Author: admin
ಮುಂಬಯಿ ಸಿಟಿ ಪ್ರಾದೇಶಿಕ ಸಮಿತಿ : ವಿದ್ಯಾರ್ಥಿ ದತ್ತು ಸ್ವೀಕಾರ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ
ಬಂಟರ ಸಂಘ ಮುಂಬಯಿಯ ಸಿಟಿ ಪ್ರಾದೇಶಿಕ ಸಮಿತಿಯು 2024 ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ದತ್ತು ಸ್ವೀಕಾರ ಕಾರ್ಯಕ್ರಮವು ಆಗಸ್ಟ್ 4, ರವಿವಾರ ಬೆಳಿಗ್ಗೆ 10 ಗಂಟೆಗೆ ಬಂಟರ ಸಂಘದ ಶ್ರೀಮತಿ ರಂಜಿನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಎನೆಕ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಶೋಕ್ ಪಕ್ಕಳ ಅವರ ನೇತೃತ್ವದಲ್ಲಿ ನಡೆಯಲಿದೆ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳು ಜೊತೆಗೆ ಯುವ ವಿಭಾಗ ಕೈ ಜೋಡಿಸಲಿದೆ. ಶಿಕ್ಷಣ ಮತ್ತು ಸಮಾಜ ಕಲ್ಯಾಣ ದತ್ತು ಸ್ವೀಕಾರ, ತುಳುನಾಡ ಆಟಿ ಆನಿ – ಇನಿ ಮತ್ತು ಸಂಜೀವಿನಿ ಲೋಕಾರ್ಪಣೆ ಇದೇ ವೇದಿಕೆಯಲ್ಲಿ ತ್ರಿವಳಿ ಸಂಭ್ರಮ ಕಾರ್ಯಕ್ರಮಗಳು ನಡೆಯಲಿದೆ. ಡಾ| ಆರ್.ಕೆ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಎಲ್ಲರಿಗೂ ವಿದ್ಯೆ ಮತ್ತು ವೈದ್ಯಕೀಯ ನೆರವು ಸಿಗುವಂತಹ ಸೇವೆಯ ಹೊಸ ಯೋಚನೆ ಮತ್ತು ಯೋಜನೆಯಾದ ಸಂಜೀವಿನಿ ಉದ್ಘಾಟನೆಗೊಳ್ಳಲಿದೆ. ಬಂಟರ…
ಹಿಂದಿನ ಕಷ್ಟ ಕಾಲದ ಸಮಯ ಹಾಗೂ ವಿಪರೀತ ಮಳೆಯ ಕಾರಣದಿಂದ ಜನರಿಗೆ ಆಟಿ ತಿಂಗಳ ಜೀವನ ಸುಖಕರವಾಗಿರಲಿಲ್ಲ. ಆ ಸಮಯದಲ್ಲಿ ಜನರು ಪ್ರಾಕೃತಿಕವಾಗಿ ಲಭಿಸುವ ತಿಂಡಿ ತಿನಿಸುಗಳನ್ನು ಉಪಯೋಗಿಸುತ್ತಿದ್ದರು. ಆಗ ಇಂದಿನ ಯಾವುದೇ ಸೌಲಭ್ಯ ಇರಲಿಲ್ಲ. ಇಂದು ನಾವು ಆ ದಿನವನ್ನು ನೆನೆಪಿಸುವ ಹಾಗೂ ಇಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಹೊಟ್ಟೆಪಾಡಿಗಾಗಿ ಜನ್ಮಭೂಮಿಯಿಂದ ಕರ್ಮಭೂಮಿಯಾದ ಮುಂಬಯಿಗೆ ಬಂದು ತುಳುನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಮುಂಬಯಿಗರ ಕಾರ್ಯ ಶ್ಲಾಘನೀಯ ಎಂದು ಬಂಟ್ಸ್ ಫೋರಮ್ ಮೀರಾ ಭಾಯಂದರ್ ಇದರ ಅದ್ಯಕ್ಷ ಉದಯ್ ಎಮ್ ಶೆಟ್ಟಿ ಮಲಾರಬೀಡು ಹೇಳಿದರು. ಅವರು ಜುಲೈ 27ರಂದು ಭಾಯಂದರ್ ಪೂರ್ವದ ಕ್ರೌನ್ ಬಿಜಿನೆಸ್ ಹೋಟೇಲಿನ ಅಶ್ವಿನಿ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸುನಿತಾ ಶೆಟ್ಟಿಯವರು ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಮಾತನಾಡಿ, ಯುದ್ದದಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ನುಡಿ ನಮನ ಸಲ್ಲಿಸಿದರು. ಅತಿಥಿಯಾಗಿ…
ಕತಾರ್ ಬಂಟರ ಸಂಘದ ಅಧ್ಯಕ್ಷರಾದ ನವೀನ್ ಶೆಟ್ಟಿ ಇರುವೈಲ್ ಹಾಗೂ ಆಡಳಿತ ಮಂಡಳಿ ಸದಸ್ಯ ನವೀನ್ ಶೆಟ್ಟಿ ಮಡಂತ್ಯಾರ್ ರವರು ಜುಲೈ 31 ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಗೆ ಆಗಮಿಸಿದ್ದು, ಅವರನ್ನು ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪುತ್ತೂರು ಬಂಟರ ಸಂಘದಿಂದ ಆಯೋಜಿಸಲ್ಪಡುವ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರು ಕತಾರ್ ಬಂಟರ ಸಂಘದ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಈ ಸಂದರ್ಭದಲ್ಲಿ ದುರ್ಗಾಪ್ರಸಾದ್ ರೈ ಕುಂಬ್ರ, ರವಿ ಪ್ರಸಾದ್ ಶೆಟ್ಟಿ, ಗುರುಪುರ ಬಂಟರ ಸಂಘದ ಸುದರ್ಶನ್ ಶೆಟ್ಟಿ, ಬಜ್ಪೆ ವಲಯ ಬಂಟರ ಸಂಘದ ಹರೀಶ್ ಶೆಟ್ಟಿ, ಸುಕೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಸತ್ಯಪ್ರಸಾದ್ ಶೆಟ್ಟಿ, ಬಂಟರ ಸಂಘ ನೀರುಮಾರ್ಗ ವಲಯದ ಗೋಕುಲ್ ದಾಸ್ ಶೆಟ್ಟಿ, ಬಂಟರ ಸಂಘ ಕೊಟ್ಟಾರ ಕೋಡಿಕಲ್ ನ…
ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಅಗಸ್ಟ್ 10 ರಂದು ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಎ ಹೇಮನಾಥ್ ಶೆಟ್ಟಿ ಕಾವುರವರು ಗೌರವಪೂರ್ವಕವಾಗಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕುಂಬ್ರ ದುರ್ಗಾಪ್ರಸಾದ್ ರೈ, ಸಾಜ ರಾಧಾಕೃಷ್ಣ ಆಳ್ವ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ರವಿಪ್ರಸಾದ್ ಶೆಟ್ಟಿ, ವಿಶೇಷ ಆಹ್ವಾನಿತರಾದ ಕೃಷ್ಣಪ್ರಸಾದ್ ಆಳ್ವ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ಅರುಣಾ ದಿನಕರ್ ರೈ, ಅನಿತಾ ಹೇಮನಾಥ್ ಶೆಟ್ಟಿ, ಯುವ ಬಂಟರ ಸಂಘದ ಜೊತೆ ಕಾರ್ಯದರ್ಶಿ ಶುಭ ರೈ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಬಂಟರ ಸಂಘದ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್ಯಕ್ರಮಕ್ಕೆ ಐಕಳ ಹರೀಶ್ ಶೆಟ್ಟಿಯವರಿಗೆ ಆಮಂತ್ರಣ
ಬಂಟರ ಸಂಘ ಪುತ್ತೂರು ತಾಲೂಕು ಇದರ ವತಿಯಿಂದ ಆಗಸ್ಟ್ 10 ರಂದು ಜರಗಲಿರುವ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಹೇಮನಾಥ್ ಶೆಟ್ಟಿ ಕಾವು, ದುರ್ಗಾಪ್ರಸಾದ್ ರೈ ಕುಂಬ್ರ ಹಾಗೂ ರವಿಪ್ರಸಾದ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರನ್ನು ಗೌರವಪೂರ್ವಕವಾಗಿ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಗುರುಪುರ ಬಂಟರ ಸಂಘದ ಸುದರ್ಶನ್ ಶೆಟ್ಟಿ, ಬಜ್ಪೆ ವಲಯ ಬಂಟರ ಸಂಘದ ಹರೀಶ್ ಶೆಟ್ಟಿ, ಸುಕೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಸತ್ಯಪ್ರಸಾದ್ ಶೆಟ್ಟಿ, ಬಂಟರ ಸಂಘ ನೀರುಮಾರ್ಗ ವಲಯದ ಗೋಕುಲ್ ದಾಸ್ ಶೆಟ್ಟಿ, ಬಂಟರ ಸಂಘ ಕೊಟ್ಟಾರ ಕೋಡಿಕಲ್ ನ ಲಕ್ಷಣ್ ಶೆಟ್ಟಿ, ಉಮೇಶ್ ಶೆಟ್ಟಿ, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಮತ್ತು ಆಹ್ವಾನಿತ ಸದಸ್ಯರಾದ ಶ್ರೀ ಯಶು ಪಕ್ಕಳ ಇವರುಗಳು ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಕತಾರ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ 2024 ನೇ ಸಾಲಿನ ವಾರ್ಷಿಕ ರಕ್ತದಾನ ಶಿಬಿರವನ್ನು ದೋಹಾದ ಎಚ್ಎಂಸಿಯ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ ಆಯೋಜಿಸಿತ್ತು. ಸಂಘದ ಉಪಾಧ್ಯಕ್ಷರಾದ ಕೆ ಎಸ್ ರಮೇಶ ಅವರು ಸಂಕ್ಷಿಪ್ತ ಸಭಾಕಾರ್ಯಕ್ರಮದ ಪ್ರಾರಂಭಿಕ ನುಡಿಗಳೊಂದಿಗೆ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಅವರನ್ನು ಪರಿಚಯಿಸಿ, ಆಹ್ವಾನಿಸಿದರು. ಅಧ್ಯಕ್ಷರಾದ ರವಿ ಶೆಟ್ಟಿಯವರು ನೆರೆದಿದ್ದ ಎಲ್ಲಾ ಗಣ್ಯರು ಮತ್ತು ದಾನಿಗಳನ್ನು ಸ್ವಾಗತಿಸಿ, ರಕ್ತವು ಎಷ್ಟು ಅಮೂಲ್ಯವಾದುದು “ತಾಯಿಯ ಕಣ್ಣೀರು ತನ್ನ ಮಗುವಿನ ಜೀವವನ್ನು ಉಳಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ರಕ್ತವು ಸಹಾಯ ಮಾಡುತ್ತದೆ’ ಎಂಬುದನ್ನು ಸೂಚಿಸುವ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಬಿಂದು ನಾಯರ್, ಇತರ ಗಣ್ಯರಾದ ಐಸಿಬಿಎಫ್ ಅಧ್ಯಕ್ಷ ಶಾನವಾಸ್ ಬಾವಾ, ಕರ್ನಾಟಕ ಟೋಸ್ಟ್ ಮಾಸ್ಟರ್ಸ್ ಅಧ್ಯಕ್ಷ ಉದಯ್ ಶೆಟ್ಟಿ ತಮ್ಮ ಭಾಷಣದಲ್ಲಿ ರಕ್ತದಾನದ ಪ್ರಮುಖ ಕೊಡುಗೆಗಳು ಮತ್ತು ಸಮಾಜದ ಮೇಲೆ ಅದರ ಪರಿಣಾಮವನ್ನು ವಿವರಿಸಿದರು. ಹಮದ್ ಮೆಡಿಕಲ್…
