Author: admin
ಇತಿಹಾಸ ಪ್ರಸಿದ್ಧ ಕಾವೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮಾರ್ಚ್ 6 ರಂದು ಬೆಳಗ್ಗೆ ಗಂಟೆ 11ರಿಂದ 12ರವರೆಗೆ ನವೀಕೃತ ಗರ್ಭಗೃಹದಲ್ಲಿ ಮಹಾಲಿಂಗೇಶ್ವರ ದೇವರ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಮಾರ್ಚ್ 9 ರಂದು ಬೆಳಗ್ಗೆ 8:10ರಿಂದ 8:40ರ ಮೀನ ಲಗ್ನ ಸುಮುಹೂರ್ತದಲ್ಲಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕವು ಜರುಗಲಿರುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಊರಿನ ಜನರು ಪ್ರಾಕೃತಿಕ ವಿಕೋಪ ಮತ್ತು ಸಂಕಷ್ಟಗಳಿಂದ ಮುಕ್ತವಾಗಿ ನೆಮ್ಮದಿಯ ಜೀವನವನ್ನು ನಡೆಸಲು ನಮ್ಮ ದೇವಸ್ಥಾನ, ದೈವಸ್ಥಾನ ಹಾಗೂ ಆರಾಧನಾ ಕೇಂದ್ರಗಳಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಪುಣ್ಯಕಾರ್ಯಗಳು ಕಾರಣೀಭೂತವಾಗಿವೆ. ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುವ ಪುಣ್ಯ ಕ್ಷೇತ್ರ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎಂಬುದು ಇತಿಹಾಸ. ಸುಮಾರು 800 ವರ್ಷಕ್ಕೂ ಮಿಕ್ಕಿದ ಇತಿಹಾಸವಿದೆ. ಕಾವೂರು, ಬಂಗ್ರಕೂಳೂರು, ಪಂಜಿಮೊಗರು, ಪಡುಕೋಡಿ, ಕುಂಜತ್ತಬೈಲ್, ಮರಕಡ, ಪಡುಶೆಡ್ಡೆ ಜಾರ ಎಂಬ ಏಳು ಗ್ರಾಮಗಳಿಗೆ ಮಾಗಣೆ ದೇವಾಲಯವಾಗಿರುವ ಈ ದೇವಸ್ಥಾನವು…
ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ, ಜಪಾನಿನ ಕುಮಮೋಟೊ ವಿವಿ ಹಾಗೂ ಬೆಂಗಳೂರಿನ ಬೆಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೊ. ಲಿ ಸಹಯೋಗದಲ್ಲಿ ಸಾಮಾಗ್ರಿಗಳ ಬೆಸುಗೆ (ವೆಲ್ಡಿಂಗ್) ಹಾಗೂ ಅದರ ಉತ್ಪಾದನೆಯಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ೨ ದಿನದ ವಿಚಾರ ಸಂಕಿರಣ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಕುಮಮೋಟೊ ವಿವಿಯ ಪ್ರಾಧ್ಯಾಪಕ ಡಾ. ಶುಯಿಚಿ ತೋರಿ, ಸೂಕ್ಷ್ಮ ಹಾಗೂ ದೊಡ್ಡ ಪ್ರಮಾಣದ ನ್ಯಾನೊ ಉಪಕರಣಗಳು ಮೈಕ್ರೋಎಲೆಕ್ಟ್ರಾನಿಕ್, ಆಟೋಮೊಬೈಲ್ಗಳು, ವಿಮಾನ ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನ ವಲಯದಲ್ಲಿ ವೆಲ್ಡಿಂಗ್, ಬ್ರೇಝಿಂಗ್ ಮತ್ತು ಸೋಲ್ಡರಿಂಗ್ ತಂತ್ರಜ್ಞಾನಗಳು ಬಹುಮುಖ್ಯ ನಿರ್ಣಾಯಕ ಅಂಶಗಳಾಗಿವೆ.