Author: admin
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ- ಖೋ ಟೂರ್ನಮೆಂಟ್-2025ರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಪಿಯನ್ನು ಸತತ 17 ನೇ ಬಾರಿ ಹಾಗೂ ಮಹಿಳೆಯರ ತಂಡ ಹೆಚ್‌ವಿ ಕಮಲೇಶ್ ರೋಲಿಂಗ್ ಟ್ರೋಪಿಯನ್ನು ಸತತ 14ನೇ ಬಾರಿ ಪಡೆದು ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಆಳ್ವಾಸ್ ಪುರುಷರ ಖೋ-ಖೋ ತಂಡ 27-5 ಅಂಕಗಳ ಅಂತರದಿAದ ಪುತ್ತೂರಿನ ವಿವೇಕಾನಂದ ಕಾಲೇಜು ವಿರುದ್ಧ ಗೆಲುವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ತಂಡ ಏಕಪಕ್ಷೀಯವಾಗಿ 18-0 ಅಂಕಗಳ ಅಂತರದಲ್ಲಿ ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜು ವಿರುದ್ಧ ಗೆಲುವು ಸಾಧಿಸಿ ಎರಡು ವಿಭಾಗದಲ್ಲಿ ”ಸಮಗ್ರ ಪ್ರಶಸ್ತಿ” ಗೆ ಭಾಜನವಾಯಿತು.ವೈಯಕ್ತಿಕ ಪುರುಷರ ಚಾಂಪಿಯನ್‌ಶಿಪ್‌ನಲ್ಲಿ “ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ”ಗೆ ಆಳ್ವಾಸ್ ಕಾಲೇಜಿನ ನಿಖಿಲ್ ಮತ್ತು”ಬೆಸ್ಟ್ ಡಿಫೆಂಡರ್ ಪ್ರಶಸ್ತಿ”ಗೆ ಪ್ರಮೋದ್ ಡಿ ಹಾಗೂ ವೈಯಕ್ತಿಕ ಮಹಿಳೆಯರ…
ವಿದ್ಯಾಗಿರಿ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರದಂದು ಇಂಗ್ಲಿಷ್ ವಿಭಾಗದ ಗ್ಲಿಸನ್ ಸಂಘದ ವತಿಯಿಂದ ವಿಶ್ವ ಕಾವ್ಯ ದಿನವನ್ನು ಆಚರಿಸಲಾಯಿತು. ಕರ‍್ಯಕ್ರಮದ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಉಡುಪಿಯ ಶ್ರೀ ಅದಮಾರು ಮಠದ ಶಿಕ್ಷಣ ಸಮೂಹಗಳ ಉಪ ಆಡಳಿತಾಧಿಕಾರಿ ಪುಂಡರಿಕಾಕ್ಷ ಕೊಡಂಚ, ಕಾವ್ಯವು ನಮ್ಮ ಸಂಸ್ಕೃತಿಯ ಮಹತ್ವಪೂರ್ಣ ಅಂಗ. ಆ ಮೂಲಕ ನಮ್ಮ ಭಾವನೆ ಹಾಗೂ ಅನುಭವಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ.