ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವ ಸಂಭ್ರಮದಿಂದ ಜರಗಿತು.

ಮಧ್ಯಾಹ್ನ ರಥಾರೋಹಣ, ಅನ್ನಸಂತರ್ಪಣೆ, ಸಂಜೆ ರಥೋತ್ಸವ, ಸುಡುಮದ್ದು ಪ್ರದರ್ಶನ ನೆರವೇರಿತು. ವಿಭಿನ್ನ ವೇಷಭೂಷಣ, ಬ್ಯಾಂಡ್ ಮನಸೂರೆಗೊಂಡಿತು. ಸಹಸ್ರಾರು ಭಕ್ತರು ಪಾಲ್ಗೊಂಡರು. ಇದಕ್ಕೂ ಮೊದಲು ಕುಂಭ ಸಂಕ್ರಮಣ ದಂದು ಸೋಮವಾರ ರಾತ್ರಿ ಕೆಂಡಸೇವೆ ಜರಗಿತು. ಫೆ.15ರ ರಾತ್ರಿ ದೀಪೋತ್ಸವ, ಐದೂ ಮೇಳದವರಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ.





































































































