ನಮ್ಮ ದೇಶದಲ್ಲಿರುವ ವಿಪುಲ ಜನಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ದೇಶದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಅನೇಕ ಅವಕಾಶಗಳು ಲಭ್ಯವಿದೆ. ಭಾರತದಂತಹ ಆಗಾಧ ಜನಸಂಖ್ಯೆ ಮತ್ತು ವಿಸ್ತಾರವನ್ನು ಹೊಂದಿರುವ ದೇಶದಲ್ಲಿ ಅದನ್ನು ಜನರಿಗೆ ಮುಟ್ಟಿಸುವಲ್ಲಿ ತೊಡಕುಗಳಿದ್ದು, ಗ್ರಾಮೀಣ ಬಂಟರ ಸಂಘದಂತಹ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ವಹಿಸಿ ಮುಂದೆ ಬರಬೇಕಾಗಿದೆ ಎಂದು ಮಣಿಪಾಲ್ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ನ ಮುಖ್ಯಸ್ಥೆ ಡಾ. ನೀತಾ ಇನಾಂದರ್ ಹೇಳಿದರು. ಕುಂತಳನಗರ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಂಘದ ಸಿಲ್ಕ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆದ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕಾರ್ಯಕ್ರಮದ 7 ಮತ್ತು 8 ನೇ ಬ್ಯಾಚ್ ನ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ 9 ನೇ ಬ್ಯಾಚ್ ನ ವಿದ್ಯಾರ್ಥಿಗಳ ಒರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದ ತರಬೇತಿಯ ಪ್ರಯೋಜಕ ಸಂಸ್ಥೆ ಆಲ್ ಕಾರ್ಗೋ ಲಾಜಿಸ್ಟಿಕ್ ಸಿಎಸ್ಆರ್ ಎಕ್ಸಿಕ್ಯೂಟಿವ್ ಸವಿಸ್ತಾರ್ ಆಳ್ವ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಬಂಟರ ಸಂಘದ ಬದ್ಧತೆ ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿದರು. ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ ಉಡುಪ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಸಕಾರಾಮ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಡಾ. ಎಚ್. ಬಿ. ಶೆಟ್ಟಿ, ಹೇಮಂತ್ ಶೆಟ್ಟಿ, ಸಂಘದ ಟ್ರಸ್ಟಿಗಳಾದ ರಂಜಿನಿ ಹೆಗ್ಡೆ, ಜಗದೀಶ್ ಹೆಗ್ಡೆ, ರಮೇಶ್ ಶೆಟ್ಟಿ ನಿಂಜೂರು, ಕಾರ್ಯಕ್ರಮ ಸಮನ್ವಯಕಾರ ಪದ್ಮನಾಭ ಹೆಗ್ಡೆ, ಕಂಪ್ಯೂಟರ್ ತರಬೇತುದಾರ ವಿಷ್ಣುಮೂರ್ತಿ ಆಚಾರ್ಯ, ಆಮೇಜಾನ್ ಸಂಸ್ಥೆಯ ನಿರ್ದೇಶಕಿ ಸುಮಾ ಉಪಸ್ಥಿತರಿದ್ದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪದ್ಮನಾಭ ಹೆಗ್ಡೆ ವಂದಿಸಿದರು. ನಿಟ್ಟೆ ವಿವಿಯ ವಿಸಿಟಿಂಗ್ ಪ್ರೊಫಸರ್ ದಿವ್ಯರಾಣಿ ಪ್ರದೀಪ್ ಕಾರ್ಯಕ್ರಮ ನೀರೂಪಿಸಿದರು.