ಇತಿಹಾಸ ಪ್ರಸಿದ್ದ ಕೋಳ್ಯೂರು
ಶ್ರೀ ಶಂಕರ ನಾರಾಯಣ ದೇವಸ್ಥಾನ ಸಮೀಪದ ಕಳಿಯೂರು ಶ್ರೀ ರಕ್ತೇಶ್ವರೀ ಸಾನಿಧ್ಯ ಪರಿಸರದಲ್ಲಿ ಬಂಟ ಸಮುದಾಯದ ಕಳಿಯೂರು ದೇವಸ್ಯ ಗುತ್ತು ಮನೆಯ ಸಾನಿಧ್ಯ ಶಕ್ತಿಗಳ ಬ್ರಹ್ಮಕಲಶೋತ್ಸವ ಮೇ 3 ರಂದು ನಡೆಯಲಿದ್ದು ಇದರ ಯಶಸ್ವಿಗಾಗಿ ಸಮಾಲೋಚನ ಸಭೆ ದೈವಸ್ಥಾನದ ಪರಿಸರದಲ್ಲಿ ಜರಗಿತು. ಕಳಿಯೂರು ದೇವಸ್ಯಗುತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕಳಿಯೂರು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಿಶೋರ್ ರೈ ದೇಲಂಪಾಡಿ ಅಧ್ಯಕ್ಷತೆವಹಿಸಿದ್ದರು. ಧಾರ್ಮಿಕ ಮುಂದಾಳು, ಜ್ಯೋತಿಷ್ಯ ಅನುವಾದಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಮಾರ್ಗದರ್ಶನದಲ್ಲಿ ವಿವಿಧ ಸಮಿತಿ ರಚಿಸಿ ಕೆಲಸ ಕಾರ್ಯಗಳ ಬಗ್ಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಸಾರಂಗಪಾಣಿ ಶ್ರೀಮಹಾವಿಷ್ಣು ಶ್ರೀದುರ್ಗಾ ಕ್ಷೇತ್ರದ ಶಶಿಧರ ನಾಯ್ಕ್ , ಕೊರಗಜ್ಜ ಸೇವಾ ಸಮಿತಿಯ ರಘುರಾಮ ಮಂದ್ರಬೈಲ್, ಧ.ಗ್ರಾ. ಯೋಜನೆಯ ಒಕ್ಕೂಟಗಳ ಅಧ್ಯಕ್ಷ ದಿನೇಶ್ ರೆಂಜಪಡ್ಪು, ಶ್ರೀರಕ್ತೇಶ್ವರಿ ಭಜನಾ ಮಂದಿರದ ಮಾಜಿ ಅಧ್ಯಕ್ಷ ಮೋನಪ್ಪ ಪೂಜಾರಿ, ಸತ್ಯಪ್ರಭಾ ಮೊದಲಾದವರು ಉಪಸ್ಥಿತರಿದ್ದರು. ಜಿಶಾಲಿ ಜೆ.ಶೆಟ್ಟಿ ಪ್ರಾರ್ಥನೆ ಹಾಡಿದರು. ಬಾಲಕೃಷ್ಣ ಶೆಟ್ಟಿ ಇಡಿಯ ಸ್ವಾಗತಿಸಿದರು. ರೀತಾ ಪಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀದೈವಗಳ ಬ್ರಹ್ಮಕಲಶೋತ್ಸವ ಕಾರ್ಯವನ್ನು ಊರವರ ಸಹಭಾಗಿತ್ವದಲ್ಲಿ ಉತ್ಸವಾಚರಣೆಯಾಗಿ ನಡೆಸಬೇಕೆಂಬ ಉದ್ದೇಶದಿಂದ ಗ್ರಾಮಸ್ಥರು, ಗ್ರಾಮದ ಕ್ಷೇತ್ರ, ಮಂದಿರ ಪದಾಧಿಕಾರಿಗಳ, ಕ್ಲಬ್ ಸಂಘಟನೆಗಳು, ಸ್ವಸಂಘಗಳು, ಕುಟುಂಬಶ್ರೀ ಸಂಘಟನೆಗಳ ಸಹಕಾರ ಯಾಚಿಸಲಾಗಿದೆ ಎಂದು ತಿಳಿಸಿದರು.