ತುಳುನಾಡಿನ ಜನಪ್ರಿಯ ಕ್ರೀಡೆಗಳಲ್ಲಿ ಕಂಬಳ ಅತೀ ಪುರಾತನವಾದುದು. ಅಗಾಧ ಇತಿಹಾಸವನ್ನು ಹೊಂದಿರುವ ಕಂಬಳವು ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬದಲಾವಣೆ ಹೊಂದುತ್ತಿದ್ದರೂ ಇವತ್ತಿಗೂ ಕೂಡ ಅದೇ ಹಿಂದಿನ ಸೊಗಡನ್ನು ಕಾಪಾಡಿಕೊಂಡು ಬಂದಿದೆ. ಕಂಬಳವು ಬರೀ ಕ್ರೀಡೆಯಲ್ಲ ತುಳುನಾಡಿನ ಜನರ ಕೃಷಿಯ ಸಂಕೇತವಾಗಿದೆ. ಕೆಸರು ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಈ ಕಂಬಳವು ಕ್ರೀಡೆಗಿಂತ ಹೆಚ್ಚಾಗಿ ಒಂದು ಕಲೆ ಎಂದೇ ಹೇಳಬಹುದು. ಈ ಕಲೆಯನ್ನು ಪ್ರಾರಂಭಿಸಿದ ಕೀರ್ತಿ ನಮ್ಮ ಹಿರಿಯರಿಗೆ ಸಲ್ಲುತ್ತದೆ. ಮೊದಲೆಲ್ಲ ಕೃಷಿ ಮಾಡುವ ಗದ್ದೆಯಲ್ಲೇ ಕಂಬಳ ನಡೆಯುತ್ತಿತ್ತು. ಆದರೆ ಪ್ರಸ್ತುತ ಗದ್ದೆಗಳು ಕಾಣ ಸಿಗುವುದೇ ಕಡಿಮೆಯಾದ ಕಾರಣ ಕಂಬಳಕ್ಕಾಗಿಯೇ ಬೇಕಾಗಿ ವಿಶೇಷ ಕರೆಯನ್ನು (ಕೆಸರಿನ ಗದ್ದೆಯನ್ನು) ನಿರ್ಮಿಸುತ್ತಾರೆ. ಗದ್ದೆಯ ಮಣ್ಣು, ಮರಳು ಮಣ್ಣು ನೀರು ಹಾಕಿ ಇದನ್ನು ತಯಾರು ಮಾಡುತ್ತಾರೆ. ಕೋಣಗಳು ಓಡಿಸಲು ತಯಾರು ಮಾಡುವ ಸ್ಥಳವನ್ನು ಪಂಥ್ ಎಂದು ಹಾಗೂ ಓಡಿ ಬಂದ ಕೋಣವು ಮುಕ್ತಾಯಕ್ಕೆ ತಲುಪುವ ಗೆರೆಯನ್ನು ಮಂಜೊಟ್ಟಿ ಎಂದು ಕರೆಯುತ್ತಾರೆ. ಕೋಣಗಳ ವಯಸ್ಸಿನ ಆಧಾರದ ಮೇಲೆ…
ಹೋಟೆಲ್ ಕ್ಷೇತ್ರದ ಕುರಿತ ಬೇಡಿಕೆಗಳನ್ನು ಬಜೆಟ್ ಹಿನ್ನೆಲೆಯಲ್ಲಿ ಮರು ಪರಿಶೀಲಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ಮನವಿ ಮಾಡಿಕೊಂಡಿದೆ. ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು ಹೋಟೆಲಿಗರ ನಿಯೋಗದೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಹೋಟೆಲ್ ಕ್ಷೇತ್ರದ ಪರವಾಗಿ ಈ ಬೇಡಿಕೆಗಳನ್ನು ಮರು ಪರಿಶೀಲಿಸಿ ಎಂದು ಅವರು ಕೋರಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಬೇಡಿಕೆಗಳು : ಕರ್ನಾಟಕವು 300 ಕಿ.ಮೀ. ಕರಾವಳಿಯನ್ನು ಹೊಂದಿದೆ. ಕರ್ನಾಟಕ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಹಣವನ್ನು ನಿಯೋಜಿಸಿ. ಇದು ಹೆಚ್ಚಿನ ಉದ್ಯೋಗಗಳನ್ನು ಮತ್ತು ಆದಾಯವನ್ನು ಸೃಷ್ಟಿಸುತ್ತದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದು. ಅಲ್ಲದೆ, ಪ್ರಸ್ತುತ ಒಂದೇ ಟ್ರ್ಯಾಕ್ ಇರುವುದರಿಂದ ದೀರ್ಘಾವಧಿಯ ಬೇಡಿಕೆ ಮುಂದುವರಿಸಲು ಟ್ರ್ಯಾಕ್ ದ್ವಿಗುಣಗೊಳಿಸುವ ಅಗತ್ಯವಿದೆ. ಮಂಗಳೂರು ಮತ್ತು ಕಾರವಾರದ ನಡುವೆ ದೇಶೀಯ ವಿಮಾನ ನಿಲ್ದಾಣ ನಿರ್ಮಾಣದ ಅಗತ್ಯವಿದೆ. ಆದಾಯ ತೆರಿಗೆ…
