Author: admin
ಬಂಟರ ಚಾವಡಿ ಪರ್ಕಳ (ರಿ) ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 29 ರಂದು ಆದಿತ್ಯವಾರ ಪರ್ಕಳದ ಸುರಕ್ಷಾ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಚಾವಡಿಯ ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರು ವಹಿಸಿದ್ದರು. ಸಂಘದ ಗೌರಾವಾಧ್ಯಕ್ಷರಾದ ಜಯರಾಜ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷರಾದ ವಸಂತ ಶೆಟ್ಟಿ ಹಿರೇಬೆಟ್ಟು, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಂಘಟನಾ ಕಾರ್ಯದರ್ಶಿ ದಿವಾಕರ ಶೆಟ್ಟಿ ಹೆರ್ಗ ವೇದಿಕೆಯಲ್ಲಿ ಆಸೀನರಾಗಿದ್ದರು. ವಸಂತ ಶೆಟ್ಟಿ ಚೆನ್ನಿಬೆಟ್ಟು ಪ್ರಾರ್ಥನೆ ಮಾಡಿದರು. ಅಧ್ಯಕ್ಷರಾದ ಅರುಣಾಚಲ ಹೆಗ್ಡೆಯವರು ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆಯವರು ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಮಾಜಿ ಕಾರ್ಯಾಧ್ಯಕ್ಷ ದಿನಕರ ಶೆಟ್ಟಿಯವರು ಸಂಘದ ಧ್ಯೇಯೋದ್ದೇಶದ ಬಗ್ಗೆ ಪ್ರಾಸ್ಥಾವಿಕವಾಗಿ ಮಾತಾಡಿದರು. ಕೋಶಾಧಿಕಾರಿ ವಸಂತ ಶೆಟ್ಟಿ ಚೆನ್ನಿಬೆಟ್ಟು 2023-24ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ಮತ್ತು ಅದಕ್ಕೆ ಸಭೆಯ ಸದಸ್ಯರ ಅನುಮೋದನೆಯನ್ನು ಪಡೆದುಕೊಂಡರು. ಹಾಜರಿದ್ದ ಸದಸ್ಯರ ಅನುಮತಿ ಮೇರೆಗೆ 2024-25ನೇ…
ವಿದ್ಯಾಗಿರಿ : ಕಡ್ಡಾಯ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಜಾರಿ ಹೆಣ್ಣುಮಕ್ಕಳಿಗೆ ಶಾಲೆ ಆರಂಭ, ಶೇ100 ಪರಿಶುದ್ಧ ಶ್ರೀಗಂಧದ ಎಣ್ಣೆಯ ಸಾಬೂನು (ಮೈಸೂರು ಸ್ಯಾಂಡಲ್ ಸೋಪ್) ಉತ್ಪಾದನೆ, ಭಾರತದ ಮೊತ್ತಮೊದಲ ಚುನಾವಣೆ, ಮೊದಲ ವಿಮಾನ ನಿರ್ಮಾಣ, ಕುಟುಂಬ ಕಲ್ಯಾಣ ಯೋಜನೆ ಜಾರಿಗೊಳಿಸಿದ ಹೆಗ್ಗಳಿಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಸಿವಿಲ್ ಎಂಜಿನಿಯರ್, ಮೆಟ್ರೋ ಪೆÇಲಿಟನ್ ಇತಿಹಾಸಕಾರ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲ್ಯೂವೆನ್ಸರ್ ಧರ್ಮೇಂದ್ರ ಕುಮಾರ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ರೋಸ್ಟ್ರಮ್- ವಾಗ್ಮಿಗಳ ವೇದಿಕೆ’ ವತಿಯಿಂದ ಮಂಗಳವಾರ ನಡೆದ ‘ಕರ್ನಾಟಕದ ಇತಿಹಾಸ’ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವಿದ್ಯೆಗೆ ನೀಡಿದ ಪ್ರಾಮುಖ್ಯತೆ, ಪರಿಚಯಿಸಿದ ಲಸಿಕೆ, ಕುರುಡರಿಗಾಗಿ ಬ್ರೈಲ್ ಲಿಪಿ ತಂದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು. ಕನ್ನಂಬಾಡಿ ಕಟ್ಟೆಯ ನಿರ್ಮಾಣ, ಮಹಾಯುದ್ಧದ ಖರ್ಚು ಭರಿಸಿರುವುದು, ಸ್ವಾತಂತ್ರ್ಯದತ್ತ ಇಟ್ಟ ಹೆಜ್ಜೆ, ಸ್ವತಂತ್ರ ಭಾರತದಲ್ಲಿ ಸರ್ಕಾರ ರಚನೆಗೆ 30…
“ತುಳುನಾಡು ಮತ್ತು ತುಳುನಾಡಿನಾದ್ಯಂತ ಆರಾಧನೆಗೊಳ್ಳುತ್ತಿರುವ ಸಾರತ್ತೊಂಜಿ ದೈವಗಳು ಹಾಗೂ ಅರುವತ್ತಾರು ಕೋಟಿ ನಾಗಗಳು ಬೆರ್ಮೆರ್ ನ ಸೃಷ್ಟಿ” ಎಂಬುದು ತುಳುನಾಡಿನ ಮೂಲ ಧರ್ಮ ನಾಗ ಮೂಲ ಪರಂಪರೆಯ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂರು ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ, ನಾಗಾರಾಧನೆ ಹಾಗೂ ದೈವರಾಧನೆಗಳ ಹಿಂದಿರುವ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸ. “ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂದು ಬೆರ್ಮೆರ್ ನ ಪಾಡ್ದನ ಹಾಗೂ ದೈವಗಳ ಸಂಧಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ. “ತುಳುನಾಡು ಬಲಿಯೇಂದ್ರನ ರಾಜ್ಯ” ಎಂಬುದು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ತುಳುವರ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸ. ತುಳುನಾಡಿನಾದ್ಯಂತ ತುಳುವರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಆಟಿ ಅಮಾವಾಸ್ಯೆ, ಸೋಣ ಸಂಕ್ರಾಂತಿ ಹಾಗೂ ದೀಪಾವಳಿ ಅಮಾವಾಸ್ಯೆಯ ಧಾರ್ಮಿಕ ಆಚರಣೆಗಳು ಪ್ರಾಚೀನ ಕಾಲದಲ್ಲಿ ತುಳುನಾಡು ಬಲಿಯೇಂದ್ರನ ರಾಜ್ಯವಾಗಿತ್ತು ಎಂಬುದನ್ನು ನಿಸ್ಸಂದೇಹವಾಗಿ ದೃಢಪಡಿಸುತ್ತವೆ. ತುಳುವರ ನಂಬಿಕೆಯಂತೆ ಆಟಿ ಅಮಾವಾಸ್ಯೆಯ ದಿನ ಬಲಿಯೇಂದ್ರನ ಆಳು ಸೋಣ ತಿಂಗಳ ಸಂಕ್ರಮಣದಂದು ಬಲಿಯೇಂದ್ರನ ತಾಯಿ ಹಾಗೂ…
