Author: admin
ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮಾರಿಯಮ್ಮನ ಸನ್ನಿಧಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ದೇವಳದ ಜೀರ್ಣೋದ್ದಾರದ ಆರ್ಥಿಕ ಸಮಿತಿ ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕಿ ಬೀನಾ ವಿ.ಶೆಟ್ಟಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಟ ರಕ್ಷಿತ್ ಶೆಟ್ಟಿ ಕುಟುಂಬಸ್ಥರೊಂದಿಗೆ ದೇವಳದ ಜೀರ್ಣೋದ್ದಾರ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭ ರಶ್ಮಿತ್ ನಿಖಿಲ್ ಶೆಟ್ಟಿ ಕಾಪುವಿನ ಅಮ್ಮನ ಸ್ವರ್ಣ ಗದ್ದುಗೆಗೆ 9 ಗ್ರಾಂ ಸ್ವರ್ಣ ಸಮರ್ಪಿಸಿದರು. ರಕ್ಷಿತ್ ಶೆಟ್ಟಿ ಅವರ ತಾಯಿ ರಂಜನಾ ಶ್ರೀಧರ್ ಶೆಟ್ಟಿ ಮತ್ತು ಸಹೋದರ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.
ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇವಾ ಕಾರ್ಯಗಳ ಜೊತೆಗೆ ಪ್ರತೀ ವರ್ಷ ನಗರದಲ್ಲಿನ ಕೆಲವೊಂದು ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗೆ ಪೂರಕವಾಗಿ ಸ್ವಂದಿಸಿ, ಮಾನವೀಯ ನೆಲೆಯಲ್ಲಿ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿರುವ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ವತಿಯಿಂದ ಈ ವರ್ಷ ಜುಲೈ 1 ರಂದು ಕಾಂಜೂರು ಮಾರ್ಗದಲ್ಲಿರುವ ವಾತ್ಸಲ್ಯ ಟ್ರಸ್ಟ್ ಮುಂಬಯಿಯ ಸಂಚಾಲಕತ್ವದಲ್ಲಿ ಕಾರ್ಯರೂಪದಲ್ಲಿರುವ ಅನಾಥಾಶ್ರಮಕ್ಕೆ ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಮುಂದಾಳತ್ವದಲ್ಲಿ ಭೇಟಿ ನೀಡಿ ಅಲ್ಲಿಯ ಅನಾಥ ಮಕ್ಕಳೊಂದಿಗೆ ಬೆರೆತು ಕೆಲವು ಸಮಯ ಕಾಲ ಕಳೆದು ಮಕ್ಕಳಿಗೆ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ನೀಡಿ ಸಹಾಯ ಸಹಕಾರಗಳನ್ನು ನೀಡಲಾಯಿತು. ನವಜಾತ ಶಿಶುವಿನಿಂದ ಹಿಡಿದು 18 ವರ್ಷದ ವಯೋಮಿತಿವರೆಗಿನ ಅನಾಥ ಮಕ್ಕಳಿರುವ ಈ ಅನಾಥಾಶ್ರಮದಲ್ಲಿ ಅವರಿಗೆ ಬೇಕಾದ ವಿದ್ಯಾಭ್ಯಾಸ, ಕಂಪ್ಯೂಟರ್ ಶಿಕ್ಷಣ, ಕರಕುಶಲ (ಸ್ಕಿಲ್ ಡೆವಲಪ್ಮೆಂಟ್)ದಲ್ಲಿ ತರಬೇತಿ, ಊದುಬತ್ತಿ, ಪರಿಮಳದ ದ್ರವ್ಯ ತಯಾರಿಸುವ ತರಬೇತಿ, ಹತ್ತು ಹಲವು ಜೀವನಾವಶ್ಯಕ ತರಬೇತಿಗಳನ್ನು ನೀಡಿ, ಅವರನ್ನು ಸದೃಢರನ್ನಾಗಿ…
‘ಸೇವೆಯಿಂದ ದೊರೆಯುವ ನೆಮ್ಮದಿ, ಹಣ, ಆಸ್ತಿ, ಸಂಪಾದನೆಯಿಂದ ದೊರೆಯುವುದಿಲ್ಲ’ ಎಂದು ರೋಟರಿ 3181 ರ ಜಿಲ್ಲೆಯ ಸಲಹೆಗಾರ ಬಿ.ಶೇಖರ್ ಶೆಟ್ಟಿ ಹೇಳಿದರು. ಇಲ್ಲಿನ ರೋಟರಿ ಸಂಸ್ಥೆಯಲ್ಲಿ ನಡೆದ 2024-25 ನೇ ಸಾಲಿನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಿ ಅವರು ಮಾತನಾಡಿದರು. ‘ಕೆಲವರು ಆಸ್ತಿ, ಹಣ, ಅಧಿಕಾರ ಪಡೆಯುವುದಕ್ಕಾಗಿ ಅಡ್ಡ ದಾರಿ ಹಿಡಿಯುತ್ತಾರೆ. ದೇವರು ನಮಗೆ ನೀಡಿರುವ ಪ್ರತಿ ಕ್ಷಣವನ್ನು ಸಂತೋಷ, ಸೇವೆಯಿಂದ ಕಳೆಯುವ ಬದಲು ಅಗತ್ಯಕ್ಕಿಂತಲೂ ಹೆಚ್ಚು ಸಂಪಾದನೆಯ ಬೆನ್ನು ಹತ್ತಿ ನೆಮ್ಮದಿ ಕಳೆದುಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ’ ಎಂದರು. ‘ಸಕಲೇಶಪುರ ರೋಟರಿ ಸಂಸ್ಥೆಯಿಂದ ಶಾಲೆ, ಶ್ರವಣ ದೋಷವುಳ್ಳ ಮಕ್ಕಳಿಗೆ ವಸತಿ ಶಾಲೆ, ಬಸ್ ನಿಲ್ದಾಣ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಶ್ಲಾಘನೀಯ’ ಎಂದು ಹೇಳಿದರು. ಸಂಸ್ಥೆಯ ಸಹಾಯಕ ಗೌರ್ನರ್ ಅರುಣ್ ರಕ್ಷಿದಿ, ವಲಯ ದಂಡಾಧಿಕಾರಿ ಸಿ.ಇ.ಯಶ್ವಂತ್ ಮಾತನಾಡಿದರು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎ.ಡಿ. ವೀರೇಂದ್ರಕುಮಾರ್, ಕಾರ್ಯದರ್ಶಿಯಾಗಿ ರವಿರಾಜ್ ಪಿ. ಶೆಟ್ಟಿ ಹಾಗೂ ನಿರ್ದೇಶಕರಿಗೆ…
ದೇವನೂರು ಮಹದೇವ ಅವರ ‘ಎದೆಗೆ ಬಿದ್ದ ಅಕ್ಷರ’ ದಲ್ಲಿ ಇರುವ ಒಂದು ಕಥೆ ಅಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ. ಒಬ್ಬ ಯುವಕ ಜಗತ್ತನ್ನು ಬದಲಾಯಿಸಿಬಿಡಬೇಕು, ಕ್ರಾಂತಿ ಮಾಡಬೇಕು, ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕೆಂದು ಆ ದಿಕ್ಕಿನ ಕಡೆಗೆ ಹೊರಾಡುತ್ತಾನೆ. ಯಾರೋ ಒಬ್ಬರು ಹೇಳುತ್ತಾರೆ, ನಿನ್ನೆಲ್ಲ ಸಮಸ್ಯೆಗೆ ಪರಿಹಾರ ಸೂಚಿಸುವ ಮಾಂತ್ರಿಕ ಶಕ್ತಿ- ವ್ಯಕ್ತಿಯೊಂದಿಗೆ ಇಂಥ ಕಡೆ ಕಟ್ಟಡದ 5 ನೇ ಮಹಡಿಯ ಮೇಲಿದ್ದಾನೆ ಎಂದು. ಯುವಕ ಆಸೆಗಣ್ಣಿನಿಂದ ಆ ಕಟ್ಟಡವನ್ನು ಹುಡುಕಿಕೊಂಡು ಹೋಗಿ ಇನ್ನೇನು ಮಹಡಿ ಮೆಟ್ಟಲು ಏರಬೇಕೆನ್ನುವಾಗ 1ನೇ ಮಹಡಿಯ ಕಾವಲುಗಾರ ಮೇಲೆ ಹತ್ತಬೇಕಾದರೆ ನಿನ್ನ ಕಿವಿ ಕೊಡಬೇಕು ಎಂದು ಕೇಳುತ್ತಾನೆ. ಯುವಕ ಕಿವಿ ಕೊಡಬೇಕು ಎಂದು ಕೇಳುತ್ತಾನೆ. ಯುವಕ ಕಿವಿ ಕೊಟ್ಟು 2 ನೇ ಮಹಡಿಗೆ ಹೆಜ್ಜೆ ಇಡುವ ಹೊತ್ತಿಗೆ ಅಲ್ಲಿಯ ರಕ್ಷಕ ಬಾಯಿಯನ್ನು ಬೇಡುತ್ತಾನೆ. 3ನೇ ಹಂತದಲ್ಲಿ ನಿನ್ನ ನೆನಪಿನ ಶಕ್ತಿಯನ್ನು ಕೊಡು ಎಂದು ಕಾವಲುಗಾರ ವಶಪಡಿಸಿಕೊಳ್ಳುತ್ತಾನೆ. 4ನೇ ಮಹಡಿಯಲ್ಲಿರುವವ ಹೃದಯವನ್ನೇ ಕಿತ್ತುಕೊಳ್ಳುತ್ತಾನೆ. ಇವೆಲ್ಲವನ್ನು ಕಳೆದುಕೊಂಡ ಯುವಕ 5ನೇ ಮೆಟ್ಟಲು ಏರಿದಾಗ…
ಸೈಕಾಲಜಿ ಉಪನ್ಯಾಸಕರೊಬ್ಬರು, ಒತ್ತಡ ನಿವಾರಿಸುವುದು ಹೇಗೆ? ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಕೈಯಲ್ಲಿ ಹಿಡಿದಿದ್ದ ಗಾಜಿನ ಲೋಟದಲ್ಲಿ ಇರುವ ನೀರನ್ನು ತೋರಿಸುತ್ತಾ ಅವರು ಮಾತನಾಡಲು ಪ್ರಾರಂಭಿಸಿದಾಗ ಎಲ್ಲರೂ, “ಓ ಇವರು ಮತ್ತದೇ ಪ್ರಶ್ನೆ, ಈ ಲೋಟ ಅರ್ಧ ತುಂಬಿದೆಯೋ ಅರ್ಧ ಖಾಲಿಯೋ?’ ಎಂದು ಕೇಳುತ್ತಾರೆಂದು ನಿರೀಕ್ಷಿಸಲಾರಂಭಿಸಿದರು. ಆದರೆ ಉಪನ್ಯಾಸಕರು ಕೇಳಿದ ಪ್ರಶ್ನೆ ಬೇರೆಯೇ ಆಗಿತ್ತು. ‘ಈ ಲೋಟ ಎಷ್ಟು ಭಾರವಿದೆ ಹೇಳಬಲ್ಲಿರಾ’? ವಿದ್ಯಾರ್ಥಿಗಳೆಲ್ಲಾ ಉತ್ತರವನ್ನು ಕೂಗಿ ಹೇಳಲು ಪ್ರಾರಂಭಿಸಿದರು. 100 ಮಿ.ಲೀ., 200 ಮಿ.ಲೀ. ಹೀಗೆ ಸಾಗಿತ್ತು ಉತ್ತರಗಳ ಸಂಖ್ಯೆ. ಒಂದೆರಡು ನಿಮಿಷ ಮೌನದ ಅನಂತರ, ‘ನನ್ನ ಪ್ರಕಾರ ನೀರಿನ ಲೋಟದ ಭಾರ ಈಗ ಅಷ್ಟು ದೊಡ್ಡ ವಿಷಯವಲ್ಲ, ಈ ಲೋಟವನ್ನು ನಾನೆಷ್ಟು ಹೊತ್ತು ಹಿಡಿದಿರುತ್ತೇನೆ ಎನ್ನುವುದರ ಮೇಲೆ ಭಾರ ನಿರ್ಧರಿತವಾಗುತ್ತದೆ. ನಾನು ಇದನ್ನು ಒಂದೆರಡು ನಿಮಿಷ ಹಿಡಿದರೆ ಇದು ಹಗುರವಾದ ಲೋಟವೇ ಸರಿ. ನಾನು ಈ ನೀರಿನ ಲೋಟವನ್ನು 1 ಗಂಟೆ ಹಿಡಿಯಬೇಕೆಂದರೆ ನನ್ನ ಕೈ ನೋಯಲು…
