Author: admin
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೃಷಿ ವಿಜ್ಞಾನ ವಿಭಾಗದಲ್ಲಿ ಪ್ರಸ್ತುತಿ ಶೆಟ್ಟಿ 222ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ. ಕುಂದಾಪುರದ ಸುಣ್ಣಾರಿಯಲ್ಲಿರುವ ಎಕ್ಸಲೆಂಟ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಪ್ರಸ್ತುತಿ ಶೆಟ್ಟಿ 222ನೇ ರ‍್ಯಾಂಕ್ ಪಡೆಯುವ ಮೂಲಕ ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾಳೆ. ಬೈಂದೂರು ತಾಲೂಕಿನ ಗುಡ್ಡೆಯಂಗಡಿ ಆಲೂರು ಶ್ರೀ ಮೂಕಾಂಬಿಕ ಹಳ್ಳಿ ಜನ್ಮನೆ ನಿವಾಸಿ ಹಾಗೂ ಅಮವಾಸ್ಯೆಬೈಲಿನ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿಯ ಪುತ್ರಿಯಾದ ಪ್ರಸ್ತುತಿ ಶೆಟ್ಟಿಯ ಸಾಧನೆಗೆ ಎಕ್ಸಲೆಂಟ್ ಪಿ.ಯು ಕಾಲೇಜಿನ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿ ಕಾಲೇಜಿನಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಂ.ಎಂ ಹೆಗ್ಡೆ ಎಜ್ಯುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮೊಳಹಳ್ಳಿ ಮಹೇಶ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸನ್ ಮ್ಯಾಟ್ರಿಕ್ಸ್ ಸಿನಿಮಾಸ್ ಮತ್ತು ಫಿಲ್ಮ್ ವೀಲ್ ಸ್ಟುಡಿಯೋಸ್ ಅರ್ಪಿಸುವ “ಸ್ಕೂಲ್ ಲೀಡರ್” ಸಿನಿಮಾ ನಗರದ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಸಿಎ ಎಸ್ ಎಸ್ ನಾಯಕ್ ಅವರು, ಇದು ನಿರ್ಮಾಪಕ ಸತ್ಯೇಂದ್ರ ಪೈ ಅವರ ಮೂರನೇ ಸಿನಿಮಾ. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಒತ್ತಡದಿಂದ ಹೊರಬಂದು ಹೇಗೆ ಜೀವನದಲ್ಲಿ ಸಾಧನೆ ಮಾಡಬಹುದು ಅನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕನ್ನಡ ಶಾಲೆಗಳ ಇಂದಿನ ಪರಿಸ್ಥಿತಿಯನ್ನು ಮನ ಮುಟ್ಟುವಂತೆ ಚಿತ್ರಿಸಲಾಗಿದೆ. ಎಲ್ಲರೂ ಸಿನಿಮಾ ನೋಡಿ ಮಕ್ಕಳನ್ನು ಪ್ರೋತ್ಸಾಹಿಸಿ ಎಂದರು. ಬಳಿಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ಸ್ಕೂಲ್ ಲೀಡರ್ ಹೈಸ್ಕೂಲ್ ಜೀವನದ ಕಥೆ ಎಲ್ಲರಿಗೂ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ, ಎಲ್ಲರೂ ಸಿನಿಮಾ ನೋಡಿ ಎಂದು ಶುಭ ಹಾರೈಸಿದರು.ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಪೆನ್ಸಿಲ್ ಬಾಕ್ಸ್ ಕೊಟ್ಟಿದ್ದ ಚಿತ್ರ ನಿರ್ದೇಶಕ ರಝಾಕ್ ಪುತ್ತೂರು ಈಗ ಸ್ಕೂಲ್ ಲೀಡರ್ ನಂತಹ ಉತ್ತಮ…
