ಕಡಲ ತಡಿಯ ನಮ್ಮ ತಾಯಿ ಭಾಷೆ, ಕಲೆ ಸಂಸ್ಕ್ರತಿಯ ತವರೂರು ತುಳುನಾಡಿನಲ್ಲಿ ವ್ಯವಹಾರಿಕ ಬಾಷೆಯಾದ ನಮ್ಮ ತುಳು ಎಲ್ಲರೂ ಸೇರಿಕೊಳ್ಳಲು ಒಂದು ದೊಡ್ಡ ಅಸ್ತ್ರವಾಗಿದೆ. ತುಳು ಬಾಷೆ ಎಂದರೆ ನಮಗೆ ಹೃದಯ ತುಂಬಿ ಬರುತ್ತದೆ. ಇಂತಹ ಸಮೃದ್ದ ಕಲೆ ಸಂಸ್ಕ್ರತಿ ಬಾಷೆಯನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು ಎಂಬುದನ್ನು ಮೊದಲಾಗಿ ತುಳುವರಾದ ನಾವೆಲ್ಲರೂ ತಿಳಿದುಕೊಳ್ಳಬೇಕು. ತನ್ನ ಕಾರ್ಯ ಕ್ಷೇತ್ರದಲ್ಲಿರುವ ಎಲ್ಲರೂ ಮೌಲ್ಯಾದಾರಿತ ನಮ್ಮ ಜೀವನ ಹೇಗೆಯೇ ಇರಲಿ ಆದರೆ ಮಾತೃ ಬಾಷೆಯ ಪ್ರೀತಿ ನಮ್ಮಲ್ಲಿರಲಿ. ಅದರ ಜೊತೆಯಲ್ಲಿ ರಾಷ್ಟ್ರ ಪ್ರೀತಿ ಕೂಡಾ ತುಂಬಿಕೊಂಡಿರಲಿ. ನಮಗೆ ಜೀವನದಲ್ಲಿ ಹಲವಾರು ರೀತಿಯಲ್ಲಿ ಸೇವಾ ಕಾರ್ಯ ಮಾಡುವ ಭಾಗ್ಯ ಬರಬಹುದು. ಬಂದ ಭಾಗ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಚಾತುರ್ಯಯತೆ ನಮ್ಮಲ್ಲಿರಲಿ ಎಂದು ಒಡಿಯೂರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಪುಣೆ ತುಳುಕೂಟದ ರಜತ ಮಹೋತ್ಸವ ಮತ್ತು ತುಳುನಾಡ ಜಾತ್ರೆ ನವೆಂಬರ್ 10ರಂದು ಬಾಣೇರ್ ಬಂಟರ ಸಂಘದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಗುಂಡುರಾಜ್ ಶೆಟ್ಟಿ ಆಡಿಟೋರಿಯಂನ ಲತಾ ಸುಧೀರ್ ಶೆಟ್ಟಿ ವೇದಿಕೆಯ ನಾಡೋಜ ಜಿ. ಶಂಕರ್ ಸಭಾ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳುಕೂಟವನ್ನು ಸ್ಥಾಪಿಸಿದ ಮಹನೀಯರ ಮನೋಚಿಂತನೆ, ತುಳು ಬಾಷೆಯ ಬೆಳವಣಿಗೆಗಾಗಿ ಮತ್ತು ತುಳುವರ ಒಗ್ಗಟ್ಟಿಗಾಗಿ ಇರಬಹುದು. ಅದನ್ನು ಬೆಳೆಸಿದ ಎಲ್ಲಾ ತುಳುವರ ಪರಿಶ್ರಮದಿಂದ ಬೆಳ್ಳಿ ಮಹೋತ್ಸವಕ್ಕೆ ಬಂದಿದೆ. ಆದರೆ ನೋಡಿದಾಗ ಇದು ಸುವರ್ಣ ಮಹೋತ್ಸವದಂತೆ ಅನುಭವಾಗುತ್ತಿದೆ. ನಿಷ್ಠೆ, ಪರೋಪಕಾರ, ಕೃತಜ್ಞತೆ, ಪ್ರಾಮಾಣಿಕತೆ, ಸಹನೆ, ಸಹಾನುಭೂತಿ, ಪಾರದರ್ಶಕತೆ, ಸಮಭಾವ, ಸಮಾನತೆ, ತ್ಯಾಗ ಗುಣಗಳೊಂದಿಗೆ ತುಳುವರ ಸೇವೆಯಲ್ಲಿ ಸಂಸ್ಥೆ ಸುವರ್ಣ ಶತಮಾನೋತ್ಸವದತ್ತ ಸಾಗಲಿ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಶ್ರೀ ಅನಂತ ಕೃಷ್ಣ ಅಸ್ರಣ್ಣರವರ ದಿವ್ಯ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕಿ ಐಪಿಎಸ್ ಡಾ. ಕೆ. ಧರಣಿ ದೇವಿ ಮಾಲಗತ್ತಿಯವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಉಡುಪಿ ಜಿ ಶಂಕರ ಫ್ಯಾಮಿಲಿ ಟ್ರಸ್ಟ್ ನ ಸ್ಥಾಪಕರಾದ ನಾಡೋಜ ಡಾ. ಜಿ ಶಂಕರ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ ಭಂಡಾರಿ, ಮುಂಬಯಿ ಭಾರತ್ ಕೋ ಅಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಸುವರ್ಣ, ಗೌರವ ಅತಿಥಿಗಳಾಗಿ ಉಡುಪಿ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಅಮ್ಟಾಡಿ ಅಣ್ಣಪ್ಪ ಪಂಜುರ್ಲಿ ಜುಮಾದಿ ಬಂಟ ದೈವಸ್ಥಾನದ ಆಡಳಿತ ಮೋಕ್ತೆಸರಾದ ರವಿಶಂಕರ್ ಶೆಟ್ಟಿ ಬಡಾಜೆ, ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮೊಗವೀರ ಸಭಾದ ಅಧ್ಯಕ್ಷ ಜಯ ಕೋಟ್ಯಾನ್, ಅನಿವಾಸಿ ಭಾರತೀಯ ಸಮಾಜ ಸೇವಕ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ದುಬೈ, ಉಡುಪಿಯ ಖ್ಯಾತ ವಕೀಲರಾದ ಉಮೇಶ್ ಶೆಟ್ಟಿ ಕಳತ್ತೂರುರವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ತುಳುಕೂಟದ ರಜತ ಮಹೋತ್ಸವದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ತುಳುಕೂಟದ ಗೌರವಾಧ್ಯಕ್ಷರಾದ ಮೋಹನ್ ಶೆಟ್ಟಿ ಎಣ್ಣೆಹೊಳೆ, ದಿನೇಶ್ ಶೆಟ್ಟಿ ಕಳತ್ತೂರು, ರಜತ ಮಹೋತ್ಸವದ ಉಪಾಧ್ಯಕ್ಷರುಗಳಾದ ಸದಾಶಿವ ಸಾಲ್ಯಾನ್, ಸದಾನಂದ ನಾಯಕ್, ಹರೀಶ್ ಶೆಟ್ಟಿ ಕುರ್ಕಾಲ್, ವಿಶ್ವನಾಥ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿ, ಕೋಶಾಧಿಕಾರಿ ಸಿಎ. ಮನೋಹರ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗರವರು ಉಪಸ್ಥಿತರಿದ್ದರು.
