ಬೆಳಗಾವಿ ಬಂಟರ ಸಂಘದ 42ನೇ ವಾರ್ಷಿಕ ಮಹಾಸಭೆಯು ಬೆಳಗಾವಿ ಬಂಟರ ಭವನದಲ್ಲಿ ನವೆಂಬರ್ 22 ರಂದು ಭಾನುವಾರ ನಡೆಯಿತು. ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಬಂಟರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಈ ಸಂಧರ್ಭ ಅವಿರೋಧವಾಗಿ ನಡೆಯಿತು. ನೂತನ ಅಧ್ಯಕ್ಷರಾಗಿ ಸಮಾಜಸೇವಕರು ಹಾಗೂ ಉದ್ಯಮಿಗಳಾದ ಜಯಶೀಲ ಎನ್ ಶೆಟ್ಟಿ ಘಟಪ್ರಭಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಉಳ್ತೂರು ಸಂತೋಷ್ ಶೆಟ್ಟಿಯವರನ್ನು ಸರ್ವಾನುಮತದಿಂದ ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು.






ಈ ಸಂದರ್ಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷರು, ಗೌರವಾಧ್ಯಕ್ಷರಾದ ವಿಠಲ್ ಎಸ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ವಿಜಯ್ ಎಂ ಶೆಟ್ಟಿ, ಮಾಜಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಹಿಡ್ಕಲ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಮಾಜಿ ಪ್ರಧಾನ ಕಾರ್ಯದರ್ಶಿ ಚೇತನ್ ಶೆಟ್ಟಿ, ಮಾಜಿ ಖಜಾಂಚಿ ಪ್ರಣಯ ಆರ್ ಶೆಟ್ಟಿ, ಮಾಜಿ ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ, ಹಿರಿಯ ಸದಸ್ಯರಾದ ಬಾರ್ಕೂರು ನಡುಮನೆ ಜಯರಾಮ್ ಶೆಟ್ಟಿ, ಮಾಜಿ ಎಸ್ಪಿ ಜೆ.ಎಂ ಕರುಣಾಕರ ಶೆಟ್ಟಿ, ಯರಗಟ್ಟಿ ರತ್ನಾಕರ್ ಶೆಟ್ಟಿ, ಉದಯ್ ಶೆಟ್ಟಿ ಕಿಯೋನಿಕ್ಸ್, ಗೋಪಿನಾಥ್ ವಿ ಹೆಗ್ಡೆ, ಸುರೇಶ್ ವಿ ಶೆಟ್ಟಿ, ಶ್ರೀಧರ್ ಶೆಟ್ಟಿ, ಅಡ್ವಕೇಟ್ ರವೀಂದ್ರ ಎನ್ ಶೆಟ್ಟಿ, ಅಡ್ವಕೇಟ್ ಪ್ರಭಾಕರ್ ಶೆಟ್ಟಿ, ಮತ್ತು ಹಿರಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.


















































































































