Author: admin
ಗುಡ್ಡೆಯಂಗಡಿ:- 2024-25ನೆಯ ಶೈಕ್ಷಣಿಕ ಸಾಲಿನ ಹತ್ತನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಹೈಸ್ಕೂಲು ಇಲ್ಲಿನ ವಿದ್ಯಾರ್ಥಿನಿ ಸ್ವಸ್ತಿ.ಎಸ್ ಶೆಟ್ಟಿ ಶೇಕಡಾ 97.44 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಗುಡ್ಡೆಯಂಗಡಿ ಪೆಲತ್ತೂರು ಕುಂಬರ್‍ಜಡ್ಡು ಪ್ರೀತಿಕಾ ನಿಲಯ ಸುರೇಶ. ಎನ್. ಶೆಟ್ಟಿ ಹಾಗೂ ಉಡುಪಿ ಅಂಬಲಪಾಡಿ ಕಪ್ಪೆಟ್ಟು ಶ್ರೀ ರತ್ನಾ ನಿವಾಸದ ಸೌಮ್ಯ.ಎಸ್.ಶೆಟ್ಟಿ ಇವರ ಸುಪುತ್ರಿಯಾಗಿದ್ದಾರೆ.
ಗಣಿತನಗರ : ರಾಷ್ಟ್ರ ಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆಇಇ ಮೈನ್.ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಅಂತಿಮ ಫಲಿತಾಂಶದಲ್ಲಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕೆ.ಮನೋಜ್ ಕಾಮತ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲು.ಎಸ್ ವರ್ಗದಲ್ಲಿ 1ನೇ ರ್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ್ಯಾಂಕನ್ನು ಪಡೆದಿರುತ್ತಾರೆ. ಬಿ.ಆರ್ಕ್ ವಿಭಾಗದಲ್ಲಿ ಚಿಂತನ್ ಮೆಘವತ್ 99.9741943 ಪರ್ಸಂಟೈಲ್ ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ 19ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ ಮೊದಲನೇ ರ್ಯಾಂಕನ್ನು, ಬಿ.ಪ್ಲಾನಿಂಗ್ ವಿಭಾಗದಲ್ಲಿ 99.8556269 ಪರ್ಸಂಟೈಲ್‍ನೊಂದಿಗೆ ಕೆಟಗರಿ ವಿಭಾಗದಲ್ಲಿ 3ನೇ ರ್ಯಾಂಕ್ ಹಾಗೂ ಜನರಲ್ ಮೆರಿಟ್ ವಿಭಾಗದಲ್ಲಿ 48ನೇ ರ್ಯಾಂಕನ್ನು ತನ್ನದಾಗಿಸಿಕೊಂಡಿದ್ದಾರೆ. ಜೊತೆಗೆ ಆಕಾಶ್ ಪ್ರಭು 99.9627251 ಪರ್ಸಂಟೈಲ್‍ನೊಂದಿಗೆ 27ನೇ ರ್ಯಾಂಕ್, ತರುಣ್ ಎ.ಸುರಾನ 99.9483886 ಪರ್ಸಂಟೈಲ್‍ನೊಂದಿಗೆ 39ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 7ನೇ…
ದೇಶದ ಪ್ರತಿಷ್ಠಿತ ಆರ್ಕಿಟೆಕ್ಚರ್ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ.(ಬಿ. ಆರ್ಕ್ )2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮೋಹಿತ್- 99.4093359 ಪರ್ಸೆಂಟೈಲ್ ನೊಂದಿಗೆ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಎರಡರಲ್ಲೂ ರಾಷ್ಟ್ರಕ್ಕೆ ಕೆಟಗರಿ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿ ವಿಶಿಷ್ಟಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ (AIR 101), ಟಿ ಪ್ರದೀಪ್ (AIR 117),ಮೋನಿಕಾ ಕೆ ಎ(AIR 140), ಸುಧಾಂಶು ಪಾಲೇಕರ್ (AIR 268), ಪ್ರತಿಕ್ ಎನ್ ಶೆಟ್ಟಿ (AIR 362), ತ್ರಿಶ್ಲಾ ಗಾಂಧಿ (AIR 423), ರೋಹಿತ್ ಜಿ ಬಿ -(AIR 461), ಸಾಚಿ ಶಿವಕುಮಾರ್ -(AIR 484), ಚಿನ್ಮಯಿ ಆರ್-(AIR 519), ಮನೋಜ್ ಎಂ ಆರ್ -(AIR 846), ಚೇತನ್ ಗೌಡ -(AIR 867), ಆಕಾಶ್ ದೇವಾಡಿಗ -(AIR 980) ಕೆಟಗರಿ ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ್ದಾರೆ. 500 ರ‍್ಯಾಂಕ್ ಒಳಗೆ 10 ಮಂದಿ, 1000 ರಾಂಕ್…
ಯುಎಇಯಲ್ಲಿ ಹಾಗೂ ಕರಾವಳಿಯಲ್ಲಿ ಹೆಸರು ವಾಸಿಯಾಗಿರುವ ಹೋಟೆಲ್ ಉದ್ಯಮ ಸಂಸ್ಥೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಕಳೆದ 13 ವರ್ಷದಿಂದ ತನ್ನ ಮಾತೃಪಿತರ ಮದುವೆಯ ವಾರ್ಷಿಕ ದಿನದಂದು ದುಬೈನಲ್ಲಿ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರದ ಕಾರ್ಯಕ್ರಮ ಮೇ 22 ರಂದು ಫಾರ್ಚೂನ್ ಪ್ಲಾಝದಲ್ಲಿ ಯಶಸ್ವಿಯಾಗಿ ನಡೆಯಿತು. ದುಬೈ ಹೆಲ್ತ್ ಅಥೋರಿಟಿಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಶಸ್ವಿಯಾಗಿ ಜರುಗಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಸಿಬ್ಬಂದಿ ವರ್ಗದವರು, ದುಬೈ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರವೀಣ್ ಶೆಟ್ಟಿಯವರ ಸ್ನೇಹಿತರು ಶಿಬಿರದಲ್ಲಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು, ನನ್ನ ಮಾತೃಪಿತರಾದ ಶ್ರೀಮತಿ ಸರೋಜಿನಿ ಶೆಟ್ಟಿ ಮತ್ತು ಶ್ರೀ ನಾರಾಯಣ ಶೆಟ್ಟಿಯವರ ಮದುವೆಯ ವರ್ಷದ ಈ ಶುಭ ದಿನದಂದು ಕಳೆದ ಹದಿಮೂರು ವರ್ಷಗಳಿಂದ ಈ…
ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೇ 23 ರಂದು ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ರಮೇಶ್ ಭಟ್ ಉಪ್ಪಂಗಳ ಮತ್ತು ಉಪಾಧ್ಯಕ್ಷರಾಗಿ ದಯಾನಂದ ರೈ ಮನವಳಿಕೆ ಆಯ್ಕೆಯಾದರು.ದಯಾನಂದ ರೈ ಮನವಳಿಕೆಯವರು ಅಲಂಕಾರು ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಣಾಧಿಕಾರಿಯಾಗಿ ನಿವೃತ್ತರಾಗಿದ್ದರು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಮಂಗಳೂರು ನಗರದ ಲೇಡಿಹಿಲ್ ವಿಕ್ಟೋರಿಯ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸ್ಪರ್ಶ ಬಿ ಶೆಟ್ಟಿ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ 600 (ಶೇ 96) ಅಂಕ ಪಡೆದಿದ್ದಾಳೆ.ಈಕೆ ಬಿಜೈ ಕಾಪಿಕಾಡ್ 3 ನೇ ಕ್ರಾಸ್ ನಿವಾಸಿ ಬಾಲಕೃಷ್ಣ ಶೆಟ್ಟಿ ಮತ್ತು ಸಪ್ನಾ ದಂಪತಿಯ ಪುತ್ರಿ.
ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಶಿಕ್ಷಕವೃಂದದವರಿಗೆ ನವೀನ ಮಾದರಿಯ ಭೋದನಾ ವಿಧಾನ ಹಾಗೂ ಪರಿಣಾಮಕಾರಿ ಸಂವಹನ ಕೌಶಲಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಒರಿಯೆಂಟ್ ಬ್ಲಾಕ್‍ಸ್ವಾನ್ ಪ್ರೈ. ಲಿಮಿಟೆಡ್‍ನ ಸೆಂಟ್ರಲ್ ಮ್ಯಾನೇಜರ್ ಡಾ. ಸ್ಮಿತಾ ಮತಾಯಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಅವರು ಸಂಸ್ಥೆಯ ಶಿಕ್ಷಕರಿಗೆ ಚಟುವಟಿಕೆ ಆಧಾರಿತ ಬೋಧನಾ ವಿಧಾನ, ಪ್ರಾಯೋಗಿಕ ಕಲಿಕೆ, ಸಂವಹನ ಕೌಶಲ, ಸಮಯ ನಿರ್ವಹಣೆ, ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆ, ಪಾಠಯೋಜನೆ, ಮೌಲ್ಯಮಾಪನದ ಕುರಿತು ತರಬೇತಿ ನೀಡಿದರು.ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಆಧುನಿಕತೆಗೆ ತಕ್ಕಂತೆ ನಮ್ಮನ್ನು ನಾವು ನವೀಕರಿಸಿಕೊಳ್ಳಬೇಕು. ಕೇಳುಗರ ಮನಸ್ಸನ್ನು ಮುಟ್ಟುವಂತಹ ಮಾತುಗಾರಿಕೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕರು ಕಾರ್ಯಾಗಾರದಲ್ಲಿ ಪಡೆದ ಮಾಹಿತಿಯನ್ನು ತರಗತಿಯ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅನುಷ್ಠಾನಗೊಳಿಸಬೇಕೆಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಒರಿಯೆಂಟ್ ಬ್ಲ್ಯಾಕ್ ಸ್ವಾನ್‍ನ ಚೇತನ್ ಕುಮಾರ್, ಸಂಸ್ಥೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಜೂನ್ 1ರಂದು ಮಂಗಳೂರು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ -2025’ ರಾಷ್ಟ್ರೀಯ ಕಲಾ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಮೇ 20 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿರವರು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರಿಗೆ ಹಸ್ತಾಂತರ ಮಾಡುವ ಮೂಲಕ, ಬಂಟ ಸಮಾಜ ಬಾಂಧವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಎ. ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಕಡಮಜಲು ಸುಭಾಸ್ ರೈ, ರಮೇಶ್ ರೈ ಬೋಳೋಡಿ, ಪುರಂದರ ರೈ ಮಿತ್ರಂಪಾಡಿ, ಎನ್. ಚಂದ್ರಹಾಸ್ ಶೆಟ್ಟಿ, ಚನಿಲ ತಿಮ್ಮಪ್ಪ ಶೆಟ್ಟಿ, ಮೋಹನ್ ರೈ ನರಿಮೊಗರು, ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ, ಸಂಜೀವ ಆಳ್ವ ಹಾರಾಡಿ, ಕಿಶೋರ್ ಶೆಟ್ಟಿ ಅರಿಯಡ್ಕ, ಜಯಕುಮಾರ್ ರೈ ಮಿತ್ರಂಪಾಡಿ, ನಾರಾಯಣ ರೈ ಬಾರಿಕೆ,…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಪುರುಷೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಿನ್ನಿಗೋಳಿ ಘಟಕದ ಧನ್ಯೋತ್ಸವ ಕಾರ್ಯಕ್ರಮ ಕಿನ್ನಿಗೋಳಿಯಲ್ಲಿ ನಡೆಯಿತು. ಮೇ 9 ರಂದು ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಿನ್ನಿಗೋಳಿ ಘಟಕದ ಅದ್ದೂರಿ ಕಾರ್ಯಕ್ರಮದಲ್ಲಿ ಸಹಕಾರ ನೀಡಿದ ಎಲ್ಲಾ ಫೌಂಡೇಶನ್ ಅಭಿಮಾನಿ ಬಂಧುಗಳಿಗೆ ಧನ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ, ಮೊನ್ನೆ ನಡೆದ ಘಟಕದ ಉದ್ಘಾಟನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆದಿದೆ. ಹಾಗೆಯೇ ಜೂನ್ ಒಂದರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಪಟ್ಲ ಫೌಂಡೇಶನ್ ನ ದಶಮಾನ ಉತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಬಂದು ಮುಕ್ತ ಮನಸ್ಸಿನಿಂದ ಸಹಕಾರ, ಸಹಾಯ ನೀಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು. ಕಿನ್ನಿಗೋಳಿ ಘಟಕದ ವತಿಯಿಂದ ದಶಮಾನೋತ್ಸವ ಸಂಭ್ರಮದ ಸಲುವಾಗಿ ಫೌಂಡೇಶನ್ ಗೆ ಈಗಾಗಲೇ 10 ಲಕ್ಷ ರೂಪಾಯಿ (10 ಟ್ರಸ್ಟಿಗಳನ್ನು) ಒಟ್ಟು ಮಾಡಿದ್ದು, ಜೂನ್ ಒಂದರ ಒಳಗೆ…
ಜಗತ್ತಿನ ಅತ್ಯಂತ ಪ್ರಾಚೀನ ಯುದ್ಧಕಲೆ ಎಂದು ಖ್ಯಾತಿ ಪಡೆದ ಕಳರಿ ಪೈಟ್ ತುಳುನಾಡಿನಿಂದಲೇ ಉದ್ಭವವಾಗಿದೆ ಎಂಬುದು ಹೆಮ್ಮೆಯ ವಿಷಯ. ಹಿಂದೆ ದ.ಕ., ಕಣ್ಣೂರು, ವಯನಾಡು ಮತ್ತು ಕೊಝೀಕೋಡ್ ಭಾಗಗಳನ್ನೊಳಗೊಂಡ ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವು ಯುದ್ಧಕಲೆ ಅಭ್ಯಾಸದ ಪ್ರಬಲ ಕೇಂದ್ರವಾಗಿತ್ತು. ಕೇರಳದಲ್ಲೂ ಇದನ್ನು “ತುಳುನಾಡನ್ ಕಳರಿ” ಎಂದೇ ಕರೆಯುತ್ತಾರೆ. ಪುರಾವೆಗಳ ಪ್ರಕಾರ, ಹಲವಾರು ರಾಜರು ಹಾಗೂ ಸೇನಾ ನಾಯಕರು ತುಳುನಾಡಿಗೆ ಬಂದು ಕಲರಿ ಪೈಟ್ ಕಲಿತಿದ್ದರು. ಕೋಟಿ ಚೆನ್ನಯರು ಗರಡಿಗಳ ಮೂಲಕ ಈ ಕಲೆಯ ಉಳಿವಿಗೆ ಶ್ರಮಿಸಿದರು. ಅವರ ಗುರು ನಾನಯ್ಯರಿಗೆ ಕೇರಳದ ರಾಜರು ಗ್ರಾಮಗಳನ್ನು ದತ್ತವಾಗಿ ನೀಡಿದ ದಾಖಲೆಗಳೂ ಇವೆ. ಅದೇ ರೀತಿ ಅವಳಿ ವೀರರಾದ ಮುದ್ದ ಕಳಲೆರ್, ಕಾನದ ಕಟದೆರ್ ಇವರ ಶೌರ್ಯಗಳು ಕಳರಿಯಿಂದಲೇ ಬೆಳೆದು ಬಂದಿದೆ. ಕಲರಿ ಪೈಟ್‌ನಲ್ಲಿ 108 ಮರ್ಮ ಬಿಂದುಗಳಲ್ಲಿ 64ಕ್ಕೆ ಸಂಬಂಧಪಟ್ಟ ಮರ್ಮ ವಿದ್ಯೆಗಳು ಪ್ರಮುಖ. ಇದು ದೇಹ ಹಾಗೂ ಮನಸ್ಸಿಗೆ ಆರೋಗ್ಯ ನೀಡುವುದಲ್ಲದೆ, ಯುದ್ಧ ತಂತ್ರಗಳು, ಕಣ್ಕಟ್ಟು ವಿದ್ಯೆ,…















