ಪಿಎಚ್ ಡಿ ಪದವಿ ಪಡೆದ ಡಾ. ಸುಧಾರಾಣಿ ಶೆಟ್ಟಿ ಅವರಿಗೆ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯಿಂದ ಸನ್ಮಾನ ಸಮಾರಂಭ ಜರಗಿತು. ಬಂಟರ ಭವನದಲ್ಲಿ ನಡೆದ ಇಡ್ಯಾ ಗ್ರಾಮದ ವಲಯ ಸಂಘಟನಾ ಕಾರ್ಯಕ್ರಮದಲ್ಲಿ ಸುಧಾರಾಣಿ ಅವರು ಪಿಎಚ್ ಡಿ ಪದವಿ ಪೂರೈಸಿದ ಹಿನ್ನಲೆಯಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿಯವರು ವಹಿಸಿದ್ದರು. ಸುಧಾರಾಣಿ ಶೆಟ್ಟಿಯವರು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ಈಗ ಪಿಎಚ್ ಡಿ ಪದವಿಯನ್ನು ಪೂರೈಸಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾರಾಣಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮನೆಯ ವಾತಾವರಣ ಮಹಿಳಾ ವೇದಿಕೆಯ ಸಂಘಟನೆಯಲ್ಲಿ ಕಾಣಬಹುದು ಎಂದರು. ಇದೇ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಮಹಿಳಾ ವೇದಿಕೆಯ ಜತೆ ಕಾರ್ಯದರ್ಶಿ, ಜೆಸಿಐಯ ಅಂತರಾಷ್ಟ್ರೀಯ ತರಬೇತುದಾರೆ ರಾಜೇಶ್ವರಿ ಡಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ರಾಜೇಶ್ವರಿ ಶೆಟ್ಟಿ ಸಂಘಟನೆಯ ಕುರಿತು ಕಾರ್ಯಾಗಾರ ನಡೆಸಿದರು.
ಸಂಘಟನೆಯ ಉದ್ದೇಶ ಮತ್ತು ಪಾಲ್ಗೊಳ್ಳುವಿಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಮಾರಂಭದಲ್ಲಿ ಮಹಿಳಾ ವೇದಿಕೆಯ ಮಾಜೀ ಅಧ್ಯಕ್ಷರುಗಳಾದ ಅಂಜನಾ ಶೆಟ್ಟಿ, ಮಮತಾ ಶೆಟ್ಟಿ, ಆಶಾ ಟಿ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಬೇಬಿ ಶೆಟ್ಟಿ, ಉಪಾಧ್ಯಕ್ಷೆ ಭವ್ಯಾ ಶೆಟ್ಟಿ, ಕಾರ್ಯದರ್ಶಿ ಸರೋಜ ಟಿ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್ವರಿ ಶೆಟ್ಟಿ, ಕೋಶಾಧಿಕಾರಿ ಶೈಲಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಕೇಸರಿ ಪೂಂಜ, ಕ್ರೀಡಾ ಕಾರ್ಯದರ್ಶಿ ಅಕ್ಷತಾ ಶೆಟ್ಟಿ , ಸರಯು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇಡ್ಯಾ ಗ್ರಾಮದ ಕವಿತಾ ಶೆಟ್ಟಿ ಸಭೆಯ ನೇತೃತ್ವ ವಹಿಸಿದ್ದರು.
ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ ಸ್ವಾಗತಿಸಿದರು. ಸುರೇಖಾ ಶೆಟ್ಟಿ ಪ್ರಾರ್ಥನೆಗೈದರು. ಭವ್ಯಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ವೇದಾವತಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜ್ಯೋತಿ ಪಿ. ಶೆಟ್ಟಿ ವಂದಿಸಿದರು. ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಲಯ ಸಂಘಟಕಿ ಕವಿತಾ ಪುಷ್ಪರಾಜ್ ಶೆಟ್ಟಿ ಸಭೆಯನ್ನು ಸಂಘಟಿಸಿದ್ದರು.