ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜೇನು ತುಪ್ಪವೆಂದರೆ ಜೇನು ನೊಣಗಳಿಂದ ಉತ್ಪಾದನೆಯಾಗಿರುವ ನೈಸರ್ಗಿಕ ಸಿಹಿ ಪದಾರ್ಥ. ಇದು ಜೇನು ನೊಣಗಳ ಶ್ರಮದ ಫಲ. ಆದರೆ ಅದೇ ಜೇನು ಬಿಡಿಸಲು ಅಂದರೆ ಜೇನು ತಟ್ಟಿಯಿಂದ ಜೇನು ತುಪ್ಪ ಸಂಗ್ರಹಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮಾನವ ಜೇನುಗಳಿಗೆ ವಿಷ ಸಿಂಪಡಿಸಿ ಅವುಗಳನ್ನು ನಿರ್ನಾಮ ಮಾಡುವ ವಿಕೃತ ಮನಸ್ಥಿತಿಯ ಸಂಪೂರ್ಣ ನೋಟ ಬೆಳಕಿಗೆ ಬಂದಿದೆ. ಕಾಡು ಹೆಜ್ಜೇನುಗಳು ದಾರಾಳವಾಗಿ ಜೇನುತುಪ್ಪ ಸಂಗ್ರಹಿಸುತ್ತದೆ. ಜೇನಿನ ಆಸೆಗೆ ವಿಷ ಸಿಂಪಡಿಸಿ ಅವುಗಳ ಕೊಲ್ಲುವುದು ಅಕ್ಷಮ್ಯ ಅಪರಾಧ. ವಿದ್ಯಾವಂತ ಬುದ್ದಿವಂತ ಮಾನವನ ಬುದ್ದಿ ಎತ್ತ ಕ್ಷೀಣಿಸುತ್ತಿದೆ. ವನ್ಯಜೀವಿ ಕಾನೂನಿನ ಪ್ರಕಾರವು ಅಪರಾಧ ವಿದು. ಆದರೂ ಪರಿಸರ ಸಂರಕ್ಷಣೆ ಇನ್ನಷ್ಟು ಕಠಿಣ ಕಾನೂನು ಬಾರಿಗೆ ತರುವ ಅಗತ್ಯವಿದೆ.
ಪ್ರತಿ ವರ್ಷ ಕರ್ನಾಟಕ ವಿದ್ಯುತ್ ನಿಗಮದಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಜೊಯಿಡಾ, ಕಾರವಾರ, ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ, ಕಾಳಿ ಜಲ ವಿದ್ಯುತ್ ಯೋಜನೆಯ ಅಧಿಕಾರಿಗಳು ಸುಪಾ ಜಲಾಶಯ, ಪವರ್ ಹೌಸ್, ಬೊಮ್ಮನಳ್ಳಿ ಜಲಾಶಯನಿರ್ವಹಣೆಗೆ ಟೆಂಡರ್ ನೀಡುತ್ತಾರೆ. ಈ ವ್ಯಾಪ್ತಿಯಲ್ಲಿ ಕಟ್ಟುವ ಜೇನು ಕಟ್ಟಡ ಗೂಡುಗಳನ್ನು ಗುತ್ತಿಗೆದಾರರು ಜೇನು ಬಿಡಿಸುವವರನ್ನು ಕರೆಸಿ ಜೇನು ತೆಗೆಯವುದು ಸಾಮಾನ್ಯ. ಆದರೆ ಕಳೆದ ವಾರ ನಾಡಿನ ಹೆಚ್ಚಿನ ಪತ್ರಿಕೆಗಳಲ್ಲಿ ಜೇನುಗೂಡಿಗೆ ವಿಷ ಸಿಂಪಡಿಸಿದವರು ಎಂಬ ತಲೆ ಬರಹದೊಂದಿಗೆ ಸುದ್ದಿ ಪ್ರಕಟವಾಗಿತ್ತು.
ವಿಷ ಅಥವಾ ಕೆಮಿಕಲ್ ಹಾಕಿ ಜೇನು ಹುಳುಗಳನ್ನು ಸಾಯಿಸುವುದರಿಂದ ಪರಾಗಸ್ಪರ್ಶ ಕ್ರಿಯೆ ನಿಂತು ಹೋಗಲಿದೆ. ಇದರಿಂದ ಬನ ಹಸಿರು ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಪರಿಸರ ಪ್ರೇಮಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೀಟನಾಶಕ ಸಿಂಪಡಿಸಿ ಸತ್ತಿರುವ ರಾಶಿ ಜೇನು ಹುಳುಗಳು ಈ ಅಪರಾದದ ಸ್ವರೂಪಕ್ಕೆ ಸಾಕ್ಷಿಯಾಗಿವೆ.
