ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಮುರಳೀಧರ ಹೆಗ್ಡೆ ಅವರ ತಂಡ ಗೆಲುವು ಸಾಧಿಸಿದೆ. ಒಟ್ಟು 68 ಬೂತ್ ಗಳಲ್ಲಿ ನಡೆದ ಮತದಾನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೃಥ್ವಿರಾಜ್ ರೈ ಕೆ ಬಿ ವಿರುದ್ಧ ಮುರಳೀಧರ್ ಹೆಗ್ಡೆ ಅವರು ಸ್ಪರ್ಧಿಸಿ 5,000 ಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಡಾ ಜಗದೀಶ್ ವಿ ಶೆಟ್ಟಿ, ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾಂಜಲಿ ಡಿ ಅಜಿಲ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಆನಂದರಾಮ ಶೆಟ್ಟಿ, ಸಹಕಾರ್ಯದರ್ಶಿ ಸ್ಥಾನಕ್ಕೆ ಶ್ಯಾಮಲಾ ಶೆಟ್ಟಿ, ಖಜಾಂಚಿ ಸ್ಥಾನಕ್ಕೆ ಅಮರನಾಥ್ ಶೆಟ್ಟಿ ಅವರುಗಳು ಸ್ಪರ್ಧಿಸಿ ಭರ್ಜರಿ ಗೆಲುವನ್ನು ಕಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರವಿಂದ ಶೆಟ್ಟಿ, ಜಯಶ್ರೀ ಸಿ ರೈ, ಕೀರ್ತನ್ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ, ಸಿ ಎ ಕಿಶೋರ್ ಶೆಟ್ಟಿ, ಮಾಲತಿ ಜೆ ಶೆಟ್ಟಿ, ನಿರಂಜನ್ ಶೆಟ್ಟಿ, ರಮೇಶ್ ಶೆಟ್ಟಿ, ಸದಾನಂದ ಸುಲಯ, ಸಂದೀಪ್ ಶೆಟ್ಟಿ, ಸತೀಶ್ ಕುಮಾರ್ ಶೆಟ್ಟಿ, ಶೋಭಾ ಶೇಖ, ಸುದೀಪ್ ನಾಯ್ಕ್, ಸುಧಾಕರ್ ಶೆಟ್ಟಿ, ಉಮೇಶ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಬಂಟ ಸಮಾಜ ಬಾಂಧವರಿಗೆ ಹೇರಿಟೇಜ್ ಹೋಂ, ವಿದ್ಯಾರ್ಥಿಗಳಿಗಾಗಿ ಆಯುರ್ವೇದ ಕಾಲೇಜು, ಜೊತೆಗೆ ಸಮುದಾಯದ ಶಿಕ್ಷಣ ಸಹಾಯ ನಿಧಿ ಸ್ಥಾಪಿಸಲಾಗುತ್ತದೆ ಎಂದು ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷ ಮುರಳೀಧರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.