ಕಾವ್ಯ ದಿನವನ್ನು ಆಚರಿಸುವುದರ ಮೂಲಕ ಮಹಾನ್ ಕವಿಗಳ ಕೊಡುಗೆಗಳನ್ನು ಗೌರವಿಸುವುದರ ಜೊತೆಗೆ ಹೊಸ ಬರಹಗಾರರಿಗೆ ಪ್ರೇರಣೆಯಾಗಲು ಸಹಾಯ ಮಾಡುತ್ತದೆ ಎಂದರು. ತಾರ್ಕಿಕವಾಗಿ ಯೋಚಿಸಿ ಮತ್ತು ಸಾಮಾನ್ಯ ಜ್ಞಾನವನ್ನು ಬಳಸಿದರೆ ಯಾರೂ ಬದುಕಿನಲ್ಲಿ ಪ್ರಮಾದವನ್ನೆಸಗಲಾರರು. ತಾರ್ಕಿಕ ಯೋಚನೆಯುಳ್ಳ ವ್ಯಕ್ತಿಗೆ ಅವಕಾಶಗಳು ವಿಫುಲವಾಗಿರುತ್ತವೆ ಎಂದು ಸಲಹೆ ನೀಡಿದರು. ಸುಂದರವಾದ ಭೂಮಿಯನ್ನು ಉಳಿಸಬೇಕು. ಅದು ನಮ್ಮ ಆಸೆಗಳನ್ನು ಪೂರೈಸ ಬಲ್ಲದೇ ಹೊರತು, ನಮ್ಮ ದುರಾಸೆಯನ್ನಲ್ಲ ಎಂದರು. ನಂತರ ಗ್ಲಿಸನ್ ಸಂಘದ ವತಿಯಿಂದ ಆಯೋಜಿಸಲಾದ ಕಾವ್ಯ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಿಎಸ್ಸಿಯ ಮೇಘಾ…
ಹೈದರಾಬಾದ್ ಬಂಟ್ಸ್ ಹೋಟೆಲ್ ಉದ್ಯಮಿಗಳಿಂದ ಯುವ ಸಂಘಟಕ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಹೋಟೆಲ್ ಸುಪ್ರಭಾತಮ್ ನಲ್ಲಿ ಹಿರಿಯ ಹೋಟೆಲ್ ಉದ್ಯಮಿಗಳಾದ ಅಲ್ತಾರು ದೇಬೆಟ್ಟು ಜಯರಾಮ ಶೆಟ್ಟಿ ಹಾಗೂ ಶೇಖರ್ ಶೆಟ್ಟಿ ವಂಡ್ಸೆ ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳಾದ ಅಣ್ಣಪ್ಪ ಶೆಟ್ಟಿ ಮಲ್ಯಾಡಿ, ಉದಯ್ ಕುಮಾರ್ ಶೆಟ್ಟಿ ಹಕ್ಲಾಡಿ, ಅಜಿತ್ ಶೆಟ್ಟಿ ನೂಜಾಡಿ, ಸುರೇಶ ಶೆಟ್ಟಿ ಯಾಳಹಕ್ಲು, ಚಂದ್ರ ಶೆಟ್ಟಿ ಮಲ್ಯಾಡಿ, ಶ್ರೀಕಾಂತ್ ಶೆಟ್ಟಿ ಉಳ್ತೂರು, ಸಂಯುಕ್ತ ಶೆಟ್ಟಿ ಬಾಳೆಮಣೆ ಉಪಸ್ಥಿತರಿದ್ದರು.
ಮಿತ್ರರೇ, ಹಿಂದೆ ದೇವಗಿರಿ ಹೆಸರಿನ ರಾಜ್ಯವಿತ್ತು. ರಾಜಾ ರಾಮದೇವನು ಆ ರಾಜ್ಯವನ್ನು ಆಳುತ್ತಿದ್ದನು. ಒಮ್ಮೆ ಅಲ್ಲಾಉದ್ದೀನ ಖಿಲಜಿಯು ದೇವಗಿರಿಯ ಮೇಲೆ ದಾಳಿ ಮಾಡಲು ಬಂದನು ಮತ್ತು ರಾಜನಿಗೆ ತನ್ನ ದೂತರ ಮೂಲಕ ಶರಣಾಗುವಂತೆ ಸಂದೇಶವನ್ನು ಕಳುಹಿಸಿದನು. ಆ ಸಂದೇಶದಲ್ಲಿ ಅಲ್ಲಾಉದ್ದೀನನು, ರಾಜಾ ರಾಮದೇವನಿಗೆ ಅವನ ಸಂಪೂರ್ಣ ರಾಜ್ಯವನ್ನು ಅಲ್ಲಾಉದ್ದೀನನಿಗೆ ಒಪ್ಪಿಸಿ, ಅವನಿಗೆ ಶರಣಾಗಬೇಕೆಂದು ಬರೆದಿದ್ದನು. ಈ ಸಂದೇಶವನ್ನು ಕೇಳಿ ರಾಜಾ ರಾಮದೇವನಿಗೆ ಸಹಿಸಲು ಆಗಲಿಲ್ಲ. ತನ್ನ ರಾಜ್ಯದ ಮೇಲೆ ಯಾರೋ ಆಕ್ರಮಣ ಮಾಡಿರುವುದನ್ನು ಅವನು ಹೇಗೆ ತಾನೆ ಸುಮ್ಮನೆ ನೋಡುತ್ತಾ ಕುಳಿತು ಕೊಳ್ಳಬಹುದು. ಅವನು ಬಹಳ ಪರಾಕ್ರಮಿ ರಾಜನಾಗಿದ್ದನು. ಅವನು ಅಲ್ಲಾಉದ್ದೀನನ ಪ್ರಸ್ತಾವನೆ ಒಪ್ಪಿಕೊಳ್ಳಲಿಲ್ಲ. ಇದನ್ನು ಕೇಳಿ ಅಲ್ಲಾಉದ್ದೀನ ಕೋಪಗೊಂಡನು ಮತ್ತು ತನ್ನ ದೊಡ್ಡ ಸೈನ್ಯದೊಂದಿಗೆ ದೇವಗಿರಿಯ ಮೇಲೆ ಆಕ್ರಮಣ ಮಾಡಿದನು. ದೇವಗಿರಿಯ ಕೋಟೆ ಒಂದು ಅಭೇದ್ಯ ಕೋಟೆಯಾಗಿತ್ತು. ಆ ಕೋಟೆಯನ್ನು ಬಹಳ ಸುಲಭವಾಗಿ ಗೆಲ್ಲಲು ಸಾಧ್ಯವಿರಲಿಲ್ಲ. ಅರ್ಥಾತ್ ಆ ಕೋಟೆಯೊಳಗೆ ಯಾರಿಗೂ ಸುಲಭವಾಗಿ ನುಸುಳಲು ಸಾಧ್ಯವಿರಲಿಲ್ಲ. ಸ್ವಲ್ಪ ದಿನದಲ್ಲಿಯೇ ಇಬ್ಬರೂ…
ಹೆಬ್ರಿ ತಾಲೂಕು ಮುನಿಯಾಲಿನಲ್ಲಿ ಮೇ 3ರಂದು ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ ಮುಟ್ಲುಪಾಡಿ ಇದರ ವತಿಯಿಂದ ಮುನಿಯಾಲಿನ ವೀರ ಸಾರ್ವಕರ್ ಮೈದಾನದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಯೋಜಿಸಲಾಗಿದೆ ಎಂದು ಕ್ಲಬ್ ಗೌರವಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು ತಿಳಿಸಿದ್ದಾರೆ. ಅವರು ಮಾ. 18ರಂದು ಹೋಟೆಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಕಬಡ್ಡಿ ಪಂದ್ಯಾಟದ ವೇಳೆ ಹೃದಯಾಘಾತಕ್ಕೀಡಾಗಿ ಸಾವಿಗೀಡಾದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಮುಟ್ಲುಪಾಡಿಯ ದಿ. ಪ್ರೀತಂ ಶೆಟ್ಟಿಯವರ ಸ್ಮರಣಾರ್ಥ ಮುನಿಯಾಲಿನಲ್ಲಿ ಮೇ 3ರಂದು ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ. ರಾಜಕೀಯ ರಹಿತವಾಗಿ ನಡೆಯುವ ಈ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು, ಕ್ರಿಕೆಟ್ ತಾರೆಯರು, ಬಾಲಿವುಡ್ ನಟ- ನಟಿಯರು ಭಾಗವಹಿಸಲಿದ್ದಾರೆ ಎಂದರು. ಬೆಳಿಗ್ಗೆ 9:30ರಿಂದ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಆಯ್ದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಇದರ ವಿಜೇತರಿಗೆ ಪ್ರಥಮ- 25000, ದ್ವಿತೀಯ- 15,000 ತೃತೀಯ- 10,000, ಹಾಗೂ ಚತುರ್ಥ -10,000 ಬಹುಮಾನ ನೀಡಲಾಗುತ್ತದೆ. ಸಂಜೆ 6.30ರಿಂದ ನಡೆಯುವ…
ಮುಂಬೈ:- ಕವಿತೆ ಮನಸಂತೋಷಕ್ಕಾಗಿ ಬರೆಯಬೇಕು. ಇತರ ಯಾವುದೇ ಉದ್ದೇಶವಿಟ್ಟು ಬರೆಯಬಾರದು. ಮೊದಲು ಬೇರೆ ಬೇರೆ ಪುಸ್ತಕಗಳನ್ನು ಓದಬೇಕು. ಓದಿದ್ದನ್ನು ಇತರರೊಂದಿಗೆ ಚರ್ಚಿಸಬೇಕು. ಕವಿತೆಯ ರಚನೆಯ ಆಳವನ್ನು ಅರಿತುಕೊಳ್ಳಬೇಕು. ಇವೆಲ್ಲದರ ಜೊತೆಯಲ್ಲಿ ಕವಿತೆ ಬರೆಯುವವರು ಕಾವ್ಯ ಸಂವೇದನೆಯನ್ನು ಬೆಳೆಸಿಕೊಳ್ಳಬೇಕು. ಅದು ಇಲ್ಲದಿದ್ದರೆ ಕವಿತೆ ನಿರ್ಜೀವವಾಗುತ್ತದೆ. ಕವಿಯೊಬ್ಬ ಬರೆಯುವ ಪ್ರತಿ ಕವಿತೆಯಲ್ಲೂ ಹೊಸತನವಿರಬೇಕು. ಪ್ರಾಸ, ಲಯ, ಛಂದಸ್ಸಿನ ಅರಿವು ಇರಬೇಕು. ಕವಿತೆಗಳು ವಾಚ್ಯವಾಗಬಾರದು. ಕವಿತೆ ಸಣ್ಣದಿರಲಿ, ದೊಡ್ಡದಿರಲಿ ಅದು ಧ್ವನಿಪೂರ್ಣವಾಗಿರಬೇಕು. ಆ ಎಚ್ಚರ ಕವಿತೆ ಬರೆಯುವ ಪ್ರತಿಯೊಬ್ಬರಿಗೂ ಇರಬೇಕು. ‘ಬೆಸ್ಟ್ ವಡ್ರ್ಸ್ ಇನ್ ಬೆಸ್ಟ್ ಆರ್ಡರ್’ ರೀತಿಯಲ್ಲಿ ಕವಿತೆ ಬರೆಯುವ ಜಾಣ್ಮೆ ತಿಳಿದಿರಬೇಕು. ಗಿಡದಲ್ಲಿ ಸೊಂಪಾಗಿ ಎಲೆ ಮೂಡಿದಂತೆ ಕವಿತೆ ಮೂಡಿಬರಬೇಕು. ಋಷಿ ಅಲ್ಲದವನು ಕವಿಯಾಗಲಾರ ಹಾಗೆಯೇ ಖುಷಿ ಇಲ್ಲದವನೂ ಕವಿಯಾಗಲಾರ’ ಎನ್ನುವ ಮಾತಿನಂತೆ ಮನಸ್ಸು ಪ್ರಪುಲ್ಲಿತವಾದಾಗ ಹೊಸತನದೊಂದಿಗೆ ಹೊಸ ರೂಪಕ, ಉಪಮೆಗಳೊಂದಿಗೆ ಕಾವ್ಯ ಕಟ್ಟುವ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಡುಂಡಿರಾಜ್ ಅವರು ಅಭಿಪ್ರಾಯ ಪಟ್ಟರು. ಅವರು ಮಾರ್ಚ್ 10ರಂದು ಮುಂಬಯಿ…
