ಗಣಿತ ನಗರ : ಶ್ರೀ ಮಹಾಗಣಪತಿ ದೇವಸ್ಥಾನ ಜ್ಞಾನಸುಧಾ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ದಿನಾಂಕ 28.05.2025ನೇಬುಧವಾರ, ಸಂಜೆ 6 ಗಂಟೆಗೆ, ಗಣಿತನಗರ ಜ್ಞಾನಸುಧಾ ಸಭಾಂಗಣದಲ್ಲಿ ನಡೆಯಲಿರುವ ಮೌಲ್ಯಸುಧಾ ಕಾರ್ಯಕ್ರಮದಲ್ಲಿ ಗದಗದ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಪ.ಪೂಜ್ಯ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು “ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ-ಜೀವನ ದರ್ಶನ” ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ದಿನಾಂಕ 29.05.2025ರ ಗುರುವಾರದಂದು ಪರಮಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸ್ಮರಣೆಯಲ್ಲಿ ಆಹ್ವಾನಿತ 12 ಭಜನಾ ತಂಡಗಳಿಂದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿಶೇಷ ಭಜನಾಸುಧಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