ಗಣಿತನಗರ : ಡಾ.ಸುಧಾಕರ್ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಜ್ಞಾನಸುಧಾ ಸಂಸ್ಥೆಯು ಉತ್ತಮ ಶಿಕ್ಷಣದ ಜೊತೆಯಲ್ಲಿ ದೇಶಪ್ರೇಮಿಗಳನ್ನು ನಿರ್ಮಿಸುತ್ತಿರುವ ಕಾರ್ಯ ಪ್ರಶಂಸನೀಯ. ಉತ್ತಮ ಫಲಿತಾಂಶದ ಮೂಲಕ ರಾಜ್ಯದ ಮಾದರಿ ಸಂಸ್ಥೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ನುಡಿದರು. ಅವರು ಕಾರ್ಕಳ ಜ್ಞಾನಸುಧಾದ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಕ್ಷೇತ್ರದ ಶಾಸಕ ಶ್ರೀ ವಿ. ಸುನಿಲ್ ಕುಮಾರ್‍ರವರು ಮೌಲ್ಯಗಳನ್ನು ಕೊಡುವಲ್ಲಿ ಮತ್ತು ಸಂಸ್ಕಾರ ಕೊಡುವಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಬಹಳ ದೊಡ್ಡ ಹೆಜ್ಜೆಯನ್ನಿಡುತ್ತಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿಯ ಉಪಕುಲಪತಿಗಳಾದ ಪ್ರೊ.ಫೆಸರ್ ಡಾ| ಪಿ.ಎಲ್.ಧರ್ಮ ಮಾತನಾಡಿ ಯುವಮನಸುಗಳಲ್ಲಿ ದೇಶಪ್ರೇಮವನ್ನು ತುಂಬುವ ಕಾರ್ಯದ ಜೊತೆಗೆ, ಜ್ಞಾನಸುಧಾ ಪರಿವಾರ ಅತ್ಯುತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕಾರ್ಯದಲ್ಲಿ…
ಕುತ್ಯಾರು ಅಂಜಾರು ಮನೆ ದಿ. ಅಕ್ಕಣಿ ಶೆಡ್ತಿ ಹಾಗೂ ತಾಳಿಪಾಡಿ ದಿ. ಚಂದಯ್ಯ ಶೆಟ್ಟಿಯವರ 7 ಮಕ್ಕಳಲ್ಲಿ ಕೊನೆಯವರಾದ ಶಕುಂತಳಾ ಕೆ ಚೌಟ (77) ರವರು ಅಸೌಖ್ಯದ ಕಾರಣ ಮೇ 28 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಕೊರಂಗ್ರಪಾಡಿ ದೊಡ್ಡಮನೆ ಕುಮಾರ್ ಎನ್. ಚೌಟ, ಮಕ್ಕಳಾದ ಉದಯ ಕೆ ಚೌಟ, ಉಲ್ಲಾಸ್ ಕೆ ಚೌಟ ಹಾಗೂ ಮಗಳು ಉಷಾ ಡಿ ಶೆಟ್ಟಿ, ಅಳಿಯ ದಾಮೋದರ್ ಎನ್. ಶೆಟ್ಟಿ ಮತ್ತು ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಹಾಗೂ ಅಪಾರ ಸಂಖ್ಯೆಯ ಬಂಧು ವರ್ಗದವರನ್ನು ಅಗಲಿದ್ದಾರೆ.ಮೃತರ ನಿಧನಕ್ಕೆ ಕರ್ನಾಟಕ ಸಂಘ ಮೀರಾರೋಡ್, ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ ಮತ್ತು ಮೀರಾ ಭಯಂದರ್ ಕಾಂಗ್ರೆಸ್ ಕಮಿಟಿಯ ಜಿಲ್ಲಾಧ್ಯಕ್ಷ ಪ್ರಮೋದ್ ಸಾಮಂತ್ ಶೋಕವನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಕಳ ಎಸ್.ಕೆ.ಎಸ್ ಸಂಸ್ಥೆಯ ಸುಜಯ್ ಕುಮಾರ್ ಶೆಟ್ಟಿ ಮತ್ತು ಅಮೃತಾ ದಂಪತಿಯ ಪುತ್ರಿ ಸಚಿ ಶೆಟ್ಟಿಯವರು ಎಸ್.ಎಸ್.ಎಲ್.ಸಿಯಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ 3 ನೇ ಸ್ಥಾನ ಗಳಿಸಿದ್ದಾರೆ. ತಂದೆ ಸುಜಯ್ ಶೆಟ್ಟಿಯವರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಗ್ರಣಿ ಸಾಧನೆ ಪ್ರತೀಕವಾಗಿ ಅಲ್ಲಲ್ಲಿ ಅದ್ಭುತ ಕಟ್ಟಡಗಳು ಎದ್ದು ನಿಂತಿವೆ. ಕಾರ್ಕಳ ಮಾರಿಗುಡಿ, ಕಾಪು ಹೊಸ ಮಾರಿಗುಡಿ, ದಿಲ್ಲಿಯಲ್ಲಿ ಅದ್ಭುತ ಕರ್ನಾಟಕ ಭವನ ಮೊದಲಾದ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಅಪೂರ್ವ ವಾಸ್ತುಶಿಲ್ಪದೊಂದಿಗೆ ನಿರ್ಮಿಸಿದವರು. ಸುಜಯ್ ಶೆಟ್ಟಿಯವರ ಎಸ್.ಕೆ.ಎಸ್ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ನುರಿತ ಕೆಲಸಗಾರರು ಇದ್ದಾರೆ. ನೌಕರರ, ಕಾರ್ಮಿಕರ ಮಕ್ಕಳ ಶಾಲೆ ಫೀಸ್, ಆರೋಗ್ಯ ರಕ್ಷಣೆ ಹೊಣೆ ಹೊತ್ತಿದ್ದಾರೆ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸಚಿ ಶೆಟ್ಟಿಯವರಿಗೆ ಅಭಿನಂದನೆಗಳು.