ಪ್ರಿಯ ಓದುಗರೇ, ನಾನು ಬಹಳ ಆತಂಕ ಹಾಗೂ ಬೇಗುದಿಯಿಂದ ಈ ಲೇಖನ ಬರೆಯುತ್ತಿದ್ದೇನೆ. ಒಂದು ತಿಂಗಳ ಹಿಂದೆ ಕೇರಳದ ಒಂದು ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆಯ 10 ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಬಹುಶಃ ಭಾರತದಲ್ಲೇ ಇದು ಪ್ರಪ್ರಥಮ ಘಟನೆ ಎಂದರೂ ತಪ್ಪಿಲ್ಲ. ಏಳೆಂಟು ಬೈಕುಗಳಲ್ಲಿ ನಾಲ್ಕೈದು ಮಕ್ಕಳಂತೆ ಏರಿ ಇಂದು ಮಾರ್ಗ ನಮ್ಮದೇ ಎಂಬಂತೆ ಚಿತ್ರವಿಚಿತ್ರ ಕಸರತ್ತಿನ ಶರವೇಗದ ಪಯಣ. ಅಷ್ಟು ಮಾತ್ರವಲ್ಲದೆ ಎರಡು ವಿದೇಶ ನಿರ್ಮಿತ ಆಟದ ಕಾರುಗಳನ್ನು ಬಾಡಿಗೆಗೆ ತಂದು ಸೀಟ್ ಬೆಲ್ಟ್, ಹೆಲ್ಮೆಟ್ ಹಾಕದೆ ಅದರಲ್ಲಿ ಕುಣಿಯುತ್ತಾ ಪಯಣ. ಇವರ್ಯಾರಿಗೂ ಲೈಸೆನ್ಸ್ ಇಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮಾರ್ಗದಲ್ಲಿ ಸಾಗುವ ಇತರ ವಾಹನ ಚಾಲಕರು ಹೆದರಿ ಬದಿಯಲ್ಲೇ ನಿಲ್ಲಿಸ ಬೇಕಾಯಿತು. ಪಾದಚಾರಿಗಳಂತೂ ಬದುಕಿದೆಯಾ ಬಡಜೀವವೇ ಎಂಬಂತೆ ಸಿಕ್ಕಸಿಕ್ಕಲ್ಲಿ ಅವಿತುಕೊಂಡರು. ಪೊಲೀಸರು ಕೈ ತೋರಿಸಿದರೂ ಕ್ಯಾರೇ ಇಲ್ಲದೆ ಚೈತ್ರಯಾತ್ರೆ ನಾಗಲೋಟದಿಂದ ಸಾಗುತ್ತಿತ್ತು. ಮುಂದಿನ ಪೊಲೀಸರಿಗೆ ಸಂದೇಶ ಬಂದೊಡನೆ ಮಾರ್ಗಕ್ಕೆ ಬ್ಯಾರಿಕೇಡ್ ಹಾಕಿ ತಡೆದು ವಾಹನಗಳನ್ನು ವಶಪಡಿಸಿ, ಮಕ್ಕಳನ್ನು…
ವಿದ್ಯಾಗಿರಿ: ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯದ ಎಲ್ಲಾ ಆಯಾಮಗಳಲ್ಲಿ ನಿಪುಣತೆ ಹೊಂದುವುದು ಅವಶ್ಯಕ ಎಂದು ಲೆಕ್ಕಪರಿಶೋಧಕ ಎಂ. ಉಮೇಶ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿಚಾರಸಂಕಿರಣ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗ್ಗತ್ತು ಒಂದು ರಣರಂಗ. ಇದ್ದನ್ನು