ಸಾಧನೆ ಎಂದರೆ ಯಾವುದೇ ವಿಷಯದಲ್ಲಿ ಪ್ರಯತ್ನ, ಕೌಶಲ ಮತ್ತು ಧೈರ್ಯದಿಂದ ಯಶಸ್ಸನ್ನು ಗಳಿಸುವುದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟ ಮತ್ತು ವಿಭಿನ್ನ ಪ್ರತಿಭೆಯಿರುತ್ತದೆ. ಹಾಗಾಗಿ ಸಾಧನೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಸಾಧಿಸಲು ಅಗತ್ಯವಾಗಿ ಇರಬೇಕಾದದ್ದು ಸ್ಪಷ್ಟತೆ. ಸ್ಪಷ್ಟತೆ ಸಾಧನೆಯ ಹಾದಿಗೆ ತಲುಪಲು ಸಹಕಾರಿಯಾಗಿರುತ್ತದೆ. ಸ್ಪಷ್ಟತೆ ಎಂದರೆ ವ್ಯಕ್ತಿ ತನ್ನ ಸಾಧ್ಯತೆ ಮತ್ತು ಮಿತಿಗಳನ್ನು ಅರಿತು, ಸ್ವಯಂ ಅವಲೋಕಿಸಿ ತನ್ನ ಸಾಧ್ಯತೆ ಮತ್ತು ಮಿತಿಗಳಿಗೆ ಅನುಸಾರವಾಗಿ ಸೂಕ್ತ ಕ್ಷೇತ್ರಗಳನ್ನು ಆಯ್ಕೆ ಮಾಡಿ ಸ್ಪಷ್ಟ ನಿಲುವು ತೆಗೆದುಕೊಂಡು ಅದರೆಡೆಗೆ ಪ್ರಾಮಾಣಿಕವಾಗಿ ಶ್ರಮಿಸುವುದು. ಆದರೆ ಇಂದಿನ ಯುವ ಜನಾಂಗ ಸಾಧನೆಯ ವಿಷಯದಲ್ಲಿ ತಾತ್ಕಾಲಿಕ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಯಾವುದೋ ಮೋಟಿವೇಷನಲ್ ವೀಡಿಯೋವನ್ನು ವೀಕ್ಷಿಸಿ ತಾತ್ಕಾಲಿಕವಾಗಿ ಎರಡು ದಿನ ಪ್ರೇರಣೆಗೊಂಡು ಮೂರನೆಯ ದಿನಕ್ಕೆ ಮೊದಲಿನಂತೆ ಅದೇ ಅಲಸ್ಯತನಕ್ಕೆ ಒಳಗಾಗುತ್ತಿದ್ದಾರೆ. ಇಂತವರನ್ನು ಆರಂಭಿಕ ವೀರರೆಂದು ಕರೆಯಬಹುದು. ಇದರಿಂದ ಯಶಸ್ಸು ದಕ್ಕುವುದಿಲ್ಲ. ಈ ರೀತಿಯ ತಾತ್ಕಾಲಿಕ ಪ್ರೇರಣೆ ಸಾಧನೆಗೆ ಪೂರಕವಲ್ಲ, ಹೆಚ್ಚಾಗಿ ಸಾಧನೆಗೆ ಸ್ಪೂರ್ತಿ ಮತ್ತು ಪ್ರೇರಣೆಗಿಂತ…
ಶ್ರೀ ಮೂಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿ ಭಾಂಡೂಪ್ : ‘ಅಜ್ಜ ಅಜ್ಜ ಕೊರಗಜ್ಜ’ ಯಕ್ಷಗಾನ ಪ್ರದರ್ಶನ, ಸಾಧಕರಿಗೆ ಸನ್ಮಾನ
