ಹುಬ್ಬಳ್ಳಿಯ ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯ ಬಾಲಕ ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಐದು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಒಟ್ಟು ಆರು ಪದಕಗಳನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಮಹತ್ವದ ಕೊಡುಗೆ ನೀಡಿದರು.

ಫಲಿತಾಂಶ : 58 ಕೆಜಿ ವಿಭಾಗದಲ್ಲಿ – ಸ್ಪೂರ್ತಿ (ದ್ವಿತೀಯ), 77 ಕೆಜಿ ವಿಭಾಗದಲ್ಲಿ – ಪಾವನಿ ಜೆ ಆರ್ (ಪ್ರಥಮ) 56 ಕೆಜಿ ವಿಭಾಗದಲ್ಲಿ – ಪೃಥ್ವಿಕ್ (ಪ್ರಥಮ), 60 ಕೆಜಿ ವಿಭಾಗದಲ್ಲಿ – ಸುರೇಶ್ ವೈ ಎಮ್ (ಪ್ರಥಮ), 65 ಕೆಜಿ ವಿಭಾಗದಲ್ಲಿ – ಹಜರೇಸಾಬ್ – (ಪ್ರಥಮ), 71 ಕೆಜಿ ವಿಭಾಗದಲ್ಲಿ – ಪ್ರಫುಲ್ ರಾಜೇಶ್ (ಪ್ರಥಮ) ಸ್ಥಾನ ಪಡೆದರು. ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರ ಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ನ ಐವರು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.





































































































