ವ್ಯಕ್ತಿತ್ವ ವಿಕಸನ ಮತ್ತು ತರಬೇತಿಯ ಅಂತಾರಾಷ್ಟ್ರೀಯ ಸಂಸ್ಥೆಯಾದ ಜೇಸಿಐನ ವಲಯ 15 ಮಧ್ಯಂತರ ಸಮ್ಮೇಳನದಲ್ಲಿ 53 ವರ್ಷಗಳ ಇತಿಹಾಸವಿರುವ ವಲಯದ ಅತ್ಯಂತ ದೊಡ್ಡ ಜೆಸಿಐ ಘಟಕವಾಗಿರುವ ಜೆಸಿಐ ಪುತ್ತೂರಿಗೆ 2025ರ ಸಾಲಿನಲ್ಲಿ ಡ್ರಗ್ಸ್ ಮುಕ್ತ ಪುತ್ತೂರು ಜಾಗೃತಿ ಕಾರ್ಯಕ್ರಮಗಳು, ವಿವಿಧ ವಿಶೇಷ ತರಬೇತಿ ಶಿಬಿರಗಳ ಆಯೋಜನೆಗಾಗಿ ವಿವಿಧ ಪ್ರಶಸ್ತಿಗಳ ಗೌರವ ಲಭಿಸಿದೆ.

ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನವನ್ನು ಜೆಸಿಐ ಬೆಳ್ಮಣ್ಣು ಘಟಕವು ಜೂನ್ 8ರಂದು ಕಾರ್ಕಳ ನಿಟ್ಟೆಯ ಸನ್ಮಾನ್ ರೆಸಿಡೆನ್ಸಿಯಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಜೆಸಿಐ ಪುತ್ತೂರು ಘಟಕಕ್ಕೆ ಔಟ್ ಸ್ಟ್ಯಾಂಡಿಂಗ್ ಸ್ಪೆಷಲ್ ಪ್ರಾಜೆಕ್ಟ್ ಅವಾರ್ಡ್, ಔಟ್ ಸ್ಟ್ಯಾಂಡಿಂಗ್ ಲೋಕಲ್ ಆರ್ಗಾನೈಸೆಷನ್ ರನ್ನರ್ ಅವಾರ್ಡ್, ಡೈಮಂಡ್ ಲೋ ಅವಾರ್ಡ್ ದೊರಕಿದೆ. ಪ್ರಶಸ್ತಿಗಳನ್ನು ಜೆಸಿಐ ವಲಯ 15ರ ಅಧ್ಯಕ್ಷರಾದ ಜೆಸಿ ಅಭಿಲಾಷ್, ವಲಯ ಉಪಾಧ್ಯಕ್ಷರಾದ ಜೆಸಿ ಸುಹಾಸ್ ಮರಿಕೆರವರು ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಭಾಗ್ಯೇಶ್ ರೈ ಅವರಿಗೆ ಪ್ರಧಾನ ಮಾಡಿದರು. ಜೆಸಿಐ ಪುತ್ತೂರು ಘಟಕದ ಜಂಟಿ ಕಾರ್ಯದರ್ಶಿ ಜೆಸಿ ರಂಜಿನಿ ಶೆಟ್ಟಿ, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷರಾದ ಜೆಸಿ ವಿಘ್ನೇಶ್, ನಳಪಾಕ ಸಂಯೋಜಕ ಜೆಸಿ ಸತೀಶ್ ನಾಯಕ್ ಉಪಸ್ಥಿತರಿದ್ದರು.