ದಕ್ಷಿಣ ಕನ್ನಡದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಗೆ ಜವಾಹರ್ ನವೋದಯ ವಸತಿ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಿದೆ. ಎರಡು ವಸತಿ ಶಾಲೆಗಳ ಪ್ರವೇಶಕ್ಕೆ ಅವಕಾಶ ಪಡೆದ ಇಬ್ಬರು ವಿದ್ಯಾರ್ಥಿಗಳು ಒಂದೇ ಸೂರಿನಡಿ ವಿವಿಧ ಶಾಲೆಗಳ ಪ್ರವೇಶ ಪರೀಕ್ಷೆಗಳ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ನೇಸರ ಬಿ.ಕೆ ಮತ್ತು ತನುಷ್ ರಾಜ್ ತೇಜಸ್ವಿರವರು ಜವಾಹರ್ ನವೋದಯ ಹಾಗೂ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಎರಡರಲ್ಲೂ ಉತ್ತೀರ್ಣರಾಗಿ ಸದ್ರಿ ಶಾಲೆಗಳ ಪ್ರವೇಶಾತಿ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಸುಳ್ಯ ತಾಲೂಕು ಐವರನಾಡು ಗ್ರಾಮದ ಪಂಚಮ ದೇವರಕಾನ ನಿವಾಸಿ ಭರತ್ ಕುಮಾರ್ ಮತ್ತು ಕವಿತಾ ದಂಪತಿಗಳ ಪುತ್ರ ನೇಸರ ಬಿ.ಕೆ, ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ದೊಡ್ಡಡ್ಕ ನಿವಾಸಿ ದೀನ್ ರಾಜ್ ಡಿ.ಸಿ ಮತ್ತು ಸುಷ್ಮಾ ದಂಪತಿಗಳ ಪುತ್ರ ದೈವಿಕ್ ಚಂದ್ ಡಿ.ಡಿ, ಕಡಬ ತಾಲೂಕಿನ ಚಾರ್ವಾಕ ಗ್ರಾಮದ ದೇವರಗುಡ್ಡೆ ನಿವಾಸಿ ಡಿ.ಜಿ ರವಿರಾಜ್ ಹಾಗೂ ರಶ್ಮಿ ಕೆ ದಂಪತಿಯ ಪುತ್ರ ತನುಷ್ ರಾಜ್ ತೇಜಸ್ವಿ, ಪುತ್ತೂರು ತಾಲೂಕು ಕೊಡಿಪ್ಪಾಡಿಯ ಪಂಬತ್ತಮಜಲು ಶ್ರೀ ನಿಲಯ ನಿವಾಸಿ ಎಸ್ ಷಣ್ಮುಗನ್ ಮತ್ತು ಎಸ್ ಗಾಯತ್ರಿ ದಂಪತಿಗಳ ಪುತ್ರ ಹನಿಶ್ ಎಸ್ ರವರು ವಿದ್ಯಾಮಾತಾ ಸಂಸ್ಥೆಯಲ್ಲಿ ತರಬೇತಿ ಪಡೆದು ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು ಗಮನಾರ್ಹ ಅಂಶವಾಗಿದ್ದು, ಈ ರೀತಿಯ ಯಶಸ್ಸಿನ ಸಾಧನೆ ಮಾಡಿದ್ದು ವಿದ್ಯಾಮಾತಾ ಅಕಾಡೆಮಿಯ ತರಬೇತಿಗೆ ಹಿಡಿದ ಕೈಗನ್ನಡಿಯಾಗಿದ್ದು ಇನ್ನೂ ಹಲವಾರು ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲು ಸ್ಫೂರ್ತಿಯಾಗಿದೆ ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರು ಸಂತಸವನ್ನು ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಮಾತಾ ಅಕಾಡೆಮಿ ಇದರ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.










































































































