ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನೂತನ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆಯಾಗಿದ್ದಾರೆ. ಮನೋಹರ ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ನಿರ್ದೇಶಕರಾಗಿ, ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಸಂಸ್ಥೆಯ ಅಧ್ಯಕ್ಷರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿದು ಸಮಾಜ ಸೇವೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಧಾರ್ಮಿಕ ಸೇವಾ ಮನೋಭಾವನೆಯಿಂದ ಈಗ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ.

ಮುಂಬಯಿ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಜಯರಾಮ ಶೆಟ್ಟಿ ಕುಲ್ಲಂಗಾಲು, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಪೂರ್ಣಿಮಾ ಯತೀಶ್ ರೈ ಕುಲ್ಲಂಗಾಲು ಅಯ್ಕೆಯಾದರು.