ಅಕ್ಟೋಬರ್ 31ರಂದು ಪುರಭವನದಲ್ಲಿ ಜರಗಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ನಗರ ಘಟಕದ ಪದಗ್ರಹಣ ಮತ್ತು 4ನೇ ವಾರ್ಷಿಕ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ನಗರದ ಅಟ್ಟಣೆ ಹೋಟೇಲಿನಲ್ಲಿ ಜರಗಿದ್ದು, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ HMS ನ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಸುರೇಶ್ಚಂದ್ರ ಶೆಟ್ಟಿಯವರು ಪಟ್ಲ ಫೌಂಡೇಶನಿನ ಕಾರ್ಯಸಾಧನೆಯ ಬಗ್ಗೆ ಜಗತ್ತೇ ಕೊಂಡಾಡುವಂತೆ ಮಾಡಿದ ಪಟ್ಲ ಸತೀಶ್ ಶೆಟ್ಟಿಯವರಿಗೆ ಕಟೀಲು ದುರ್ಗಾಮಾತೆಯ ಸಂಪೂರ್ಣ ಆಶೀರ್ವಾದವಿದೆ. ಸರಸ್ವತಿ ಮಾತೆಯ ಅನುಗ್ರಹದಿಂದ ನಾವೆಲ್ಲರೂ ಯಕ್ಷಗಾನದ ಮಧುರ ಗಾನವನ್ನು ಅವರಿಂದ ಕೇಳುವಂತಾಗಿದೆ. ಫೌಂಡೇಶನಿನ ಪ್ರತಿಯೊಂದು ಘಟಕಗಳು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಶಕ್ತ ಕಲಾವಿದರ ನೆರವಾಗುವುದರೊಂದಿಗೆ ಟ್ರಸ್ಟ್ ಇನ್ನಷ್ಟು ಹೆಮ್ಮರವಾಗಿ ಬೆಳೆಯಲೆಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ಮಹೇಶ್ ಮೋಟಾರ್ಸ್ ಮಾಲಕರಾದ ಶ್ರೀ ಜಯರಾಮ ಶೇಖ ದೀಪ ಬೆಳಗಿಸಿ, ಪಟ್ಲ ಫೌಂಡೇಶನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಲಿಯೆಂದು ಶುಭ ಹಾರೈಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ Ln ಅನಿಲ್ ದಾಸ್ mjf ಇವರು ಯಕ್ಷಗಾನದ ಕಲಾವಿದರ ಕಾಮಧೇನು ಎಂದು ಕರೆಯುವ ಪಟ್ಲ ಸತೀಶಣ್ಣನ ಪಟ್ಲ ಫೌಂಡೇಶನಿಗೆ ಸರ್ವರೂ ಆಶೀರ್ವಾದ ಹಾಗೂ ಸಹಕಾರದಿಂದ ಕೈಜೋಡಿಸಬೇಕೆಂದು ಹೇಳಿದರು.
ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಹಾಗೂ ಅಮೋಘ ಶಿಷ್ಪಿಂಗ್ ಮಾಲಕರಾದ ನಿತ್ಯಾನಂದ ಶೆಟ್ಟಿಯವರು, ನಗರ ಘಟಕದ ವತಿಯಿಂದ ನಡೆಯಲಿರುವ ಪದಗ್ರಹಣ ಕಾರ್ಯಕ್ರಮ, ಸತ್ಪಾತ್ರ ಕಲಾವಿದರಿಗೆ ನೀಡಲಾಗುವ ಸನ್ಮಾನ ಗೌರವ ಹಾಗೂ ಮಹಿಳಾ ತಾಳಮದ್ದಲೆ, ವೀರ ಅಭಿಮನ್ಯು ಯಕ್ಷಗಾನ ಕಾರ್ಯಕ್ರಮಕ್ಕೆ ಶುಭಕೋರಿದರು.
ವೇದಿಕೆಯಲ್ಲಿ ಕೇಂದ್ರೀಯ ಸಮಿತಿಯ ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ, ಮಹಿಳಾ ಗೌರವಾಧ್ಯಕ್ಷರಾದ ಶ್ರೀಮತಿ ಆರತಿ ಆಳ್ವ, ಮಂಗಳೂರು ಘಟಕದ ಸಂಚಾಲಕರಾದ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಮಂಗಳೂರು ಘಟಕದ ಅಧ್ಯಕ್ಷರಾದ ಪ್ರದೀಪ್ ಆಳ್ವ ಕದ್ರಿ, ನಿಯೋಜಿತ ಅಧ್ಯಕ್ಷರಾದ ತಾರಾನಾಥ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.
ಘಟಕದ ಕೋಶಾಧಿಕಾರಿ ರವಿ ಶೆಟ್ಟಿ ಅಶೋಕನಗರ ವಂದಿಸಿದರು. ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರ್ ಕಾರ್ಯಕ್ರಮ ನಿರೂಪಿಸಿದರು.