ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರದ ಕಾಮಗಾರಿ ವೀಕ್ಷಣೆಗೆ ಪುಣೆ ಸಮಿತಿಯ ಅಧ್ಯಕ್ಷರಾದ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಶ್ರೀ ಸಂತೋಷ್ ವಿ.ಶೆಟ್ಟಿ ಮತ್ತವರ ತಂಡ ಭೇಟಿ ನೀಡಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿಯವರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿಯವರು ಮಾರಿಯಮ್ಮನ ಸನ್ನಿದಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.
ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಕಾಪು ಹೊಸ ಮಾರಿಗುಡಿ ಕ್ಷೇತ್ರದ ಸಮಿತಿ ಪುಣೆಯಲ್ಲಿ ಈಗಾಗಲೇ ರಚನೆಯಾಗಿದ್ದು, ಕಟೀಲು ಅಮ್ಮನ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ಕೂಡಾ ಆಯೋಜಿಸಿದ್ದೆವು, ಊರಿನ ಸಮಿತಿಯ ಪದಾಧಿಕಾರಿಗಳು ಪುಣೆ ಸಮಿತಿಯ ಮೊದಲ ಸಭೆಗೆ ಆಗಮಿಸಿ ನಮ್ಮೊಂದಿಗೆ ಸಮಿತಿ ರಚನೆಯಲ್ಲಿ ಸಹಕರಿಸಿದ್ದರು, ಸುಮಾರು ಒಂದು ಸಾವಿರ ಜನರ ಉಪಸ್ಥಿತಿಯಲ್ಲಿ ಸಮಿತಿ ರಚನೆ ಮಾಡಿದ್ದು, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೊಡ್ಡ ಮಟ್ಟದ ದೇಣಿಗೆಯನ್ನು ನೀಡಬೇಕೆನ್ನುವ ಆಶಯವನ್ನು ಹೊಂದಿದ್ದೇವೆ, ಕ್ಷೇತ್ರದ ಕಾಮಗಾರಿಯನ್ನು ವೀಕ್ಷಿಸುವಾಗ ಆಶ್ಚರ್ಯವಾಗುತ್ತಿದೆ, ಅರೋಗ್ಯ ವ್ಯಾಪಾರ ಮನಶಾಂತಿ ಉತ್ತಮವಾಗಿದ್ದರೆ ನಾವು ದೊಡ್ಡ ಮಟ್ಟದ ದೇಣಿಗೆಯನ್ನು ನೀಡಲು ಸಾಧ್ಯವಿದೆ, ಕಾಪು ಎಂದರೆ ನಮ್ಮನ್ನು ಕಾಯುವ ಅಮ್ಮ, ಕಾಪು ಬರೀ ಕಾಪು ಅಥವಾ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಲ್ಲ, ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಇಲ್ಲಿಗೆ ಮಾತ್ರ ಸೀಮಿತವಲ್ಲ, ದೇಶದಾದ್ಯಂತ, ಪ್ರಪಂಚದಾದ್ಯಂತದಿಂದ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ಮುಂದಿನ ದಸರಾದ ಒಳಗೆ ನಾವೆಲ್ಲರೂ ಶಕ್ತಿ ಮೀರಿ ಸಹಕಾರ ನೀಡಿದರೇ ಅದೇ ನಮ್ಮೆಲ್ಲರ ಭಾಗ್ಯ, ಶಿಲಾಸೇವೆ ಎಂಬ ಯೋಜನೆ ಎಲ್ಲರಿಗೂ ಮೆಚ್ಚುಗೆಯಾಗಿದೆ, 9ರ ಸಂಖ್ಯೆಯಲ್ಲಿರುವ ಶಿಲಾಸೇವೆ ಅತ್ಯುತ್ತಮ ಕಲ್ಪನೆ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಕಲ್ಯಾ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀ ಯೋಗಿಶ್ ವಿ. ಶೆಟ್ಟಿ ಬಾಲಾಜಿ, ಕಟ್ಟಡ ಸಮಿತಿಯ ಮುಖ್ಯ ಸಂಚಾಲಕರಾದ ಶ್ರೀ ಭಗವಾನ್ ದಾಸ್ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ ಜಗದೀಶ್ ಬಂಗೇರ, ಶ್ರೀ ಚಂದ್ರಶೇಖರ್ ಅಮೀನ್ ಮತ್ತು ಪುಣೆ ಸಮಿತಿಯ ಪದಾಧಿಕಾರಿಗಳಾದ ಪಾದೂರು ಹೊಸಮನೆ ಶ್ರೀ ಮಾಧವ ಆರ್ ಶೆಟ್ಟಿ , ಪುತ್ತೂರು ಶ್ರೀ ಪ್ರವೀಣ್ ಶೆಟ್ಟಿ ,ಶ್ರೀ ದಿನೇಶ್ ಶೆಟ್ಟಿ ಕಳತ್ತೂರ್ , ಶ್ರೀ ವಿಶ್ವನಾಥ್ ಡಿ ಶೆಟ್ಟಿ ಪಿಂಪ್ರಿ , ಶ್ರೀ ಸತೀಶ್ ಆರ್ ಶೆಟ್ಟಿ ,ಶ್ರೀಮತಿ ಸುಲತಾ ಎಸ್ ಶೆಟ್ಟಿ , ಶ್ರೀ ಜಗದೀಶ್ ಶೆಟ್ಟಿ ಮಾಜಿ ಕಾರ್ಪೊರೇಟರ್ ಪಿಂಪ್ರಿ , ಎರ್ಮಾಳ್ ಶ್ರೀ ಬಾಲಚಂದ್ರ ಶೆಟ್ಟಿ ಪುಣೆ ಗೇಟ್ , ಶ್ರೀ ಮಂಜುನಾಥ್ ಶೆಟ್ಟಿ , ಶ್ರೀ ಶ್ರೀಧರ್ ಶೆಟ್ಟಿ ,ಶ್ರೀ ವಿಠಲ್ ಶೆಟ್ಟಿ , ಶ್ರೀ ಆನಂದ್ ಶೆಟ್ಟಿ ಮಿಜಾರ್ , ಶ್ರೀ ಶೇಖರ್ ಶೆಟ್ಟಿ , ಶ್ರೀ ಸುಧಾಕರ್ ಶೆಟ್ಟಿ, ಶ್ರೀಮತಿ ಆಶಾ ಪ್ರವೀಣ್ ಶೆಟ್ಟಿ, ಶ್ರೀ ಶಂಕರ್ ಶೆಟ್ಟಿ, ಶ್ರೀಮತಿ ಮಲ್ಲಿಕಾ ಆನಂದ್ ಶೆಟ್ಟಿ, ದೇವಳದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Previous Articleಕಿರಿಯ ಸ್ತ್ರೀ ವೇಷಧಾರಿ ಗುರುತೇಜ ಶೆಟ್ಟಿ ಒಡಿಯೂರು