ಯಕ್ಷಗಾನ ಕಲೆ ಅಂದರೆ ನಮ್ಮ ಭಾರತದ ಸಂಸ್ಕೃತಿಯನ್ನು ವಿಶ್ವವ್ಯಾಪಿ ಪಸರಿಸಿದ ಒಂದು ಶ್ರೇಷ್ಠ ಕಲೆ. ದೇವರ ಪೂಜೆಯೊಂದಿಗೆ ಆರಂಭವಾಗಿ ದೇವರ ಪೂಜೆಯೊಂದಿಗೆ ಮುಕ್ತಾಯಗೊಳ್ಳುವ ಕಲೆಯೊಂದಿದ್ದರೆ ಅದು ಯಕ್ಷಗಾನ ಕಲೆ. ಕಲಾವಿದರ ಮುಖಾಂತರ ಕಲೆಯ ಆರಾಧನೆಯೊಂದಿಗೆ ದೇವರನ್ನು ಸ್ಮರಿಸುವ, ಆರಾಧಿಸುವ ಕಲೆಯೊಂದಿದ್ದರೆ ಯಕ್ಷಗಾನ ಕಲೆ. ಅಂತಹ ಯಕ್ಷಗಾನ ಹಾಗೇ ತಾಳಮದ್ದಲೆ ಕಲೆಯನ್ನು ಉಳಿಸುವ ಕಾಯಕದಲ್ಲಿ ಕಳೆದ ಹಲವಾರು ವರ್ಷಗಳಿಂದ ತವರೂರ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ ಅಲ್ಲಲ್ಲಿ ಪ್ರತೀ ವರ್ಷ ಯಕ್ಷಗಾನ, ತಾಳಮದ್ದಳೆ ಕಲಾ ಪ್ರದರ್ಶನವನ್ನು ಆಯೋಜಿಸಿ, ಕಲಾ ರಸಿಕರನ್ನು ರಂಜಿಸುತ್ತಾ ಬಂದಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು. ಯಕ್ಷಗಾನ ಮತ್ತು ತಾಳಮದ್ದಲೆ ಕಲೆಯನ್ನು ರಕ್ಷಿಸುವಲ್ಲಿ ಮತ್ತು ಪೋಷಿಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಶ್ರಮ ಶ್ಲಾಘನೀಯ ಎಂದು ಘಾಟ್ಕೋಪರ್ ದೇವಾಲಯದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅಭಿಮಾನದ ನುಡಿಗಳನ್ನಾಡಿದರು. ಅವರು ಸೆಪ್ಟೆಂಬರ್ 21ರ ಶನಿವಾರ ಸಂಜೆ ನಾಹುರ್ ರಾಯಲ್ ಸೆಲೆಬ್ರೇಶನ್ ಹಾಲ್ ನಲ್ಲಿ ಶ್ರೀ ಮುಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿ ಭಾಂಡೂಪ್…
ಬಂಟರ ಸಂಘ ಪಡುಬಿದ್ರಿಯ ಆಶ್ರಯದಲ್ಲಿ ನೂತನವಾಗಿ ಆರಂಭಗೊಂಡ ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ಶ್ರೀನಾಥ್ ಹೆಗ್ಡೆ ನಡ್ಸಾಲು ಗುತ್ತು ಹಾಗೂ ನಿರ್ದೇಶಕರಾಗಿ ರವೀಂದ್ರನಾಥ ಜಿ.ಹೆಗ್ಡೆ, ಎರ್ಮಾಳು ಶಶಿಧರ ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಗುಂಡ್ಲಾಡಿ ಸುರೇಶ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಮಾಧವ ಸಿ. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ಸಂತೃಪ್ತಿ ಎಂ. ಶೆಟ್ಟಿ, ಶೋಭಾ ಜೆ. ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ 2024 : ಸೆಪ್ಟೆಂಬರ್ 28 ರಂದು ಟೀಂ ಐಲೇಸಾದಿಂದ ”ಕೂಜಿನ ಪಾಟು” ಹಾಡು ಬಿಡುಗಡೆ.