ಉಳ್ತೂರು ಮೋಹನ್ ದಾಸ್ ಶೆಟ್ಟಿಯವರ ವಿಶೇಷ ಮನವಿಯ ಮೇರೆಗೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದೆಷ್ಟೋ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮತ್ತು ಅಶಕ್ತರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿರುವ ಖ್ಯಾತ ಉದ್ಯಮಿ ಮೆರಿಟ್ & ಅರ್ಜುನ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಬೆಳ್ಳಾಡಿ ಅಶೋಕ್ ಶೆಟ್ಟಿಯವರು ಪಟ್ಲ ದಶಮ ಸಂಭ್ರಮಕ್ಕೆ 25 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಅಶೋಕ್ ಶೆಟ್ಟಿ ಹಾಗೂ ಅವರ ಕುಟುಂಬಕ್ಕೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ| ಕನ್ಯಾನ ಸದಾಶಿವ ಶೆಟ್ಟಿ, ಡಾ| ಕೆ ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಮತ್ತು ಪಟ್ಲ ಸತೀಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಸಂಭ್ರಮ ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ವಿದ್ಯಾಮಾತಾ ಅಕಾಡೆಮಿ : ಒಂದೇ ಸೂರಿನಡಿಯಲ್ಲಿ ತರಬೇತಿ ಪಡೆದು ವಿವಿಧ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸು ಖಚಿತ
ದಕ್ಷಿಣ ಕನ್ನಡದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಗೆ ಜವಾಹರ್ ನವೋದಯ ವಸತಿ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಿದೆ. ಎರಡು ವಸತಿ ಶಾಲೆಗಳ ಪ್ರವೇಶಕ್ಕೆ ಅವಕಾಶ ಪಡೆದ ಇಬ್ಬರು ವಿದ್ಯಾರ್ಥಿಗಳು ಒಂದೇ ಸೂರಿನಡಿ ವಿವಿಧ ಶಾಲೆಗಳ ಪ್ರವೇಶ ಪರೀಕ್ಷೆಗಳ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ನೇಸರ ಬಿ.ಕೆ ಮತ್ತು ತನುಷ್ ರಾಜ್ ತೇಜಸ್ವಿರವರು ಜವಾಹರ್ ನವೋದಯ ಹಾಗೂ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಎರಡರಲ್ಲೂ ಉತ್ತೀರ್ಣರಾಗಿ ಸದ್ರಿ ಶಾಲೆಗಳ ಪ್ರವೇಶಾತಿ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.ಸುಳ್ಯ ತಾಲೂಕು ಐವರನಾಡು ಗ್ರಾಮದ ಪಂಚಮ ದೇವರಕಾನ ನಿವಾಸಿ ಭರತ್ ಕುಮಾರ್ ಮತ್ತು ಕವಿತಾ ದಂಪತಿಗಳ ಪುತ್ರ ನೇಸರ ಬಿ.ಕೆ, ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ದೊಡ್ಡಡ್ಕ ನಿವಾಸಿ ದೀನ್ ರಾಜ್ ಡಿ.ಸಿ ಮತ್ತು ಸುಷ್ಮಾ ದಂಪತಿಗಳ ಪುತ್ರ ದೈವಿಕ್ ಚಂದ್ ಡಿ.ಡಿ, ಕಡಬ ತಾಲೂಕಿನ ಚಾರ್ವಾಕ ಗ್ರಾಮದ ದೇವರಗುಡ್ಡೆ ನಿವಾಸಿ ಡಿ.ಜಿ ರವಿರಾಜ್…
ತುಳು ಯಕ್ಷಗಾನ ಪ್ರಸಂಗಗಳಿಗೆ ಹೆಬ್ಬಾಗಿಲು ತೆರೆದು ಕೊಟ್ಟ ‘ಕೋಟಿ ಚೆನ್ನಯ’ ಪ್ರಸಂಗವು ತೆಂಕುತಿಟ್ಟಿನ ಹಲವು ಮೇಳಗಳ ಜನಪ್ರಿಯತೆಗೆ ಕಾರಣವಾಗಿದೆ. ನೂರು ವರ್ಷಗಳ ಹಿಂದೆ ಪಂದಬೆಟ್ಟು ವೆಂಕಟರಾಯರು ಬರೆದ ಈ ಪ್ರಸಂಗವು ಇದೀಗ ತಾಳಮದ್ದಳೆ ರೂಪದಲ್ಲಿ ಮಂಗಳೂರು ಆಕಾಶವಾಣಿಯಿಂದ ಈ ವಾರ ಪ್ರಸಾರವಾಗಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಇದನ್ನು ಎರಡು ಕಂತುಗಳಾಗಿ ಪ್ರಸ್ತುತಪಡಿಸುವರು. ನ್ಯಾಯ ಚಾವಡಿ : ತಾಳಮದ್ದಳೆಯ ಮೊದಲನೇ ಭಾಗ ‘ನ್ಯಾಯ ಚಾವಡಿ’ ಮೇ 30 ರಂದು ಶುಕ್ರವಾರ ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ. ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬ್ಳೆ, ಎಂ.ಕೆ ರಮೇಶ ಆಚಾರ್ಯ, ರಮೇಶ ಸಾಲ್ವಣ್ಕರ್, ಉಮೇಶ ಆಚಾರ್ಯ ಗೇರುಕಟ್ಟೆ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಭಾಗವಹಿಸಿದ್ದಾರೆ. ಅಂಕೊದ ಕಲ : ಪ್ರಸಂಗದ ಎರಡನೇ ಭಾಗ ‘ಅಂಕೊದ ಕಲ’ ಮುಂದಿನ ಶುಕ್ರವಾರ ಜೂನ್ 6…
ವಿದ್ಯಾಗಿರಿ: ಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜುಲೈ 16ರಿಂದ 27ರ ವರೆಗೆ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ 2025(ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025)ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ವರೆಗೆ 32 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. ಪುರುಷರ ವಿಭಾಗದಲ್ಲಿ ಗಗನ್ (5000 ಮೀಟರ್ಸ್ ಓಟ), ಸಚಿನ್ (20 ಕಿ.ಮೀ ನಡಿಗೆ), ಬಾಲಕೃಷ್ಣ (400 ಮೀ ಓಟ), ತೌಫಿಕ್ ಎನ್ (ಡೆಕತ್ಲಾನ್) ಹಾಗೂ ಮಹಿಳಾ ವಿಭಾಗದಲ್ಲಿ ದೀಕ್ಷಿತಾ (400 ಮೀ ಹರ್ಡಲ್ಸ್), ಬಸಂತಿ ಕುಮಾರಿ (ಹಾಫ್ ಮ್ಯಾರಥಾನ್), ಮಂಜು ಯಾದವ್(ಸ್ಟೀಪಲ್ ಚೇಸ್), ಸಿಂಧುಶ್ರೀ(ಪೋಲ್‌ವರ್ಟ್), ಸಾಕ್ಷಿ(ಈಟಿ ಎಸೆತ), ಜ್ಯೋತಿ (ಹಾಫ್ ಮ್ಯಾರಥಾನ್), ಶಾಲಿನಿ (20 ಕಿಮೀ ನಡಿಗೆ), ಪಾಲ್ಗೊಳ್ಳಲಿದ್ದಾರೆ.ಸಿಲೆಕ್ಷನ್ ಟ್ರಯಲ್ಸ್ ಗೇಮ್ಸ್ ಮೂಲಕ ಆಯ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಈ ಕ್ರೀಡಾಪಟುಗಳು ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಪ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ…
ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ಒಂದು ಹೊಸ ಛಾಪು ಮೂಡಿಸಿ, ಹಲವು ದಶಕಗಳಿಂದ ಹೋಟೆಲ್ ಉದ್ಯಮಿಯಾಗಿದ್ದು, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸರಳ ಸಜ್ಜನ ವ್ಯಕ್ತಿಯಾಗಿ ದುಡಿದು ನ್ಯಾಯ ಎಂದೆಂದಿಗೂ ಜಯದ ಮೂಲ ಎಂದು ಪರಿಗಣಿಸಿ ನಡೆಯುವ ವ್ಯಕ್ತಿ ಶ್ರೀ ಪಂಜುರ್ಲಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ರಾಜೇಂದ್ರ ವಿ ಶೆಟ್ಟಿಯವರು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ರಿ.) ಇವರ ವತಿಯಿಂದ 5 ವರ್ಷಗಳಿಗೊಮ್ಮೆ ಕೊಡುವ ಹೋಟೆಲ್ ಉದ್ಯಮದ ಶ್ರೇಷ್ಠ ಪ್ರಶಸ್ತಿಯಾದ “ಆತಿಥ್ಯ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶ್ರೀ ಪಂಜುರ್ಲಿ ಸಮೂಹ ಸಂಸ್ಥೆಯು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಪುಣೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾ ಪೋಷಕರಾಗಿರುವ ರಾಜೇಂದ್ರ ಶೆಟ್ಟಿಯವರಿಗೆ 2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇವರು ಹೋಟೆಲ್ ಉದ್ಯಮದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ.















