ಪುಣೆ ಬಂಟರ ಸಂಘದ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ವತಿಯಿಂದ ಪುಣೆ ಗ್ರಾಮೀಣ ಭಾಗದ ನಸರಾಪುರದ ಮಾವುಲಿ ಅನಾಥಾಶ್ರಮದ ಮಕ್ಕಳಿಗೆ ಮಾರ್ಚ್ ೨೯ ರಂದು ಮಧ್ಯಾಹ್ನದ ಊಟ ಮತ್ತು 2 ತಿಂಗಳಿಗೆ ಬೇಕಾದಷ್ಟು ಆಹಾರದ ಸಾಮಾಗ್ರಿಯನ್ನು ನೀಡಲಾಯಿತು. ಈ ಸಂದರ್ಭದ ಲ್ಲಿ ಊರೂರು ತಿರುಗುತ್ತ ಕೀರ್ತನೆ ಮಾಡಿ ಮಕ್ಕಳನ್ನು ಪಾಲನೆ ಮಾಡುವಂತಹ ಮಹಾರಾಜ್ ಗುರೂಜಿಯನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ ಮಹಿಳಾ ಸಮಿತಿಯ ಅಧ್ಯಕ್ಷೆ ಯಶೋಧಾ ಜಿ ಶೆಟ್ಟಿ, ಪುಣೆ ಬಂಟರ ಸಂಘದ ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ವಸಂತ್ ಎ ಶೆಟ್ಟಿ ಮತ್ತು ಸಮಿತಿಯ ಸದಸ್ಯರು, ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಇಂತಹ ಪುಣ್ಯ ಕಾರ್ಯಕ್ರಮನ್ನು ಮಾಡಿದ್ದಕ್ಕಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಸಮಿತಿಯ ಎಲ್ಲಾ ಸದಸ್ಯರಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿಯವರು ಈ ಸಂದರ್ಭ ಮಾತನಾಡಿ ನಮ್ಮ ಸಮಿತಿ ವತಿಯಿಂದ ಪ್ರತೀ ವರ್ಷ ಇಂತಹ ಸೇವಾ ಸಂಸ್ಥೆಗಳ ಅನಾಥ, ವಿಕಲಾಂಗ ಮಕ್ಕಳಿಗೆ, ವೃದ್ಧಾಶ್ರಮಗಳಿಗೆ ನಮ್ಮಿಂದ ಸಾಧ್ಯವಾದಷ್ಟು ನೆರವು ನೀಡುತ್ತಾ ಬಂದಿದ್ದೇವೆ. ಇಂದು ಕೂಡಾ ಅಂತಹ ಸುಯೋಗ ನಮಗೆ ಒದಗಿ ಬಂದಿದ್ದು ಇಲ್ಲಿ ಬಹಳಷ್ಟು ಮಕ್ಕಳು ಉತ್ತಮ ಪ್ರತಿಭಾವಂತರಿದ್ದಾರೆ. ಇಲ್ಲಿನ ಸಂಸ್ಥೆ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡುತ್ತಾ ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯವಾಗಿದೆ. ನಮ್ಮ ಸಮಿತಿಯ ಈ ಕಾರ್ಯಕ್ಕೆ ಸಹಕಾರ ನೀಡಿದ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ, ಮಹಿಳಾ ವಿಭಾಗಕ್ಕೆ ವಿಭಾಗಕ್ಕೆ ಕೃತಜ್ಞತೆಗಳು ಎಂದರು.
ಪುಣೆ ಬಂಟರ ಸಂಘದ ಜೊತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನಿಟ್ಟೆ ಮಾತನಾಡಿ ಇಂದಿನ ದಿನ ಈ ಮಕ್ಕಳ ಸಂಸ್ಥೆಗೆ ಬಂದು ಇಲ್ಲಿನ ಮಕ್ಕಳನ್ನು ಕಂಡಾಗ ಹೃದಯ ತುಂಬಿ ಬಂದಿದೆ. ದಕ್ಷಿಣ ಪ್ರಾದೇಶಿಕ ಸಮಿತಿ ಶೇಖರ್ ಸಿ ಶೆಟ್ಟಿಯವರ ನೇತೃತ್ವದಲ್ಲಿ ಬಹಳ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಇಂದು ಈ ಅನಾಥಾಶ್ರಮವನ್ನು ಗುರುತಿಸಿ ಮಾಡುತ್ತಿರುವ ಸೇವಾ ಕಾರ್ಯ ಪುಣ್ಯದ ಕಾರ್ಯವಾಗಿದೆ ಎಂದರು. ಪ್ರಮೀಳಾ ಜಗದೀಶ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ದಕ್ಷಿಣ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಧಾಕರ್ ಸಿ ಶೆಟ್ಟಿ, ಕಾರ್ಯದರ್ಶಿ ದಾಮೋಧರ ಜಿ ಶೆಟ್ಟಿ, ಸಮಿತಿ ಪದಾಧಿಕಾರಿಗಳಾದ ಜಯ ಎಸ್ ಶೆಟ್ಟಿ, ರಮೇಶ್ ಎಸ್ ಶೆಟ್ಟಿ, ಜಗದೀಶ್ ಬಿ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ದಿವಾಕರ್ ಎನ್ ಶೆಟ್ಟಿ, ರತ್ನಾಕರ್ ಆರ್ ಶೆಟ್ಟಿ, ಸಂಪತ್ ಪಿ ಶೆಟ್ಟಿ, ರಾಜೇಶ್ ಎಲ್ ಶೆಟ್ಟಿ, ವಸಂತ್ ಎಂ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋಧ ಜಿ ಶೆಟ್ಟಿ, ಕಾರ್ಯದರ್ಶಿ ರೋಹಿಣಿ ಶೆಟ್ಟಿ, ಕೋಶಾಧಿಕಾರಿ ಶೋಭಾ ಶೆಟ್ಟಿ, ಸದಸ್ಯರಾದ ಸುಮಂಗಲಾ ಶೆಟ್ಟಿ, ಸುನಿತಾ ಶೆಟ್ಟಿ, ಲತಾ ಎಸ್ ಶೆಟ್ಟಿ, ವಾರಿಜ ಶೆಟ್ಟಿ, ಅಂಬಿಕಾ ವಿ ಶೆಟ್ಟಿ, ಪ್ರಮೀಳಾ ಬಿ ಶೆಟ್ಟಿ, ವಿನೋದಾ ವಿ ಶೆಟ್ಟಿ, ರೂಪಾ ಶೆಟ್ಟಿ, ಪ್ರೇಮಾ ಶೆಟ್ಟಿ, ವನಿತಾ ಎಸ್ ಶೆಟ್ಟಿ ಉಪಸ್ಥಿತರಿದ್ದರು.