ಬಪ್ಪನಾಡು ಕ್ಷೇತ್ರದ ಅನನ್ಯ ಭಕ್ತರು ಹಾಗೂ ಕಲೋಪಾಸಕರು ಆಗಿ ನಾಡಿನಾದ್ಯಂತ ಭಕ್ತ ಬಂಧುಗಳ ಪ್ರೀತಿಗೆ ಪಾತ್ರರಾದ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕಕ್ವಗುತ್ತು ಮನೋಹರ ಶೆಟ್ಟಿಯವರು ನಿಧನರಾಗಿದ್ದಾರೆ. ಬಂಟ ಸಮಾಜದ ಸರ್ವಶ್ರೇಷ್ಠ ವ್ಯಕ್ತಿಯಾಗಿ ಮಕ್ಕಳಿಂದ ಮುದುಕನವರೆಗೆ ಇವರು ತೋರಿದ ಸಮಾನಾಧಾರ ಭಾವ, ಹೃದಯದ ಮಾತುಗಳು ಪ್ರತಿಯೊಬ್ಬರಿಗೂ ಆದರ್ಶದಾಯಕ. ಅನುಭವವೇ ದೇವರು ಎನ್ನುವ ಮಾತಿಗೆ ಅನುಸಾರವಾಗಿ ಜೀವನದಲ್ಲಿ ಸಾರ್ಥಕ್ಯವನ್ನು ಕಂಡು ಶ್ರೀ ಕ್ಷೇತ್ರ ಬಪ್ಪನಾಡಿನ ಮಹಾಮಾತೆಯ ಶ್ರೀರಕ್ಷೆಗೆ ಒಳಗಾಗಿ ಪ್ರತಿಯೊಬ್ಬರ ಹೃದಯದಲ್ಲಿ ಮನೆಮಾತಾದ ಇವರ ಆತ್ಮವು ಪರಮಾತ್ಮನಲ್ಲಿ ಲೀನವಾಗಿ ಆತ್ಮಕ್ಕೆ ಸದಾ ಚಿರಶಾಂತಿ ಸಿಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಪ್ರಾರ್ಥಿಸಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.
ಉಡುಪಿ ಜಿಲ್ಲೆಯ ಪರೀಕ ಚೆನ್ನಿಬೆಟ್ಟು ಶತಾಯುಷಿ ಸರಸ್ವತಿ ಸೂರಪ್ಪ ಹೆಗ್ಡೆ ಅವರು ತನ್ನ 102 ನೇ ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯುಎಇ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಹಾಗೂ ಸಹೋದರಿಯರು, ಸಹೋದರರು, ಅಳಿಯಂದಿರು, ಸೊಸೆಯರು, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸರಸ್ವತಿ ಸೂರಪ್ಪ ಹೆಗ್ಡೆ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಯುಎಇ ಬಂಟರ ಸಂಘ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಗೌರವ ಸಂಪಾದಕ ಅರುಣ್ ಶೆಟ್ಟಿ ಎರ್ಮಾಳು, ಸ್ಥಾಪಕ ರಂಜಿತ್ ಶೆಟ್ಟಿಯವರು ದುಃಖ ಸಂತಾಪ ಸೂಚಿಸಿದ್ದಾರೆ.