ಎದುರಿಸುವ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಆಗಿದ್ದಾಗಲೇ ಸಿದ್ಧ ಪಡಿಸಿಕೊಳ್ಳಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರ ಕೃತಕ ಬುದ್ಧಿಮತ್ತೆ (ಏಐ) ವಾಣಿಜ್ಯ ವಿದ್ಯಾರ್ಥಿಗಳಿಗೆ ಸವಾಲಾಗಿ ರೂಪುಗೊಂಡಿದ್ದು, ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಂಡರೆ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರಿಸ ಬಹುದು ಎಂದರು. ವಾಣಿಜ್ಯ ವಿದ್ಯಾರ್ಥಿಗಳು ಖಾತೆ, ತೆರಿಗೆ ಹಾಗೂ ಈ ಕ್ಷೇತ್ರದ ಇತರ ವಿಷಯಗಳ ಕುರಿತು ತಿಳಿಯುವುದು ಹಾಗೂ ವಾಣಿಜ್ಯದ ಎಲ್ಲಾ ಆಗುಹೋಗುಗಳನ್ನು ಗಮನಿಸಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳ ನಿಜವಾದ ಜೀವನ ಪ್ರಾರಂಭವಾಗುತ್ತಿದೆ. ಈ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ನಿಮ್ಮ ಮೇಲಿನ ನಂಬಿಕೆಯನ್ನು…
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ಅವರ ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಕಾಮಗಾರಿಗಳ ಕುರಿತು ಚರ್ಚಿಸಿದರು. ಶಿರಾಡಿ ಘಾಟಿಯ ಮೂಲಕ ಹಾದು ಹೋಗುವ ಮಂಗಳೂರು ಬೆಂಗಳೂರು ನಡುವಿನ ರಸ್ತೆ ಪ್ರಯಾಣದ ಅವಧಿಯನ್ನು ಕಡಿಮೆ ಮತ್ತು ಸುಗಮಗೊಳಿಸಲು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಅಧ್ಯಯನ ನಡೆಸುವಂತೆ ಕೇಳಿಕೊಂಡರು.
“ಕನ್ನಡದಲ್ಲಿ ಓದುಗರಿಲ್ಲ ಅನ್ನುವುದು ಸುಳ್ಳು. ಅಂಥವರನ್ನು ಹುಡುಕಿ ಪುಸ್ತಕ ಮುಟ್ಟಿಸುವುದಲ್ಲ. ಪುಸ್ತಕಗಳನ್ನು ಅವರು ಮುಟ್ಟುವ ಹಾಗೆ ಮನುಷ್ಯ ಎಲ್ಲೆಲ್ಲಿ ಓಡಾಡುತ್ತಾನೆ ಅಲ್ಲೆಲ್ಲಾ ಪುಸ್ತಕಗಳೇ ಇರಬೇಕು. ಆಗ ಅವುಗಳನ್ನು ತಗೊಳ್ಳದೆ ಜನ ಎಲ್ಲಿ ಹೋಗುತ್ತಾರೆ?” ಹೀಗೆನ್ನುತ್ತಾರೆ ಕ್ರಿಯೇಟಿವ್ ಪಿಯು ಕಾಲೇಜಿನ ಪ್ರಾಚಾರ್ಯ ಅಶ್ವಥ್. ಈ ಕಾಲೇಜು ಇರುವುದು ಕಾರ್ಕಳದ ನಡುನಾಗರಿಕ ಜಗತ್ತಿನಿಂದ ಸ್ವಲ್ಪ ದೂರದ ಹಸಿರು