ಪ್ರಕೃತಿ ತನ್ನೊಡಲಲ್ಲಿ ಏನೇನೋ ನಿಗೂಢತೆಯನ್ನು ತುಂಬಿಕೊಂಡಿರುತ್ತದೆ. ಸಹಸ್ರಾರು ಸಂಖ್ಯೆಯಲ್ಲಿರುವ ಜೇನು ನೊಣಗಳ ಜೀವನಕ್ರಮ ವಿಸ್ಮಯ ಮೂಡಿಸುತ್ತದೆ. ಜೇನುಜಗದ ಅಚ್ಚರಿಯ ಕಥನವನ್ನು ಅರಿಯುವ ಕುತೂಹಲ ಇಲ್ಲದೆ ಕೇವಲ ಮಾರುಕಟ್ಟೆಯ ತಂತ್ರಗಳಲ್ಲಿ ಮುಳುಗಿದ್ದ ಮಾನವರಿಂದ ಹೆಚ್ಚಿನ ನಿರೀಕ್ಷೆಯು ಇರಲಿಲ್ಲ. ಜೇನುಹುಳು ಗಿಡಮರಗಳಿಗೆ ಸಿಂಪಡಿಸುವ ಕೀಟ ನಾಶಕಗಳಿಂದ ತೊಂದರೆಗೊಳಗಾಗಿ ಈಗಾಗಲೇ ಬಳಲುತ್ತಿದ್ದು ವಂಶಾಭಿವೃದ್ಧಿಯಲ್ಲಿ ಇಳಿಕೆ ಕಂಡುಬರುತ್ತಿದೆ. ಅರಣ್ಯ ನಾಶದೊಂದಿಗೆ ಎಲ್ಲೆಡೆ ಮಾನವ ಹಸ್ತಕ್ಷೇಪಗಳು ಹೆಚ್ಚುತ್ತಿದ್ದು ಒಟ್ಟಿನಲ್ಲಿ ನೈಜವಾದದ್ದು ಏನೂ ಉಳಿದೆ ಇಲ್ಲ ಎಂಬಂತಾಗಿದೆ. ಹೂವಿನಿಂದ ಹೂವಿಗೆ ಹಾರುವ ಜೇನುನೋಣ ಅದೆಷ್ಟು ಕೀಟನಾಶಕಗಳನ್ನು ಹೀರಿದೆಯೋ. ಶ್ರಮಜೀವಿ ಕೂಲಿ ಜೇನು ಪ್ರತಿ ದಿನ ಅತ್ತ ಇತ್ತ ಸುತ್ತಾಡಿ ಹೂಗಳಲ್ಲಿನ ಮಧು ಸಂಗ್ರಹಿಸುತ್ತದೆ. ಬಗೆ ಬಗೆ ಹೂಗಳಿಂದ ಮಧು ಸಂಗ್ರಹ ಕೊಸ್ಕರ ಗಂಟೆಗೆ 25 ಕಿಮೀ ವೇಗದಲ್ಲಿ ಹಾರಬಲ್ಲದು ಅಷ್ಟೇ ಅಲ್ಲದೇ ತಾವು ಸಂಗ್ರಹಿಸಿದ ಮಧುವಿನ ನೀರಿನಂಶ ನಿವಾರಿಸಲು ಕೂಲಿ ನೊಣಗಳು ತಮ್ಮ ರೆಕ್ಕೆಯನ್ನು ಗುಂಯ್ ಎಂದು ಬಡಿಯುತ್ತಿರುತ್ತದೆ ಇವುಗಳ ಜೀವಿತಾವಧಿ ಕೇವಲ 40 ದಿನಗಳಾದರೂ ಅವುಗಳ ಶ್ರಮ ಹೇಳ ತೀರದು. ಅಷ್ಟು ಶ್ರಮವಹಿಸಿ ತಯಾರಿಸಿದ ಜೇನು ತುಪ್ಪವನ್ನು ಮಾನವ ಕಲಬೆರಕೆ ಮಾಡುತ್ತಾನೆ, ಮಾಡಿದ್ದಾನೆ ಅಷ್ಟೇ ಅಲ್ಲದೆ ಮಂಕು ಬುದ್ದಿ ಎನ್ನಬೇಕೋ ಬುದ್ದಿವಂತ ಎನ್ನಲೇ ಅಥವಾ ಎಲೇ ಮನವ ನೀನಾರಿಗಾದೆ ಎನ್ನಲೇ. ಈಗ ಸೀದಾ ಸೀದಾ ಜೇನು ನೊಣಗಳಿಗೆ ವಿಷ ಉಣಿಸ ಹೊರಟೆ.