ಈ ಕ್ಷೇತ್ರದಲ್ಲಿನ ಹೊಸ ರೀತಿಯ ಬೆಳವಣಿಗೆ ಹಾಗೂ ನಾವೀನ್ಯತೆಯು ಉತ್ಪನ್ನಗಳ ಗುಣಮಟ್ಟ, ದರ ಹಾಗೂ ಉತ್ಪಾದಕತೆಯನ್ನು ಸುಧಾರಿಸಲು ಅನುಕೂಲಕರವಾಗಿದೆ ಎಂದರು. ವಿಚಾರ ಸಂಕಿರಣದಲ್ಲಿ ‘ಎಕ್ಸ್ಪ್ಲೋಸಿವ್ ರಿಯಾಕ್ಟಿವ್ ’ ವಿಷಯದ ಕುರಿತು ಡಿಆರ್ಡಿಒ ವಿಜ್ಞಾನಿ ಡಾ. ಸುರೇಶ್ ಕುಲಕರ್ಣಿ, ಎಕ್ಸ್ಪ್ಲೋಸಿವ್ ರಿಯಾಕ್ಟಿವ್ ಸಾಮಾಗ್ರಿಗಳ ಉತ್ಪಾನೆಯ ಕುರಿತು ಪ್ರಾಧ್ಯಾಪಕ ಡಾ. ಹೊಕಮೋಟೊ, ವೆಲ್ಡಿಂಗ್ಗೆ ಬಳಸುವ ಎಕ್ಸ್ಪ್ಲೋಸಿವ್ ಕ್ಲಾಡಿಂಗ್ ಕುರಿತು…
ಅನಾದಿಕಾಲದಿಂದಲೂ ಅತಿಥಿ ಸತ್ಕಾರಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದೇವೆ. ‘ಅತಿಥಿ ದೇವೋ ಭವ’ ಎನ್ನುವಂತೆ ಅತಿಥಿಗಳನ್ನು ದೇವರಂತೆ ಕಾಣುತ್ತೇವೆ. ಹಿಂದೆಲ್ಲಾ ಈಗಿನಂತೆ ತಿಜೋರಿ, ಕಪಾಟುಗಳಿರಲಿಲ್ಲ. ಆಗೇನಿದ್ದರೂ ಕಿರಾಣಿ ಡಬ್ಬಗಳಲ್ಲಿ ನಗ, ನಾಣ್ಯಗಳನ್ನು ಬಚ್ಚಿಡುತ್ತಿದ್ದರು. ಬಾಲ ಗಂಗಾಧರನಾಥ ತಿಲಕರ ಮನೆಯೂ ಅದಕ್ಕೆ ಹೊರತಲ್ಲ. ಒಮ್ಮೆ ಬೆಳ್ಳಂಬೆಳಿಗ್ಗೆಯೇ ಭಿಕ್ಷುಕನೊಬ್ಬ ತಿಲಕರ ಮನೆಗೆ ಬಂದ. ಮನೆ ಮುಂದೆ ನಿಂತು ಭವತೀ ಭಿಕ್ಷಾಂ ದೇಹಿ ಎಂದು ಕೂಗಿದ. ತಿಲಕರ ಮನೆಯ ಸೊಸೆ ಹೊರಗೆ ಬಂದಳು. ಅಕ್ಕಿಯ ಡಬ್ಬ ಆಕೆಯ ಕೈಯಲ್ಲಿತ್ತು. ಬಂದವಳೇ ಹಿಂದೆ ಮುಂದೆ ನೋಡದೆ ಡಬ್ಬವನ್ನೇ ಆ ಭಿಕ್ಷುಕನ ಚೀಲಕ್ಕೆ ಸುರಿದಳು. ಅಚಾನಕ್ ಎನ್ನುವಂತೆ ಆ ಡಬ್ಬದಲ್ಲಿ ಹುದುಗಿಸಿಟ್ಟಿದ್ದ ಮುತ್ತಿನ ಮೂಗುತಿಯೂ ಸಹ ಭಿಕ್ಷುಕನ ಚೀಲದೊಳಗೆ ಬಿತ್ತು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡುತ್ತಾ ನಿಂತುಕೊಂಡರು. ಯಾರೊಬ್ಬರಿಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಇತ್ತ ಭಿಕ್ಷುಕನಿಗೋ ಸಂಕೋಚ ಜಾರಿಬಿದ್ದ ಮೂಗುತಿಯನ್ನು ಹೇಗೆ ಹಿಂದಿರುಗಿಸುವುದು? ಹಿಂದಿರುಗಿಸಿದರೆ ಅವರು ಏನಂದುಕೊಳ್ಳುತ್ತಾರೋ ಎನ್ನುವ ಜಿಜ್ಞಾಸೆ. ಇತ್ತ ಸೊಸೆಗೂ ಅದೇ ಆತಂಕ. ತಾನಾಗಿ ದಾನ ಕೊಟ್ಟ…
ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾದ ಐರ್ ಬೈಲ್ ಆನಂದ ಶೆಟ್ಟಿಯವರಿಗೆ ಬೆಂಗಳೂರು ಬಂಟರ ಸಂಘದ ವತಿಯಿಂದ ಫೆಬ್ರವರಿ 9 ರಂದು ಯಕ್ಷಗಾನ ಮತ್ತು ರಂಗ ತರಬೇತಿ ಸಮಿತಿ ಸಾದರ ಪಡಿಸಿದ ಯಕ್ಷಗಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ, ವಿಜಯನಗರ ಶಾಸಕರಾದ ಕೃಷ್ಣಪ್ಪ, ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ, ಬಿಬಿಎಂಪಿ ಅಡಿಷನಲ್ ಕಮಿಷನರ್ ಅಜಿತ್ ಹೆಗ್ಡೆ ಶಾನಾಡಿ ಆಗಮಿಸಿದ್ದರು. ಬೆಂಗಳೂರು ಬಂಟರ ಸಂಘದ ಅದ್ಯಕ್ಷ ಸಿಎ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಜಪ್ತಿ ಸಂತೋಷ್ ಶೆಟ್ಟಿ, ಮಹಿಳಾ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಗೌರವ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಲಾಡಿ, ಖಜಾಂಚಿ ಅಶೋಕ ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಆನಂದ ಶೆಟ್ಟಿ ಅವರ ಸುಧೀರ್ಘ 49 ವರ್ಷದ ಯಕ್ಷಗಾನ ಕಲಾ ಸೇವೆ ಮೆಚ್ಚಿ ವಿಜಯನಗರ ಶಾಸಕ ಕೃಷ್ಣಪ್ಪ ಅವರು ವೇದಿಕೆಯಲ್ಲಿ 1ಲಕ್ಷದ ಚೆಕ್ ಹಾಗೂ ಸಂಘದ ವತಿಯಿಂದ 25000 ರೂಪಾಯಿ ನೀಡಿ ಗೌರವಿಸಿದರು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ ಬಿ ಆರ್ಕ್ ಮತ್ತು ಜೆಇಇ ಬಿ ಪ್ಲಾನಿಂಗ್ನ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಈ ವರ್ಷವೂ ಅತ್ಯುನ್ನತ ಫಲಿತಾಂಶ ಪಡೆದುಕೊಂಡಿದೆ. ಬಿ ಆರ್ಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ 99.4223451 ಪಸೆರ್ಂಟೈಲ್, ಸಾಚಿ ಶಿವಕುಮಾರ್ ಕಡಿ 99.3362631 ಪಸೆರ್ಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ. ಬಿ ಪ್ಲಾನಿಂಗ್ ಫಲಿತಾಂಶದಲ್ಲಿ ತೇಜಸ್ ವಿ ನಾಯಕ್ 99.5751775 ಪಸೆರ್ಂಟೈಲ್ ಗಳಿಸಿದ್ದಾರೆ. ಹೀಗೆ ಒಟ್ಟು ಫಲಿತಾಂಶದಲ್ಲಿ 99 ಪಸೆರ್ಂಟೈಲಿಗಿಂತ ಅಧಿಕ 2 ವಿದ್ಯಾರ್ಥಿಗಳು, 97 ರಿಂದ ಅಧಿಕ 3, 95ಕ್ಕಿಂತ ಅಧಿಕ 8 ಹಾಗೂ 16 ವಿದ್ಯಾರ್ಥಿಗಳು 90 ಪಸೆರ್ಂಟೈಲಿಗಿಂತ ಅಧಿಕ ಫಲಿತಾಂಶವನ್ನು ದಾಖಲಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದದವರು ಹಾಗೂ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಸಂಯೋಜಕರಾದ ಸುಮಂತ್ ದಾಮ್ಲೆ ರವರು ಅಭಿನಂದಿಸಿ ಶ್ಲಾಘಿಸಿದ್ದಾರೆ.