ನಿಟ್ಟೆ ವಿಶ್ವ ವಿದ್ಯಾಲಯ ಸೆಪ್ಟೆಂಬರ್ 28 ರಂದು ತುಳು ದಿನ ಮತ್ತು ತುಳುವಿನ ಖ್ಯಾತ ಕವಿ ಡಾ| ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ”ಅಮೃತ ನೆಂಪು” ಆಚರಿಸಲಿದ್ದು ಆ ಸಂದರ್ಭದಲ್ಲಿ ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಜೊತೆಗೆ ಸೇರಿಕೊಂಡು ಕೊರಗ ಭಾಷೆಯ ಮೊತ್ತ ಮೊದಲ ”ಕೂಜಿನ ಪಾಟು” ಎಂಬ ಹಾಡನ್ನು ಬಿಡುಗಡೆ ಮಾಡಲಿದೆ. ಇದೇ ಸಂದರ್ಭದಲ್ಲಿ ಅಮೃತರ ನೆನಪಿನಲ್ಲಿ ಅವರ ಕೈಬರಹದ ಗ್ರಂಥ ಗೊಂಚಲನ್ನು ನಿಟ್ಟೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವ ವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊಫೆಸರ್ ಡಾ. ಸತೀಶ್ ಕುಮಾರ್ ಭಂಡಾರಿ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಅಮೃತ ಸೋಮೇಶ್ವರರವರ ಪುತ್ರ, ಸಾಹಿತಿ ಡಾ. ಚೇತನ್ ಸೋಮೇಶ್ವರ್, ನಿಟ್ಟೆ ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ. ಗೋಪಾಲ್ ಮುಗೆರಾಯ ಮತ್ತು ಖ್ಯಾತ ಕನ್ನಡ ತುಳು ಸಂಗೀತ ನಿರ್ದೇಶಕ ವಿ ಮನೋಹರ್ ಭಾಗವಹಿಸುತ್ತಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲೂಣ್ಕರ್ ಮತ್ತು ನಿಟ್ಟೆ ವಿಶ್ವ ವಿದ್ಯಾಲಯದ…
ಕರ್ನಾಟಕ ಸಂಘ ಕತಾರ್ (ದೋಹಾ ಕತಾರ್ ನ ಭಾರತೀಯ ರಾಯಭಾರ ಕಚೇರಿಯ ಅಧೀನದಲ್ಲಿರುವ ಸಹವರ್ತಿ ಸಂಸ್ಥೆ) ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ 163 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ” ಅಭಿಯಂತರ ದಿನಾಚರಣೆ” ಯನ್ನು ೧೫ ಸೆಪ್ಟೆಂಬರ್ ೨೦೨೪ ರಂದು ಕತಾರ್ ನ ದೋಹಾದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಹಾಲ್ ನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕತಾರ್ ನ ಭಾರತೀಯ ರಾಯಭಾರಿ ಗೌರವಾನ್ವಿತ ಶ್ರೀ ವಿಪುಲ್ ಮತ್ತು ಗೌರವಾನ್ವಿತ ಅತಿಥಿಯಾಗಿ ಕಹ್ರಾಮಾ ವಿದ್ಯುತ್ ಪ್ರಸರಣ ವಿಭಾಗದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಮುಖ್ಯಸ್ಥರಾದ ಶ್ರೀ ಅಬ್ದುಲ್ಲಾ ಇಬ್ರಾಹಿಂ ವೈ.ಎ. ಫಖ್ರೂ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು. ನಂತರ ಭಾರತ ರತ್ನ ಸರ್ ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಕಿರು ವಿಡಿಯೋ ಪ್ರಸ್ತುತಿಯನ್ನು ನೀಡಲಾಯಿತು. ರವಿ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ…