ಜೇನು ಉದ್ದಿಮೆಯಾಗಿ ರೂಪತಾಳಿದಂದಿನಿಂದ ಜೇನುತುಪ್ಪ ಹಾಗೂ ಜೇನು ಕುಟುಂಬಕ್ಕೆ ಮಾರುಕಟ್ಟೆ ಯಲ್ಲಿ ನಿರಂತರ ಬೇಡಿಕೆ ಇದೆ. ಹೂವಿನಿಂದ ಮಕರಂದ ವನ್ನು ಜೇನುಹುಳುಗಳು ಸಂಗ್ರಹಿಸುವಾಗ ಕೇವಲ ಸಿಹಿ ನೀರಿನಾಂಶವಾಗಿರುತ್ತದೆ ಇವುಗಳ ಶರೀರದ ಒಂದು ಗ್ರಂಥಿಯಲ್ಲಿ ರಾಜ ಶಹಿರಸ ಅಥವಾ ಕಿಣ್ವವು ಮಕರಂದ ವನ್ನು ಜೇನು ತುಪ್ಪವಾಗಿ ಮಾರ್ಪಡುತ್ತವೆ. ವರ್ಣಗಳನ್ನು ಗ್ರಹಿಸುವ ವೇಗ ಮಾನವನಿಗಿಂತ ಐದು ಪಟ್ಟು ಹೆಚ್ಚಾಗಿದೆ ಆದರೂ ಮಾನವ ಜೇನು ನೊಣಗಳನ್ನು ದುಡಿಸಿಕೊಳ್ಳದೆ ತನ್ನ ನೀಚ ಬುದ್ದಿಯನ್ನು ತೋರಿಸಿದ.
100 ಜೇನು ಕುಟುಂಬದಿಂದ ಒಂದು ವರ್ಷದಲ್ಲಿ 300 ರಿಂದ 400 ಕುಟುಂಬ ಮಾಡಬಹುದು. ಕೃತಕ ರೀತಿಯಲ್ಲಿ ಜೇನು ಕುಂಟುಂಬವನ್ನು ಪಾಲುಮಾಡಿ ರಾಣಿ ಕಣ ಉತ್ಪಾದನೆ ಆಗುವಂತೆ ಮಾಡಿ ರಾಣಿ ಜೇನುಹುಳು ಬೆಳೆಸುವುದು ಹೊಸ ರಾಣಿ ನೊಣದಸಂಖ್ಯೆ ಅನುಗುಣವಾಗಿ ಕುಟುಂಬವನ್ನು ಪಾಲುಮಾಡಿ ಜೇನು ಕುಟುಂಬದ ಸಂಖ್ಯೆ ಹೆಚ್ಚು ಮಾಡಬಹುದು ರಾಣಿ ಜೇನುಹುಳು, ಗಂಡು ಜೇನು, ಕೂಲಿನೊಣಗಳನ್ನು ಅಭಿವೃದ್ಧಿಪಡಿಸಿ ಲಾಭದಾಯಕ ಜೇನು ಉದ್ಯಮಕ್ಕೆ ಕೊರತೆ ಇಲ್ಲದಂತೆ ಜೇನು ಸಾಕಿ ನೈಜ ಜೇನು ತುಪ್ಪ ಸಂಗ್ರಹಬೇಕಾದ ಮಾನವ ಸಿಹಿ ನೀಡುವ ಜೇನಿಗೆ ವಿಷ ಉಣಿಸುವ ಮಾನವನಾದ ಎಂಬ ಅಪಕೀರ್ತಿ ಹೊರುವಂತಾಯಿತು.
ಲತಾ ಸಂತೋಷ ಶೆಟ್ಟಿ ಮುದ್ದುಮನೆ