2024- 25 ನೆಯ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಸಾಲಿನ ಐ.ಸಿ.ಎಸ್.ಇ ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಥಾಣೆಯ ಸುಲೋಚನಾ ದೇವಿ ಸಿಂಗಾನೀಯ ಸ್ಕೂಲಿನ ವಿದ್ಯಾರ್ಥಿನಿ ಶ್ರಾವ್ಯ ಎಸ್ ಶೆಟ್ಟಿ ಅವರು ಶೇಕಡ 94.02 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಈಕೆ ಥಾಣೆ ಪಶ್ಚಿಮದ ವರ್ತಕ್ ನಗರದ ನಿವಾಸಿಯಾಗಿದ್ದು, ಸುರತ್ಕಲ್ ಮಧ್ಯ ಕುಂಜರ ಬಾಳಿಕೆ ಸಂದೀಪ್ ಎಸ್ ಶೆಟ್ಟಿ ಮತ್ತು ನಂದಬೆಟ್ಟು ಮಮತಾ ಎಸ್ ಶೆಟ್ಟಿ ದಂಪತಿಯ ಪುತ್ರಿ ಹಾಗೂ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ ಕೆ ಶೆಟ್ಟಿಯವರ ಮೊಮ್ಮಗಳು.