ಕನ್ನಡ ಕಥಾ ಸಂಕಲನ ಅವಳೆಂದರೆ ಬರಿ ಹೆಣ್ಣೆ ಕನ್ನಡ ಕಥಾ ಲೋಕಕ್ಕೆ ಸೇರ್ಪಡೆಯಾದ ಒಂದು ಮೌಲ್ಯಯುತ ಕೃತಿ. ಕನ್ನಡ ಕಥಾ ಪರಂಪರೆಗೆ ಶತಮಾನಗಳ ಇತಿಹಾಸ ಇರುವುದಾದರೂ ಇಂದಿಗೂ ಭಿನ್ನ ರೀತಿಯ ನಿರೂಪಣೆಯೊಡನೆ ಉತ್ತಮ, ಅಪೂರ್ವ ಹಾಗೂ ಹೊಸ ಹೊಸ ಕಥಾವಸ್ತುವುಳ್ಳ ಕಥೆಗಳು ಸಾಹಿತ್ಯ ಲೋಕಕ್ಕೆ ದಕ್ಕುತ್ತಿರುವುದು, ಕಥಾಲೋಕ ಓದುಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿರುವುದಕ್ಕೆ ಬಹು ಮುಖ್ಯ ಕಾರಣ. ಇಂತಹದೇ ಒಂದು ಅಪೂರ್ವ, ಭಿನ್ನ ಶೈಲಿಯ ನಿರೂಪಣೆಗಳುಳ್ಳ, ಬಹು ನೆಲೆಯ ಕಥಾ ವಸ್ತುಗಳನ್ನುಳ್ಳ ಕೃತಿ, ‘ಅವಳೆಂದರೆ ಬರಿ ಹೆಣ್ಣೆ’. ಈ ಕೃತಿಯಲ್ಲಿರುವ ಒಟ್ಟು ಹದಿಮೂರು ಕಥೆಗಳಲ್ಲಿ ಹೆಚ್ಚಿನ ಎಲ್ಲಾ ಕಥೆಗಳು ಹೆಣ್ಣು ಬದುಕಿನ ವಿವಿಧ ಮಜಲುಗಳನ್ನು ಚಿತ್ರಿಸುತ್ತವೆ. ಈ ಕಥೆಗಳನ್ನು, “ಪ್ರಯೋಗಾತ್ಮಕವಾಗಿ ಕಟ್ಟಿದ ಕಥೆಗಳು ಹಾಗು ಸಹಜ ಹರಿವಿನ ಕತೆಗಳು” ಎಂದು ಎರಡು ರೀತಿಯಲ್ಲಿ ಗುರುತಿಸಬಹುದು. ಆದರೆ ಎಲ್ಲಾ ಕಥೆಗಳಲ್ಲೂ ಇರುವ ಸಮಾನ ಗುಣವೆಂದರೆ ಜೀವಪರವಾದ ನೋಟ ಅಥವಾ ಸೂಕ್ಷ್ಮ ಸಂವೇದನೆಯ ಸ್ತೀಕೇಂದ್ರಿತ ನೋಟ. ಇಲ್ಲಿ ಯಾವುದೋ ರೀತಿಯಲ್ಲಿ ಶೋಷಣೆಗೊಳಗಾದ ಪಾತ್ರಗಳು ಸೋತು…
ರಂಗ ಸಂಗಾತಿ ಪ್ರತಿಷ್ಟಾನದ ವತಿಯಿಂದ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ಇತ್ತೀಚೆಗೆ ಪ್ರಾಧ್ಯಾಪಕಿ ಅಕ್ಷಯ ಆರ್ ಶೆಟ್ಟಿ ಅವರ ಕಥಾ ಸಂಕಲನ ಅವಳೆಂದರೆ ಬರಿ ಹೆಣ್ಣೆ ಕೃತಿಯನ್ನು ಭಾರತಿ ಶೆಟ್ಟಿ ಮುಂಡಬೆಟ್ಟು ಗುತ್ತು ಲೋಕಾರ್ಪಣೆಗೊಳಿಸಿದರು. ಕೃತಿಯ ಕುರಿತು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಪ್ರಾಧ್ಯಾಪಕಿ ಡಾ. ಸುಧಾರಾಣಿ ಕೃತಿಯ ಕುರಿತು ಮಾತನಾಡಿದರು. ಈ ಸಂದರ್ಭ ರಂಗ ಸಂಗಾತಿ ಪ್ರತಿಷ್ಟಾನದ ಶಶಿರಾಜ್ ರಾವ್ ಕಾವೂರು, ಎಕ್ಸ್ಪರ್ಟ್ ಕಾಲೇಜಿನ ಉಪಪ್ರಾಂಶುಪಾಲರಾದ ಕರುಣಾಕರ್ ಉಪಸ್ಥಿತರಿದ್ದರು.















