ಏನಿದು ಹೊಸ ಪದ್ಯ ಎಂದು ಆಶ್ಚರ್ಯವಾಗುತ್ತಿದೆಯೇ? ಅದನ್ನು ತಣಿಸಲು ನೀವು ಮುಂದೆ ಓದಬೇಕಾಗುತ್ತದೆ. ಅದೃಷ್ಟ ಹೇಗೆ ಒಲಿಯುತ್ತದೆ ಎಂಬುದನ್ನು ಯಾರೂ ಊಹಿಸಲಾಗದು. ಜತೆಗೆ ದೂರಗಾಮಿ ಚಿಂತನೆ, ಹೊಸತನ ಮತ್ತು ಪ್ರತಿಭೆಗಳು ಕೂಡ ಸೇರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಉದಾಹರಣೆಯಾಗಿ ನಮ್ಮೆದುರು ನಿಲ್ಲುವವರು ಉದ್ಯಮಿ ಬರೋಡ ಶಶಿಧರ ಶೆಟ್ಟಿ. ಇಂಡಸ್ಟ್ರೀಯಲ್ ಕ್ಯಾಟರಿಂಗ್, ಡಿಜಿಟಲ್ ಮಾರ್ಕೆಟಿಂಗ್, ಗುತ್ತಿಗೆ ಸಹಿತ ವಿವಿಧ ರೀತಿಯ ಉದ್ಯಮ ರಂಗದಲ್ಲಿ ಯಶಸ್ಸು ಸಾಧಿಸಿರುವ ಬರೋಡ ಶಶಿಧರ ಶೆಟ್ಟಿ ಅವರು ಈಗ ತನ್ನ ಚೊಚ್ಚಲ ಸಿನಿಮಾದಲ್ಲಿ ಭರ್ಜರಿ ಖ್ಯಾತಿ ಗಳಿಸಿದ್ದಾರೆ. ಈ ಮೂಲಕ ಇವರು ಮುಟ್ಟಿದೆಲ್ಲವೂ ಚಿನ್ನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಅದಕ್ಕೆ ಕಾರಣವೇ ಕರಾವಳಿ ಪ್ರತಿಭೆಗಳ ‘ಸು ಫ್ರಂ ಸೋ’ ಸಿನಿಮಾ.

ಇದೇ ಮೊದಲ ಬಾರಿಗೆ ಬರೋಡ ಶಶಿಧರ ಶೆಟ್ಟಿ ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ‘ಸು ಫ್ರಂ ಸೋ’ ಸಿನಿಮಾದ ಓರ್ವ ನಿರ್ಮಾಪಕರಾಗಿರುವ ಇವರು ಅದೃಷ್ಟವಂತ ಹಾಗೂ ಯಶಸ್ವಿ ಸಾಧಕ ಎಂಬುದು ಈಗಾಗಲೇ ಸಾಬೀತಾದ ಸತ್ಯ. ಅವರ ಚೊಚ್ಚಲ ಸಿನಿಮಾ ಹಿಟ್ ಆಗಲು ಅದೃಷ್ಟದ ಜೊತೆಗೆ ಪ್ರತಿಭೆಗಳು ಕೆಲಸ ಮಾಡಿವೆ. ಈಗ ಎಲ್ಲೆಲ್ಲೂ “ಬಂದರೋ ಬಂದರು ಬಾವ ಬಂದರು” ಹಾಡಿನದ್ದೇ ಸುದ್ದಿ. ಅದಕ್ಕೆ “ಗೆದ್ದರೋ ಗೆದ್ದರು ಶಶಿಯಣ್ಣ ಗೆದ್ದರು” ಎಂಬುದು ಅವರ ಅಭಿಮಾನಿಗಳ ಸೇರ್ಪಡೆ. ‘ಸು ಫ್ರಂ ಸೋ’ ಸಿನಿಮಾ ಹಿಟ್ ಆದ ಕಾರಣ ಈಗ ಶಶಿಧರ ಶೆಟ್ಟಿ ಅವರನ್ನು ಸಂಪರ್ಕಿಸುವ ಸಿನಿಮಾ ಇಂಡಸ್ಟ್ರಿಯವರು ಒಂದು ಸುಂದರ ಕಥೆ ಇದೆ. ಸಿನಿಮಾ ನಿರ್ಮಾಣ ಮಾಡುತ್ತೀರಾ ಎಂದು ಕೇಳುತ್ತಿರುವುದು ಹೆಚ್ಚುತ್ತಿದೆ. ಬಾಲಿವುಡ್ ನ ಮಂದಿಯೂ ಇವರನ್ನು ಸಿನಿಮಾ ನಿರ್ಮಾಣಕ್ಕಾಗಿ ಸಂಪರ್ಕಿಸುತ್ತಿದ್ದಾರೆ. ಆದರೆ ಹಾಗೆಲ್ಲ ಒಮ್ಮೆಲೇ ತೀರ್ಮಾನ ತೆಗೆದುಕೊಳ್ಳಲು ಅವರು ಹೋಗುವುದಿಲ್ಲ. ಯಶಸ್ಸನ್ನು ಉಳಿಸಿಕೊಳ್ಳಬೇಕು. ‘ಸು ಫ್ರಂ ಸೋ’ ತಂಡದಿಂದಲೇ ವರ್ಷಕ್ಕೊಂದು ಸಿನಿಮಾ ಮಾಡುವ ಯೋಚನೆ ಸದ್ಯ ನನ್ನಲ್ಲಿದೆಯೇ ಹೊರತು ಬಾಲಿವುಡ್ ಸಹಿತ ಬೇರೆ ಯಾವುದೇ ಕಡೆಗೆ ಹೋಗುವ ಚಿಂತನೆ ಇಲ್ಲ ಎಂದು ಶಶಿಧರ ಶೆಟ್ಟಿ ಹೇಳುತ್ತಿದ್ದಾರೆ. ಸರಳ, ಸ್ವಾತಿಕ ಬರೋಡ ಶಶಿಧರ ಶೆಟ್ಟಿ ಅವರು ಎಷ್ಟು ಎತ್ತರಕ್ಕೇರಿರುವ ಉದ್ಯಮಿಯಾಗಿದ್ದರೂ ಅವರ ಸರಳತೆ ಹಾಗೂ ಸ್ವಾತಿಕತೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಹಣ, ಅಂತಸ್ತು, ಸ್ಥಾನಮಾನ ಹೀಗೆ ಯಾವುದನ್ನೂ ಪರಿಗಣಿಸದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಓರ್ವ ಅಪರೂಪದ ವ್ಯಕ್ತಿ. ಅವರ ಈ ಗುಣ ವಿಶೇಷದ ಕಾರಣದಿಂದಲೇ ಅವರಿಗೆ ಅದೃಷ್ಟ ಸಾಲು ಸಾಲಾಗಿ ಒಲಿದು ಬರುತ್ತಿದೆ ಎಂದು ಅವರೊಂದಿಗೆ ನಿಕಟ ಸಂಬಂಧ ಇರುವವರು ಹೇಳುತ್ತಿದ್ದಾರೆ.