ಸಾವಿರ ವರ್ಷಗಳ ಪ್ರಾಚೀನ ಇತಿಹಾಸ ಪ್ರಸಿದ್ಧ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಮತ್ತು ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರ ಅಷ್ಠಬಂಧ ಸಹಿತ ಸಹಸ್ರ ಬ್ರಹ್ಮಕಲಶಾಭಿಷೇಕವು ವೇದಮೂರ್ತಿ ಷಡಂಗ ಶ್ರೀ ಬಿ. ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ಮೇ 20 ರಿಂದ 25 ರವರೆಗೆ ಜರುಗಲಿದೆ. ಮೇ 20 ಶನಿವಾರ ಬೆಳಿಗ್ಗೆ ಗಂಟೆ 8:00 ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹಾವಾಚನ ದೇವ ನಾಂದಿ, 12 ಕಾಯಿ ಗಣಹೋಮ, ನವಗ್ರಹ ಹೋಮ, ಅನ್ನಸಂತರ್ಪಣೆ, ಸಂಜೆ 5:00 ರಿಂದ ಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಸಂತ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಹಾಗೂ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮಿಜಿ ಆಶೀರ್ವಚನ ನೀಡಲಿರುವರು. ಧಾರ್ಮಿಕ ಸಭಾ ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ಡಾ| ನಾಡೋಜ ಜಿ. ಶಂಕರ್ ವಹಿಸಲಿರುವರು.
ಗೌರವ ಉಪಸ್ಥಿತಿಯನ್ನು ವಿಧಾನ ಪರಿಷತ್ ಸದಸ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕರಾದ ಶ್ರೀ ಯಶಪಾಲ್ ಎ. ಸುವರ್ಣ, ವಿದ್ವಾನ್ ಹರಿದಾಸ ಭಟ್ ಪೆರ್ಣಂಕಿಲ, ರಾಷ್ಟ್ರೀಯ ಮಹಿಳಾ ಅಯೋಗದ ನಿಕಟ ಪೂರ್ವ ಸದಸ್ಯೆ ಶ್ರೀಮತಿ ಶ್ಯಾಮಲ ಕುಂದರ್, ಉಡುಪಿ ಸಾಯಿರಾಧ ಸಮುಹ ಸಂಸ್ಥೆಗಳ ಎಮ್.ಡಿ. ಶ್ರೀ ಮನೋಹರ್ ಶೆಟ್ಟಿ ವಹಿಸಲಿರುವರು ಅಲ್ಲದೇ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಶ್ರೀ ಕುದಿ ವಸಂತ ಶೆಟ್ಟಿ (ನಿವೃತ್ತ ಮುಖ್ಯೋಪಾಧ್ಯಾಯರು) , ಶ್ರೀ ಸುಧೀರ್ ಹೆಗ್ಡೆ (ಆಡಳಿತ ಮೋಕ್ತೇಸರರು , ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಣಂಜಾರು ) ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಶ್ರೀ ವಿಕ್ರಮ್ ಹೆಗ್ಡೆ (ಗೌರವಾಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ), ಶ್ರೀ ಉದಯ ಶೆಟ್ಟಿ ಪೆಲತ್ತೂರು, (ಗೌರವಾಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ), ಶ್ರೀ ಸತೀಶ್ ಪೂಜಾರಿ ಪೆಲತ್ತೂರು(ಅಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ) ; ಶ್ರೀ ರಮೇಶ್ ನಾಯಕ್ ಆಡಳಿತ ಮೋಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆಲತ್ತೂರು, ಶ್ರೀಮತಿ ಜ್ಯೋತಿ ನಾಯಕ್(ಗೌರವಾಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ) ; ಶ್ರೀ ಮನೋಹರ್ ನಾಯಕ್ (ಪ್ರಧಾನ ಕಾರ್ಯದರ್ಶಿ, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ); ಶ್ರೀ ಧನಂಜಯ ನಾಯಕ್ (ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆಲತ್ತೂರು): ಶ್ರೀ ಸುರೇಶ್ ಶೆಟ್ಟಿ, ಅಧ್ಯಕ್ಷರು ಪೆಲತ್ತೂರು ಫ್ರೆಂಡ್ಸ್ , ಪೆಲತ್ತೂರು ಇವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಇಂಜಿನಿಯರ್ ಶ್ರೀ ಶಶಿಧರ ರಾವ್, ಶಿಲ್ಪಿ ಶ್ರೀ ಶಿವ ಕುಮಾರ್, ಮರದ ಶಿಲ್ಪಿ ಶ್ರೀ ರಾಜೇಶ್ ಆಚಾರ್ಯ , ಫಾಬ್ರಿಕೇಶನ್ ಮತ್ತು ಇಂಜಿನಿಯರ್ ವರ್ಕ್ಸ್ ನ ಶ್ರೀ ದಿನೇಶ್ ಕರ್ಕೆರರವರನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಊರ ಭಕ್ತರಿಂದ ನೃತ್ಯ ವೈವಿಧ್ಯ ರಾತ್ರಿ ಗಂಟೆ 9:00 ಕ್ಕೆ ದಿನೇಶ್ ಕರ್ಕೆರ, ಶ್ರೀ ಆದಿ ನಿಧಿ ಎಂಜನಿಯರಿಂಗ್ ವರ್ಕ್ಸ್ ಪರ್ಕಳ ಇಂಡಸ್ಟ್ರಿಯಲ್ ಏರಿಯ ಮಣಿಪಾಲ ಇವರ ಪ್ರಾಯೋಜಕತ್ವದಲ್ಲಿ ವಿಜಯ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದ ಕಲಾ ಸಂಗಮ ಮಂಗಳೂರು ಕಲಾವಿದರಿಂದ ಶಿವದೂತ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಸಮಾಜ ಸೇವಕ, ಉದ್ಯಮಿ ಶ್ರೀ ಅತ್ತೂರು ಕುಡ್ತಿಮಾರು ಗುತ್ತು ಭಾಸ್ಕರ ಶೆಟ್ಟಿ ಕಾಶಿ ಮೀರಾ, ನೀರಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ಆಗಮಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದ್ದಾರೆ ವೇದಿಕೆಯಲ್ಲಿ ಶ್ರೀ ವಿಕ್ರಮ್ ಹೆಗ್ಡೆ (ಗೌರವಾಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ), ಶ್ರೀ ಉದಯ ಶೆಟ್ಟಿ ಪೆಲತ್ತೂರು, (ಗೌರವಾಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ), ಶ್ರೀ ಸತೀಶ್ ಪೂಜಾರಿ ಪೆಲತ್ತೂರು(ಅಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ) ; ಶ್ರೀ ರಮೇಶ್ ನಾಯಕ್ ಆಡಳಿತ ಮೋಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೆಲತ್ತೂರು, ಶ್ರೀಮತಿ ಜ್ಯೋತಿ ನಾಯಕ್(ಗೌರವಾಧ್ಯಕ್ಷರು, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ) ; ಶ್ರೀ ಮನೋಹರ್ ನಾಯಕ್ (ಪ್ರಧಾನ ಕಾರ್ಯದರ್ಶಿ, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ) ಇವರ ಘನ ಉಪಸ್ಥಿತಿಯಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ವಾಸ್ತು ತಜ್ಷ ಶ್ರೀ ವಿದ್ವಾನ್ ಸುಬ್ರಹ್ಮಣ್ಯ ಭಟ್, ದೇವಸ್ಥಾನಕ್ಕೆ ಭೂಮಿ ದಾನ ನೀಡಿದ ದಾನಿಗಳಾದ ಶ್ರೀಮತಿ ಶಾರದಾ ಶಾಮ ಶೆಟ್ಟಿ ಕಾಳ್ಯಾರು ಸಾಗು ಪೆಲತ್ತೂರು ಮತ್ತು ಶ್ರೀಮತಿ ಅಪ್ಪಿ ಹಿರಿಯಣ್ಣ ಪೂಜಾರಿ ಪೆಲತ್ತೂರು, ದೇವಸ್ಥಾನದ ಒಳಾಂಗಣ ತಗಡಿನ ಚಪ್ಪರ ದಾನಿ ಶ್ರೀ ಬಿ. ಎನ್. ಪೂಜಾರಿ ವಕೀಲರು ಹೈಕೋರ್ಟ್ ಮುಂಬಯಿ, ತೀರ್ಥ ಮಂಟಪ ಮೇಲ್ಛಾವಣಿ ತಾಮ್ರ ಹೊದಿಕೆ ದಾನಿ ಶ್ರೀ ಅತ್ತೂರು ಕುಡ್ತಿಮಾರು ಗುತ್ತು ಭಾಸ್ಕರ ಶೆಟ್ಟಿ ಕಾಶಿ ಮೀರಾ ಇವರನ್ನು ಸನ್ಮಾನಿಸಲಾಗುವುದು. ಗೌರವಾರ್ಪಣೆಯನ್ನು ಶ್ರೀ ವೇದ ಮೂರ್ತಿ ಗುರುರಾಜ ತಂತ್ರಿಗಳು, ಶ್ರೀ ಶ್ರೀಪತಿ ಭಟ್ , ಶ್ರೀ ಎ.ಪಿ. ಆಚಾರ್ ಪೆಲತ್ತೂರು, ಶ್ರೀ ಪಿ.ಎಲ್. ಆಚಾರ್ ಪೆಲತ್ತೂರು , ಶ್ರೀ ರಮೇಶ್ ನಾಯಕ್ ಹಾಗೂ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ದೇಣಿಗೆ ನೀಡಿದ ದಾನಿಗಳ ಸತ್ಕಾರ ನಡೆಯಲಿದೆ.
ಮೇ 25 ಗುರುವಾರ ಬೆಳಿಗ್ಗೆ ಗಣಹೋಮ, ಶತರುದ್ರಾಭೀಷೇಕ, ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ ಮಾರಿ ಮತ್ತು ಗೋಂದ್ಲು ಸೇವೆ ಜರುಗಲಿದೆ.
ಮೇ 20 ಶನಿವಾರದಿಂದ ಮೇ 25ರ ಗುರುವಾರ ಪರ್ಯಂತ ಸಂಪನ್ನಗೊಳ್ಳಲಿರುವ ಈ ಪುಣ್ಯ ಮಹೋತ್ಸವ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀ ಮುಡಿ ಗಂಧ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸಿ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಮಹಾ ಭದ್ರಕಾಳಿ ಹಾಗೂ ನಾಗ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತ ಮೋಕ್ತೇಸರರು, ತಂತ್ರಿಗಳು, ಅರ್ಚಕವೃಂದ, ಆಡಳಿತ ಮಂಡಳಿ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.