ವೈದ್ಯನಾಗಬೇಕೆಂದು ಹೆತ್ತವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ವೈದ್ಯಕೀಯ ಕಾಲೇಜು ಆರಂಭಕ್ಕೆ ಸ್ವಲ್ಪ ಸಮಯವಿದೆ ಎಂದು ಸಮಯ ಕಳೆಯಲು ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದೆ. ಅಲ್ಲಿ ಕಲಾ ಕ್ಷೇತ್ರ ಆಕರ್ಷಿಸಿತು. ಹಾಡುಗಾರನಾದೆ, ನಟನಾದೆ, ಸಂಗೀತ ನಿರ್ದೇಶಕನಾದೆ. ಸಂಗೀತದ ಆಕರ್ಷಣೆಯಿಂದ ಬದುಕೇ ಬದಲಾಯಿತು ಎಂದು ಸಂಗೀತ ನಿರ್ದೇಶಕ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ| ಗುರುಕಿರಣ್ ಶೆಟ್ಟಿ ತಮ್ಮ ಸಾಧನೆಯ ಹಾದಿಯನ್ನು ತೆರೆದಿಟ್ಟರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ನಮ್ಮ ಬದುಕನ್ನು ನಾವೇ ವಿನ್ಯಾಸಗೊಳಿಸಬೇಕು. ಕನಸು ಕಟ್ಟುವ ಬದಲು ಇಷ್ಟವಾದ ಕೆಲಸವನ್ನು ಮಾಡುತ್ತಾ ಹೋಗಬೇಕು. ಸಂಗೀತವೇ ನನ್ನ ಮನಸ್ಸಿಗೆ ಖುಷಿ ನೀಡುವ ಕೆಲಸ. ಅದನ್ನು ನಿಷ್ಠೆಯಿಂದ ಮಾಡಿದ ಕಾರಣ ಯಶಸ್ಸು ಸಾಧ್ಯವಾಯಿತು ಎಂದರು. ಸರ್ಕಾರಿ ಕಾಲೇಜಿನಲ್ಲಿ ಕಲಿತ ಕಾರಣ ಎಲ್ಲರೊಂದಿಗೆ ಬೆರೆಯುವ ಗುಣ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವ ಛಲ ಬೆಳೆಯಿತು. ನನ್ನದೇ…
ಮಾಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರೊಫೆಸರ್ ನಾಗರತ್ನ ರಾವ್ ಮಾತನಾಡಿ, ಭಾಷೆ ಎಲ್ಲರನ್ನೂ ಒಗ್ಗೂಡಿಸುವ ಪರಸ್ಪರನ್ನು ಬೆಸೆಯುವ ಕೆಲಸ ಮಾಡುತ್ತದೆ. ಹಿಂದಿ ಇಂದು ಕೇವಲ ಒಂದು ಭಾಷೆ ಮಾತ್ರವಾಗಿ ಉಳಿದಿಲ್ಲ ಬದಲಾಗಿ ಹಲವಾರು ಉದ್ಯೋಗಗಳನ್ನು ನೀಡುವ ಒಂದು ಅವಕಾಶವಾಗಿ ಮಾರ್ಪಟ್ಟಿದೆ. ದಕ್ಷಿಣ ಕನ್ನಡದಲ್ಲಿರುವ ಕೇಂದ್ರ ಸರ್ಕಾರದ ಕಾರ್ಯಾಲಯಗಳಲ್ಲಿ ಹಲವಾರು ಅವಕಾಶಗಳು ನಮ್ಮ ಮುಂದಿದೆ. ವಿದ್ಯಾರ್ಥಿಗಳು ಬ್ಯಾಂಕ್ ಗಳಲ್ಲಿ ಎಂಆರ್ಪಿಎಲ್, ಎಂಸಿಎಫ್, ರೈಲ್ವೆ ಮತ್ತು ಏಪೆರ್Çೀರ್ಟ್ ಹೀಗೆ ಹತ್ತು ಹಲವು ಕಡೆ ಹಿಂದಿ ಉದ್ಯೋಗಾವಕಾಶಗಳು ತೆರೆದಿವೆ ಎಂದರು. ಕಳೆದ 9 ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಸ್ನಾತಕೋತ್ತರ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳು ಇಂದು ನೂರಕ್ಕೆ ನೂರು ಉದ್ಯೋಗಗಳನ್ನು ಹೊಂದಿರುವುದು ಇದಕ್ಕೆ ಸಾಕ್ಷಿ ಎಂದರು. ಆಳ್ವಾಸ್ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ ಮಾತನಾಡಿ, ಹಿಂದಿ ಭಾಷೆ ಭಾರತವನ್ನು ಒಂದು ಸೂತ್ರವಾಗಿ ಒಗ್ಗೂಡಿಸಿದೆ. ಈ ಏಕ ಸೂತ್ರ…