ಪುತ್ತೂರಿನ ದರ್ಬೆಯಲ್ಲಿರುವ ಉಷಾ ಪಾಲಿ ಕ್ಲಿನಿಕ್ ನಲ್ಲಿ ಡಾ.ಶ್ರೇಷ್ಠ ಆಳ್ವ ರವರು ಏ.3ರಿಂದ ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 5 ರ ತನಕ ಸೇವೆಗೆ ಲಭ್ಯವಿದ್ದಾರೆ. ಇವರು ಜನರಲ್ ಪ್ರಾಕ್ಟಿಷನರ್ ನೆಲೆಯಲ್ಲಿ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ನೀಡಲಿದ್ದಾರೆ.
ಅನಂತಾಡಿ ಗ್ರಾಮದ ಗಂಗಾಧರ ಆಳ್ವ ಹಾಗೂ ನವೀನಾ ಆಳ್ವಾರವರ ಪುತ್ರಿಯಾದ ಡಾ.ಶ್ರೇಷ್ಠ ಆಳ್ವರವರು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮಾಣಿ ಬಾಲ ವಿಕಾಸ ಇಂಗ್ಲೀಷ್ ಮೀಡಿಯಂ ಶಾಲೆ, ಪಿಯುಸಿಯನ್ನು ಪುತ್ತೂರಿನ ಅಂಬಿಕಾ ಪಿಯು ಕಾಲೇಜು, ಎಂ. ಬಿ. ಬಿ. ಎಸ್ ಪದವಿಯನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿ ಕೊಡಗಿನ ಸುಲರ್ಬಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದರು.