ ಶೆಟ್ಟಿ, ಶ್ರೀ ಕಿರಣ್ ಶೆಟ್ಟಿ, ಮಾಜಿ ಅದ್ಯಕ್ಷರಾದ ಸಿ ಚಂದ್ರಹಾಸ ರೈ, ಮಾಜಿ ಉಪಾಧ್ಯಕ್ಷರಾದ ಬೋಜರಾಜ ಶೆಟ್ಟಿ ಕೊರ್ಗಿ, ಮಾಜಿ ಕಾರ್ಯದರ್ಶಿ ಮಧುಕರ ಶೆಟ್ಟಿ ಹಾಗೂ ಬಂಟರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.


























































































