ಒಳ್ಳೆಯ ಕೆಲಸವನ್ನು ಮಾಡುವುದರ ಮೂಲಕ ಜನರ ಪ್ರೀತಿ ಗಳಿಸಿದ ವ್ಯಕ್ತಿಯ ಆತ್ಮವು ಅವರು ಗತಿಸಿದ ಅನಂತರ ದೇವರ ಪಾದ ಸೇರಿ ದೇವರು ಆ ಆತ್ಮವನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಜನರಲ್ಲಿದೆ. ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಆರ್. ಶೆಟ್ಟಿ ತಮ್ಮ ದುಡಿಮೆಯಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವ ಮೂಲಕ ಸೇವೆ ಮಾಡಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಜುಲೈ 29ರಂದು ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಆರ್ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಹುಟ್ಟು ಸಾವಿನ ಮಧ್ಯೆ ಮಾಡಿದ ಸೇವೆಯಿಂದ ಕೀರ್ತಿ ಉಳಿಯಲಿದೆ ಎಂದು ಬಡಗಬೆಟ್ಟು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅಶ್ವಿನಿ ಮಾಣಿಕ್ಯ ಒಡಹುಟ್ಟಿದವರಿಗಿಂತಲೂ ಒಡನಾಡಿಯವರೊಂದಿಗೆ ಹೇಗೆ ಬದುಕಬೇಕೆಂದು ಮಾನವ ಕುಲಕ್ಕೆ ತಿಳಿಸಿಕೊಟ್ಟವರು ಅಶ್ವಿನಿ. ಅವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ನಮ್ಮೆಲ್ಲರಲ್ಲಿ ಸಂಚಲನ ಮೂಡಿಸಿದ…
“ನೋವಿದ್ದವರು ನಗಬಾರದೆಂದಿಲ್ಲ ನಗುವವರಲ್ಲಿ ನೋವಿಲ್ಲಾ ಎಂದರ್ಥವಲ್ಲ ನೋವ ನುಂಗಿ ನಕ್ಕು ಹಗುರಾಗಿಸುವುದೇ ಜೀವನ”. ಹೌದು, ಕಷ್ಟ ಯಾರಿಗಿಲ್ಲ ಹೇಳಿ. ಕಷ್ಟ ಎನ್ನುವುದು ಮನುಷ್ಯರನ್ನು ಬಿಡಿ ಮೂಕ ಪ್ರಾಣಿಗಳು ಸೇರಿದಂತೆ ಜಲಾಚರ ಜೀವಿಗಳನ್ನು ಬಿಟ್ಟಿಲ್ಲ. ಅದರಲ್ಲೂ ತಮ್ಮ ನೋವುಗಳನ್ನು ಅದುಮಿಟ್ಟುಕೊಂಡು ಇನ್ನೊಬ್ಬರನ್ನು ನಗಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಅದೂ ಒಂದು ದೈವದತ್ತ ಕೊಡುಗೆ ಎಂದೇ ಹೇಳಬಹುದು. ಇಷ್ಟೆಲ್ಲಾ ವಿಚಾರಗಳನ್ನು ನಾನು ಹೇಳಲು ಕಾರಣವೂ ಇದೆ. ನಾನೀಗ ಹೇಳಲು ಹೊರಟಿರುವುದು ನಮ್ಮೂರು ರೆಂಜಾಳದ ಬಸ್ ಕಂಡೆಕ್ಟರೊಬ್ಬರ ಕತೆಯನ್ನು. ಇಷ್ಟಕ್ಕೂ ಈ ಅಪರಿಚಿತ ಕಂಡೆಕ್ಟರ್ ಆ ಬಸ್ನ ಪ್ರಯಾಣದ ಸಂದರ್ಭದಲ್ಲಿ ನಮಗಂತೂ ನೀಡಿದ ಖುಷಿಯಂತೂ ನಾವು ಆ ಬಸ್ ಮತ್ತು ಆ ಕಂಡೆಕ್ಟರ್ನ ಅಪ್ಪಟ ಅಭಿಮಾನಿಯಾಗುವಂತೆ ಮಾಡಿತು. ಆ ಬಸ್ಸಿನ ಹೆಸರು “ಸುನೀಲ್” ಮೊಟಾರ್ಸ್. ರೆಂಜಾಳದಿಂದ ಬೆಳ್ಳಂಬೆಳಗ್ಗೆ 8 ಗಂಟೆಗೆ ಹೊರಡುವ ಈ ಬಸ್ನಲ್ಲಿ ಸೀಟು ಹಿಡಿಯುವುದೆ ಒಂದು ರೀತಿಯ ಹರ ಸಾಹಸ. ಈ ಕೊರೊನಾ ಎಂಬ ಮಹಾಮಾರಿ ಒಕ್ಕರಿಸಿದ ಬಳಿಕ ನಮ್ಮೂರಿನ ಬಸುಗಳಿಗೆ ಬರ…