ಮೇ 10 ರಂದು ಶಾಲಿನಿ ಶೆಟ್ಟಿ ಸಚ್ಚೇರಿಗುತ್ತು ಇವರ ನಿಸ್ವಾರ್ಥ ಸಮಾಜ ಸೇವೆಯನ್ನು ಮೆಚ್ಚಿ ದಿನೇಶ್ ಜಯ ಶೆಟ್ಟಿ ಬೆಳ್ಳೂರು ಇವರು ಅಧ್ಯಕ್ಷರಾಗಿರುವ ನಾಯರ್ ಕೋಡಿ ಫ್ರೆಂಡ್ಸ್ ಸರ್ಕಲ್ (ರಿ) ಕೋಟೆ ಸೂರಿಂಜೆ ಇದರ ಅದ್ದೂರಿಯ ರಜತ ಮಹೋತ್ಸವ ಸಮಾರಂಭದಲ್ಲಿ ಹಲವಾರು ಬಿರುದುಗಳ ಮುಕುಟಕ್ಕೆ ನವಿಲ ಗರಿ ಎಂಬಂತೆ ವೇದಿಯಲ್ಲಿ ಆಸೀನರಾಗಿದ್ದ ಅತಿಥಿ ಗಣ್ಯರ ಸಮ್ಮುಖದಲ್ಲಿ “ತೌಳವ ಸಿರಿ” ಎಂಬ ಬಿರುದನ್ನು ನೀಡಿ ಗೌರವಿಸಿವೆ.

ಶಾಲಿನಿ ಸತೀಶ್ ಶೆಟ್ಟಿಯವರು ಬಹುಮುಖ ಪ್ರತಿಭಾ ಶಾಲಿನಿ. ಸದಾ ಸಮಾಜ ಸೇವೆಯ ತುಡಿತದಲ್ಲಿದ್ದು ಮುಂಬಯಿಯಲ್ಲಿ ಮುಖ್ಯವಾಗಿ ಮೀರಾ ಭಾಯಂಧರ್ ಪರಿಸರದ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಇಲ್ಲವೇ ಸದಸ್ಯೆಯಾಗಿ ಹಾಗೂ ಪ್ರಾದೇಶಿಕ ಬಂಟರ ಸಂಘ ಮೀರಾ ಭಾಯಂಧರ್ ಇದರ ಮಾಜಿ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿಯೂ ಸಮಾಜ ಸೇವೆಯಲ್ಲಿ ನಿರತರಾಗಿರುವುದು ಹೆಚ್ಚಿನವರು ಬಲ್ಲ ವಿಷಯ.
ಸಮಾಜ ಸೇವೆಗಾಗಿಯೇ ಸಂಸ್ಥೆಯೊಂದು ಬೇಕೆಂಬ ಆಶಯ ಹೊಂದಿದ್ದ ಇವರು ಸಮಾನ ಮನಸ್ಕ ಮಹಿಳೆಯರನ್ನು ಒಗ್ಗೂಡಿಸಿ ಶ್ರೀ ಶಕ್ತಿ ಫೌಂಡೇಷನ್ ಮುಂಬೈ ಮಹಾರಾಷ್ಟ್ರ (ರಿ) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸರ್ವ ಸದಸ್ಯೆಯರ ಒಮ್ಮತದಿಂದ ತಾನೇ ಅಧ್ಯಕ್ಷೆಯಾಗಿ ಆಯ್ಕೆಯಾದರು. ಇವರ ಶ್ಲಾಘನೀಯ ಸಮಾಜ ಸೇವೆಯನ್ನು ಮನಗಂಡು ತನ್ನ ಹುಟ್ಟೂರ ಮತ್ತು ಮುಂಬೈಯ ಅನೇಕ ಸಂಘ ಸಂಸ್ಥೆಗಳಲ್ಲದೆ ಹೊರ ರಾಜ್ಯಗಳಾದ ಕೇರಳ ಮತ್ತು ಆಂಧ್ರಪ್ರದೇಶದ ಕನ್ನಡ ಸಂಸ್ಥೆಗಳು ಕೂಡಾ ಬಿರುದು ನೀಡಿ ಗೌರವಿಸಿವೆ.





































































































