ಕುತ್ಯಾರು ಅಂಜಾರು ಮನೆ ದಿ. ಅಕ್ಕಣಿ ಶೆಡ್ತಿ ಹಾಗೂ ತಾಳಿಪಾಡಿ ದಿ. ಚಂದಯ್ಯ ಶೆಟ್ಟಿಯವರ 7 ಮಕ್ಕಳಲ್ಲಿ ಕೊನೆಯವರಾದ ಶಕುಂತಳಾ ಕೆ ಚೌಟ (77) ರವರು ಅಸೌಖ್ಯದ ಕಾರಣ ಮೇ 28 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಕೊರಂಗ್ರಪಾಡಿ ದೊಡ್ಡಮನೆ ಕುಮಾರ್ ಎನ್. ಚೌಟ, ಮಕ್ಕಳಾದ ಉದಯ ಕೆ ಚೌಟ, ಉಲ್ಲಾಸ್ ಕೆ ಚೌಟ ಹಾಗೂ ಮಗಳು ಉಷಾ ಡಿ ಶೆಟ್ಟಿ, ಅಳಿಯ ದಾಮೋದರ್ ಎನ್. ಶೆಟ್ಟಿ ಮತ್ತು ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಹಾಗೂ ಅಪಾರ ಸಂಖ್ಯೆಯ ಬಂಧು ವರ್ಗದವರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಕರ್ನಾಟಕ ಸಂಘ ಮೀರಾರೋಡ್, ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ ಮತ್ತು ಮೀರಾ ಭಯಂದರ್ ಕಾಂಗ್ರೆಸ್ ಕಮಿಟಿಯ ಜಿಲ್ಲಾಧ್ಯಕ್ಷ ಪ್ರಮೋದ್ ಸಾಮಂತ್ ಶೋಕವನ್ನು ವ್ಯಕ್ತಪಡಿಸಿದ್ದಾರೆ.










































































































