ಭಾಸ್ಕರ್ ಶೆಟ್ಟಿ (ಅಧ್ಯಕ್ಷ)-ಸವಿತಾ ಸುರೇಶ್ ಶೆಟ್ಟಿ (ಮಹಿಳಾಧ್ಯಕ್ಷೆ)
ಮುಂಬಯಿ (ಆರ್ ಬಿ ಐ), ಆ.28: ಕರ್ನಾಟಕ ಕರಾವಳಿಯ ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಮುಲುಂಡ್ ಪಶ್ಚಿಮದ ಹೊಟೇಲ್ ಸ್ವಾದ್ ಇದರ ಸಭಾಗೃಹದಲ್ಲಿ ಅಡ್ವಕೇಟ್ ರಾಮಣ್ಣ ಎಂ.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿತು.
ಗತವರ್ಷದ ಲೆಕ್ಕಪರಿಶೋಧನೆ ಹಾಗೂ ಅನುಮೋದನೆ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ, ಮಹಿಳಾ ವಿಭಾಗದ ರಚನೆ ಇನ್ನಿತರ ವಿಷಯಗಳೊಂದಿಗೆ ಸಭೆಯು ನಡೆಸಲ್ಪಟ್ಟಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ಭಾಸ್ಕರ ಎಸ್.ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಸಭೆಯು ಪುನಾರಾಯ್ಕೆಗೊಳಿಸಿತು.
ಇತರ ಪದಾಧಿಕಾರಿಗಳಾಗಿ ಜಗದೀಶ್ ಎಂ. ಶೆಟ್ಟಿ (ಉಪಾಧ್ಯಕ್ಷ), ಸಂತೋಷ್ ಜೆ.ಭಂಡಾರಿ (ಕಾರ್ಯದರ್ಶಿ), ದಿವಾಕರ ಎಸ್. ಶೆಟ್ಟಿ (ಕೋಶಾಧಿಕಾರಿ), ಶಂಕರ ಎನ್.ಶೆಟ್ಟಿ (ಉಪ ಕಾರ್ಯದರ್ಶಿ), ಶ್ರೀಧರ ಪೂಜಾರಿ ( ಉಪ ಕೋಶಾಧಿಕಾರಿ) ಮತ್ತು ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ ಅವರನ್ನು ಸಲಹೆಗಾರರಾಗಿ ಸಭೆಯು ಸರ್ವಾನುಮತದಿಂದ ನೇಮಿಸಿತು.
ಸಭೆಯಲ್ಲಿ ಮಹಿಳಾ ವಿಭಾಗದ ಆಯ್ಕೆ ನಡೆದಿದ್ದು, ಸವಿತಾ ಸುರೇಶ್ ಶೆಟ್ಟಿ ಅವರು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿದ್ದು ಸುಜಯಾ ಬಿ. ಶೆಟ್ಟಿ (ಕಾರ್ಯದರ್ಶಿ), ಶಕುಂತಳಾ ಶೆಟ್ಟಿ (ಕೋಶಾಧಿಕಾರಿ) ಆಗಿ ಸರ್ವಾನುಮತದಿಂದ ಆಯ್ಕೆಗೊಂಡರು.
ಅಧ್ಯಕ್ಷ ಭಾಸ್ಕರ ಶೆಟ್ಟಿ ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನಿಂದ ಸಮಿತಿಯನ್ನು ಒಳ್ಳೆಯ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕಾಗಿದೆ. ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ರಾಮಣ್ಣ ಭಂಡಾರಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದು ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳನ್ನು ಅಭಿನಂದಿಸುತ್ತಾ, ತನ್ನ ತುಂಬು ಹೃದಯದ ಸಹಕಾರ ಸಮಿತಿಯೊಂದಿಗೆ ಯಾವತ್ತೂ ಇದೆ ಎಂದು ಆಶ್ವಾಸನೆಯಿತ್ತರು.
ಸಭೆಯಲ್ಲಿ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಸುರೇಶ್ ಶೆಟ್ಟಿ, ಜಯ ಶೆಟ್ಟಿ, ರಾಘು ಶೆಟ್ಟಿ, ಶಿವ ಪೂಜಾರಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಹಿಳಾ ವೃಂದವು ಪ್ರಾರ್ಥನೆಯನ್ನಾಡಿದರು. ಸುರೇಶ್ ಶೆಟ್ಟಿಯವರು ವಂದಿಸಿದರು.