ಪರಿಸರದಲ್ಲಿ. ಕರ್ನಾಟಕದ ಪಿಯು ಕಾಲೇಜುಗಳಿಗೆ ಅದರಲ್ಲೂ ಕರಾವಳಿಯ ಕಾಲೇಜುಗಳಿಗೆ ಸಾಮಾನ್ಯವಾಗಿ ಇರುವುದು ಒಂದೇ ಪ್ರಭೆ. ಅದು ವಿಜ್ಞಾನ ಮತ್ತು ಲೆಕ್ಕಕೇಂದ್ರಿತ ಪ್ರಖರತೆ. ಡಾಕ್ಟರ್ ಇಂಜಿನಿಯರ್ ಶ್ರೇಣಿಗೆ ಸುಲಭದಲ್ಲಿ ಮಕ್ಕಳನ್ನು ಎತ್ತಿ ಹಾಕುವ ಹತ್ತಾರು ಕಾಲೇಜುಗಳು ನಮ್ಮ ಕರಾವಳಿಯಲ್ಲಿವೆ. ಪಿಯು ಫಲಿತಾಂಶಗಳು ಪ್ರಕಟವಾಗುವ ಹೊತ್ತಿಗೆ ಕರಾವಳಿಯ ಅಡ್ಡಡ್ಡ ರಸ್ತೆಗಳಲ್ಲಿ ಒಮ್ಮೆ ಓಡಾಡಿ ನೋಡಿ. ಗೆದ್ದ ಮಕ್ಕಳ ಫೋಟೋಗಳಡಿಯಲ್ಲಿ ಅವರು ಪಡೆದ ಅಂಕಗಳ ಪಟ್ಟಿ ರಾರಾಜಿಸುತ್ತವೆ. ವಿಚಿತ್ರ ಎಂದರೆ ಆ ಮಗುವಿನ ಚಿತ್ರದಡಿಯಲ್ಲಿ ಭಾಗಶ: ಸೈನ್ಸ್ ಮ್ಯಾಕ್ಸ್ ಸಬ್ಜೆಕ್ಟ್ ಗಳ ಅಂಕಗಳಿರುತ್ತವೆ ಹೊರತು ಕನ್ನಡ ಭಾಷೆಯಲ್ಲಿ ಮಗು ಪಡೆದ…
ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ “ಧರ್ಮದೈವ” ಸಿನಿಮಾದ ಪೋಸ್ಟರನ್ನು ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್ ಅವರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿದರು. ತುಳುನಾಡಿನ ಆರಾಧನೆ, ಭಕ್ತಿ ಶಕ್ತಿಯನ್ನು ಒಳಗೊಂಡ ದೈವಾರಾಧನೆಯ ಬಗ್ಗೆ ಜನರಿಗೆ ಅಪಾರ ಆಸಕ್ತಿ ನಂಬಿಕೆ ಇದೆ. ಕಾಂತಾರದ ಬಳಿಕ ದೈವಕ್ಕೆ ಮಹತ್ವ ನೀಡುವ ಮತ್ತು ದೈವದ ಕಾರಣಿಕವನ್ನು ಪ್ರತಿಬಿಂಬಿಸುವ “ಧರ್ಮದೈವ” ಸಿನಿಮಾ ಜುಲೈ 5ರಂದು ತೆರೆ ಕಾಣಲಿದೆ. ತುಳುನಾಡಿನ ಕತೆ, ದೈವದ ಕತೆ, ಇದು ತುಳುವರ ನಂಬಿಕೆಯನ್ನು ಉಳಿಸಿ ಭಕ್ತಿಭಾವದ ಕತೆ. ಇದನ್ನು ಮನೆಮಂದಿ ವೀಕ್ಷಿಸಬಹುದಾಗಿದೆ. ಈಗಾಗಲೇ ಸಿನಿಮಾದ ಟೀಸರ್ ನೋಡಿದೆ. ಕಾಂತಾರದ ಬಳಿಕ ದೈವಭಕ್ತಿಯ ಧರ್ಮದೈವ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು ಪ್ರೋತ್ಸಾಹಿಸಿ ಎಂದು ಯುಟಿ ಖಾದರ್ ತಿಳಿಸಿದರು. ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ ನಿತಿನ್ ರೈ ಮತ್ತು ನಿರ್ಮಾಪಕ ರಾಕೇಶ್ ಶೆಟ್ಟಿಯವರನ್ನು ಅಭಿನಂದಿಸಿ ಸಿನಿಮಾಕ್ಕೆ…