ದೇಶದ ಜನರಿಗೆ ಕೊರೋನಾ ಕಂಟಕ, ಚೀನಾದಲ್ಲಿ ಅಟ್ಟಹಾಸ ಮರೆಯುತ್ತಿದೆ ಡೆಡ್ಲಿ ವೈರಸ್…! ಈಗಲೇ ಕಟ್ಟಚ್ಚರ ಮಾಡಿದರೆ ಭಯಾನಕ ಕಾಯಿಲೆಯಿಂದ ಕರ್ನಾಟಕ ಸಕ್ಸಸ್….!
ಕರ್ನಾಟಕಕ್ಕೆ ಡೆಡ್ಲಿ ವೈರಸ್ ಭೀತಿ, ಕರ್ನಾಟಕದಲ್ಲಿ ಕಟ್ಟೇಚ್ಚರಕ್ಕೆ ಸಿ.ಎಂ ಬೊಮ್ಮಾಯಿ ಕರೆ…! ಕಡ್ಡಾಯ ಮಾಸ್ಕ್, ರ್ಯಾಂಡಮ್ ಸ್ಯಾಂಪಲ್ಗೆ ಸೂಚನೆ…!
– ಕೆ .ಸಂತೋಷ ಶೆಟ್ಟಿ, ಮೊಳಹಳ್ಳಿ ,ಕುಂದಾಪುರ ,ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
ದೇಶವನ್ನ ಕಾಡಿದ ವಿಚಿತ್ರ ಕಾಯಿಲೆಗಳಲ್ಲಿ ಕೊರೋನಾ ಹೆಮ್ಮಾರಿ ಜನರನ್ನ ಭಯ ವಾತಾವರಣದಲ್ಲಿ ಮಲಗಿಸಿತ್ತು ಆದರೆ ಅದೇ ವಾತಾವರಣ ಮತ್ತೆ ನಿರ್ಮಾಣ ಮಾಡಲು ಚೀನಾದಿಂದ ವೈರಸ್ ಗಳು ದೇಶವನ್ನು ಹೊಕ್ಕಲು ದೇಶವನ್ನ ಹಾಳು ಮಾಡಲು ಮತ್ತೆ ಸಂಚುರೂಪಿಸುತ್ತಿದೆ. ಕಾಣದ ಕೈಗಳಿಂದ ನಡೆದಂತಹ ದುರಂತ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿದ ಕರೋನ ವೈರಸ್, ದೇಶಾದ್ಯಂತ ಸಂಚಲನ ಮೂಡಿಸಿ ಸಾವಿರಾರು ಜನರ ಸಾವಿಗೆ ಕಾರಣವಾದ ಡೆಡ್ಲಿ ವೈರಸ್ ಮತ್ತೆ ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿದೆ ಸಾವಿರಾರು ರೋಗಿಗಳು ಬೀದಿ ಹೆಣವಾಗುತ್ತಿದ್ದಾರೆ ಸರಿಯಾದ ಚಿಕಿತ್ಸೆ ಸಿಗದೇ ಸಾರ್ವಜನಿಕರು ಕಂಗಲಾಗುತ್ತಿದ್ದಾರೆ ಅಲ್ಲಿನ ಸರಕಾರ ಕೈಕಟ್ಟಿ ಕುಳಿತಿರುವುದು ದುರಂತದ ಸಂಗತಿ…! ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು. ತಕ್ಷಣಕ್ಕೆ ಎಲ್ಲಾ ಕಡೆ ಸ್ಕ್ರೀನಿಂಗ್ ಮಾಡಲ್ಲ. ವಿಮಾನ ನಿಲ್ದಾಣದಲ್ಲಿ ರ್ಯಾಂಡಮ್ ಸ್ಯಾಂಪಲ್ ಪರೀಕ್ಷೆ ಮಾಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಮಾಹಾಮಾರಿ ಕೊರೋನಾ ವೈರಸ್ ಉಲ್ಬಣಗೊಂಡಿದೆ. ಇದರ ಬೆನ್ನಲ್ಲೆ ಕರ್ನಾಟಕ ಸರ್ಕಾರವು ಸಹ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು(ಡಿ.22) ಬೆಳಗಾವಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಸಿದರು. ಸಭೆಯಲ್ಲಿ ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡಾಯ ಸೇರಿದಂತೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಕುರಿತಾಗಿ ಸುವರ್ಣಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಮಾಸ್ಕ್ ಕಡಾಯ: ಡಾ. ಕೆ.ಸುಧಾಕರ್
ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು. ತಕ್ಷಣಕ್ಕೆ ಎಲ್ಲಾ ಕಡೆ ಸ್ಕ್ರೀನಿಂಗ್ ಮಾಡಲ್ಲ. ದೇಶದಿಂದ ಬರುವ ಶೇ.3ರಷ್ಟು ಜನರಿಗೆ ವಿಮಾನ ನಿಲ್ದಾಣದಲ್ಲಿ ರ್ಯಾಂಡಮ್ ಸ್ಯಾಂಪಲ್ ಪರೀಕ್ಷೆ ಮಾಡಲಾಗುವುದು ರಾಜ್ಯದಲ್ಲಿ ಸದ್ಯ 4 ಸಾವಿರ ಕೋವಿಡ್ ಟೆಸ್ಟ್ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸುತ್ತೇವೆ. ಕೊರೊನಾ ರೂಪಾಂತರಿ ತಳಿ ವೇಗವಾಗಿ ಹರಡುವ ಮಾಹಿತಿಯಿದೆ. ಮತ್ತಷ್ಟು ವರದಿ ಬಂದ ನಂತರ ಅಧ್ಯಯನ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಆದಷ್ಟು ಬೇಗ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು
ಆದಷ್ಟು ಬೇಗ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಕೋವಿಡ್ ಕಡಿಮೆಯಾದ ಹಿನ್ನೆಲೆ ಲಸಿಕೆ ಪಡೆಯಲು ಮೀನಮೇಷ ಮಾಡಬಾರದು. ಎಲ್ಲರೂ ಬೂಸ್ಟರ್ ಡೋಸ್ ಪಡೆಯಬೇಕು. ಶೇಕಡಾ 20ರಷ್ಟು ಜನರು ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಎಲ್ಲಾ ಕಡೆ ಕ್ಯಾಂಪ್ ಮಾಡಿ ಬೂಸ್ಟರ್ ಡೋಸ್ ನೀಡಲು ನಿರ್ಧಾರ ಮಾಡಲಾಗಿದೆ.
ಬೂಸ್ಟರ್ ಡೋಸ್ ಲಸಿಕೆ ಪಡೆದರೆ ಯಾವುದೇ ಅಪಾಯ ಆಗುವುದಿಲ್ಲ. ಸೈಡ್ ಎಫೆಕ್ಟ್ಗೂ ಲಸಿಕೆಗೂ ಯಾವುದೇ ಸಂಬಂಧ ಇಲ್ಲ. ಇನ್ನು ಹೊಸ ವರ್ಷ, ಕ್ರಿಸ್ಮಸ್ ಆಚರಣೆಗೆ ಅನುಮತಿ ನೀಡುವ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಸಂಜೆಯೊಳಗೆ ಸ್ಪಷ್ಟವಾದ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಗೈಡ್ಲೈನ್ಸ್ ಕುರಿತು ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿಸಿದರು.
ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಸಚಿವ ಡಾ.ಸುಧಾಕರ್
ಹೊಸ ವರ್ಷ ಹಾಗೂ ಕ್ರಿಸ್ ಮಸ್ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಸಂಜೆವೊಳಗೆ ಸ್ಪಷ್ಟವಾದ ಮಾರ್ಗಸೂಚಿ ಮಾಡುತ್ತೇವೆ. ಸದ್ಯ ಅದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಒಳಾಂಗಣದಲ್ಲಿ ಮಾಸ್ಕ್ ಧರಿಸಬೇಕು ಎಂದರು. ಭಾರತ್ ಜೋಡೋ ಯಾತ್ರೆ ತಡೆಯಲು ಕೋವಿಡ್ ನೆಪ ಆರೋಪ ಮಾಡಿದ್ದು, ಕಳೆದ 3 ತಿಂಗಳಿಂದ ಕೋವಿಡ್ ಬಗ್ಗೆ ಯಾವುದೇ ಮಾತನಾಡಿಲ್ಲ. ಚೀನಾ, ಅಮೆರಿಕ ಸೇರಿದಂತೆ ಹಲವು ದೇಶದಲ್ಲಿ ಜಾಸ್ತಿಯಾಗುತ್ತಿದೆ. ಅಲ್ಲೆಲ್ಲ ನಾವು ಕೊರೊನಾ ಪ್ರಕರಣ ಹೆಚ್ಚಿಸಿದ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಚಿವ ಡಾ.ಸುಧಾಕರ್ ಟಾಂಗ್ ನೀಡಿದರು.