ತಾಯಿಯ ಹೆಸರಿನ ಟ್ರಸ್ಟ್ ನಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಾ, ರಕ್ತದಾನದಂತಹ ಮಹತ್ಕಾರ್ಯಕ್ಕೆ ಕೈ ಹಾಕಿರುವುದು ಅತ್ಯಂತ ಶ್ರೇಷ್ಠ ಕಾರ್ಯಕ್ರಮ ಮತ್ತು ಸಮಾಜಕ್ಕೆ ಮಾದರಿಯಾದ ಒಂದು ಚಿಂತನೆ ಎಂದು ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನ ಛೇರ್ಮನ್ ಎಂ ಮಹೇಶ್ ಹೆಗ್ಡೆ ಹೇಳಿದರು. ಅವರು ಬಿದ್ಕಲ್ ಕಟ್ಟೆಯ ಕೆಪಿಎಸ್ ಪ್ರೌಢ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ನ ಪ್ರವರ್ತಕ ಮೊಳಹಳ್ಳಿ ದಿನೇಶ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ಮೂರು ವ್ಯಕ್ತಿಗಳ ಜೀವ ಉಳಿಸಬಹುದಾದರೆ ಅಂತಹ ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಇನ್ನೊಂದಿಲ್ಲ ಎಂಬುದನ್ನು ಮನಗಂಡು ನನ್ನ ಹುಟ್ಟು ಹಬ್ಬದ ದಿನದಂದು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೆನೆ. ಜಾತಿ ಧರ್ಮ ಲಿಂಗ ಭೇದವಿಲ್ಲದೆ ಮಾಡಬಹುದಾದ ಏಕೈಕ ದಾನ ಅಂದರೆ ಅದು ರಕ್ತದಾನ. ಸಮಾಜದ ಎಲ್ಲಾ ಯುವಕ ಯುವತಿಯರು ರಕ್ತದಾನ ಮಾಡುವ ಮೂಲಕ ಮನುಷ್ಯನ ಜೀವವನ್ನು ಕಾಪಾಡುವ ಪಣತೊಡಬೇಕಾಗಿದೆ ಎಂದರು. ಇದೇ ಸಂದರ್ಭ…
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ರವರು ಸನ್ಮಾನಿಸಿ, ಗೌರವಿಸಿದರು. ಬ್ಯಾಂಕಿನ ನಿರ್ದೇಶಕರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಲಿಗ್ರಾಮದ ವಾಣಿಜ್ಯ ಸಂಕೀರ್ಣದಲ್ಲಿ ಮಾಂಸಾಹಾರಿ ಹೋಟೆಲ್ ಫೆಬ್ರವರಿ 21ರಂದು ಉದ್ಘಾಟನೆಗೊಂಡಿತು. ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ ಕುಂದರ್ ಹೋಟೆಲ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯಸ್ಥ ವಿಜಯ ಶೆಟ್ಟಿ ಹವರಾಲು ಮಾತನಾಡಿ, ಸಂಸ್ಥೆ ಮಾಂಸಾಹಾರಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದು ರಾಜ್ಯದ ನಾಲ್ಕು ಶಾಖೆಗಳನ್ನು ಹೊಂದಿದೆ ಎಂದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು, ಚಿತ್ರ ಸಾಹಿತ್ಯ ರಚನೆಗಾರ ಪ್ರಮೋದ್ ಮರವಂತೆ, ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಮ್, ಝೀ ಕನ್ನಡ ಮಹಾನಟಿಯ ಗಗನ, ಚಿತ್ರನಟ ಕವೀಶ್ ಶೆಟ್ಟಿ, ಪ್ರತಿಮಾ ನಾಯ್ಕ್, ಉದ್ಯಮಿ ವೆಂಕಟೇಶ್, ಕಟ್ಟಡ ಮಾಲಕ ಅಯ್ಯಪ್ಪ ರೋಟರಿ ಕೋಟ ಸಾಲಿಗಾಮ ಅಧ್ಯಕ್ಷ ತಿಮ್ಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಅಲ್ತಾರು ಕಾರ್ಯಕ್ರಮ ನಿರೂಪಿಸಿದರು.
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ಜಪಾನ್ನ ಕುಮಾಮೋಟೋ ವಿಶ್ವಿವಿದ್ಯಾಲಯದ ಸಹಯೋಗದಲ್ಲಿ, ಫೆಬ್ರವರಿ 27 ಮತ್ತು 28ರಂದು ಎರಡು ದಿನಗಳ ಅಂತರಾಷ್ಟ್ರೀಯ ವಿಚಾರಸಂಕಿರಣವನ್ನು ಹಮ್ಮಿಕೊಂಡಿದೆ. ಈ ವಿಚಾರಸಂಕಿರಣದಲ್ಲಿ ದೇಶ ವಿದೇಶಗಳಿಂದ ಸುಮಾರು 40ಕ್ಕೂ ಹೆಚ್ಚು ವಿಷಯ ತಜ್ಞರು ಹಾಗೂ ಪ್ರತಿನಿಧಿಗಳು ಆಗಮಿಸಿ ಪ್ರಬಂಧವನ್ನು ಮಂಡಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್ ಹಾಗೂ ವಿಚಾರಸಂಕಿರಣದ ಸಂಯೋಜಕರು, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಸತ್ಯನಾರಾಯಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
54 ವರ್ಷಗಳ ಇತಿಹಾಸವಿರುವ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ (KGMOA)ದ 2027-29ರ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಸಮರ್ಥ ನಾಯಕ, ಉಡುಪಿ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ. ನಿಕಿನ್ ಸಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯವರಾದ ಡಾ. ನಿಕಿನ್ ಶೆಟ್ಟಿ ಅವರು, ಕಂದಾವರ ಚಂದ್ರಶೇಖರ್ ಶೆಟ್ಟಿ ಹಾಗೂ ಗಿಳಿಯಾರು ನಿರ್ಮಲ ಶೆಟ್ಟಿ ಅವರ ಪುತ್ರ. ಕೋಲಾರದ ಎಸ್.ಡಿ.ಯು.ಎಂ.ಸಿ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿರುವ ನಿಕಿನ್ ಮಣಿಪಾಲದ ಕೆಎಂಸಿಯಲ್ಲಿ ಜನರಲ್ ಮೆಡಿಸಿನ್ ನಲ್ಲಿ ಎಂ.ಡಿ. ಪಡೆದಿದ್ದಾರೆ. 1998ರಲ್ಲಿ ಸೇವೆಗೆ ಸೇರಿರುವ ಡಾ. ನಿಕಿನ್ ಶೆಟ್ಟಿಯವರು ಕೊಕ್ಕರ್ಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಹೆಬ್ರಿಯ ಸಿ.ಹೆಚ್.ಸಿಯಲ್ಲಿ, ಬಳಿಕ ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಹಿರಿಯ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಈ ಹಿಂದೆ ಉಡುಪಿ ಜಿಲ್ಲಾ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದಲ್ಲಿ ಎರಡು…















