ಮುಂಬಯಿ (ಆರ್ಬಿಐ), ನ.28:
ಮುಂಬಯಿಯ ಹೇರಂಬ ಇಂಡಸ್ಟ್ರೀಸ್ನ ಸಿಎಸ್ಆರ್ ನಿಧಿಯಡಿಯಲ್ಲಿ ಉಪ್ಪಳ ಕೊಂಡೆವೂರು ಇಲ್ಲಿನ
ಸದ್ಗುರು ಶ್ರೀನಿತ್ಯಾನಂದ ವಿದ್ಯಾಪೀಠಕ್ಕೆ ಶಾಲಾ ಬಸ್ ಅನ್ನು ಇಂದು ಹೇರಂಬ ಇಂಡಸ್ಟ್ರೀಸ್ನ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿ.ಕುಳೂರು, ಕನ್ಯಾನ ಮತ್ತು ವ್ಯವಸ್ಥಾಪಕ ನಿರ್ದೇಶಕ ರಘುರಾಮ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದರು. ಶಾಲಾ ಸಮಿತಿ ಅಧ್ಯಕ್ಷ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದಾನಿಗಳನ್ನು ಸನ್ಮಾನಿಸಿ, ಅವರ ಕುಟುಂಬದವರನ್ನು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ದಾನಿಗಳ ಕುಟುಂಬದವರು, ಆಶ್ರಮದ ಭಕ್ತರು ಹಾಗೂ ಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಮಚಂದ್ರ ಚೆರುಗೋಳಿ ಅತಿಥಿಗಳು ಮತ್ತು ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