ಊರಿನಿಂದ ಬಂದಂಥಹ ಬ್ಯಾಂಡ್ ವಾದ್ಯ ತಾಸೆ, ಸಂಗಿತದೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕರುಣಾಕರ ಶೆಟ್ಟಿ ಶಾಂಭವಿ ಇವರಿಂದ ತುಳು ಪಾರ್ದನ ಶೈಲಿಯಲ್ಲಿ ಪ್ರಾರ್ಥನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿಯವರು ಸ್ವಾಗತಿಸಿದರು. ಪೂಜ್ಯ ಸ್ವಾಮಿಜಿ, ಆಸ್ರಣ್ಣರವರನ್ನು ಪಲಪುಷ್ಪ ನೀಡಿ ಸ್ವಾಗತಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿ ಗಣ್ಯರನ್ನು ಗಂಧದ ಗಿಡ ಕೊಟ್ಟು ಸ್ವಾಗತಿಸಲಾಯಿತು.
ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರುರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಶೆಟ್ಟಿ ಪುತ್ತೂರುರವರು ರಜತ ಮಹೋತ್ಸವದ ಬಗ್ಗೆ ಮಾತನಾಡಿದರು. ಮಹೋತ್ಸವದ ಸವಿ ನೆನಪಿಗಾಗಿ ಹೊರತಂದ ಸ್ಮರಣ ಸಂಚಿಕೆಯನ್ನು ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ವಿವಿದ ಕ್ಷೇತ್ರದಲ್ಲಿ ಸಾಧನೆಗೈದ 25 ಸಾಧಕರನ್ನು ಗೌರವ ಬಿರುದು ನೀಡಿ, ಸ್ಮರಣಿಕೆ ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ಜಿ ಶಂಕರ ಮತ್ತು ಉದಯ ಕುಮಾರ್ ಶೆಟ್ಟಿಯವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಹಾಗೆಯೇ ವೇದಿಕೆಯಲ್ಲಿದ್ದ ಗಣ್ಯರನ್ನು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಸನ್ಮಾನಿತರ ಪರವಾಗಿ ಹರೇಕಳ ಹಾಜಬ್ಬ ಮತ್ತು ಚಲನಚಿತ್ರ ನಿರ್ದೇಶಕ ರಾಮ್ ಶೆಟ್ಟಿಯವರು ಮಾತಾನಾಡಿದರು. ಇದೇ ಸಂದರ್ಭದಲ್ಲಿ ಪುಣೆ ತುಳುಕೂಟದ ಕಚೇರಿ ಮಿನಿ ತುಳುಭವನಕ್ಕೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ ಮಹನೀಯರನ್ನು ವೇದಿಕೆಯಲ್ಲಿದ್ದ ಗಣ್ಯರು ಗೌರವ ಪೂರ್ವಕವಾಗಿ ಸತ್ಕರಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ವಿಜಯ್ ಶೆಟ್ಟಿ ಮೂಡುಬೆಳ್ಳೆ ಇವರಿಂದ ತುಳು ಭಜನೆ ಮತ್ತು ಜಾನಪದ ಸಂಗೀತ ವಿಟ್ಟಲ್ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು ಹಾಗೂ ಡಾ| ಕೆ ಪ್ರಕಾಶ್ ಶೆಟ್ಟಿ ತುಳುನಾಡ ಪ್ರಾಚ್ಯ ಮತ್ತು ಗ್ರಾಮೀಣ ವಸ್ತು ಸಂಗ್ರಹಾಲಯ, ಗಣೇಶ್ ಹೆಗ್ಡೆ ಪುಣ್ಚೂರು ತುಳುನಾಡ ಸ್ಥಬ್ದ ಚಿತ್ರ ಮೊದಲಾದ ತುಳುನಾಡ ಸಂಗ್ರಹಾಲಯ ತುಳುವರ ಕಣ್ಮನ ಸೆಳೆಯಿತು. ಮುರಳೀಧರ ಕಾಮತ್ ಮಂಗಳೂರು ಮತ್ತು ತಂಡದವರಿಂದ ತುಳು ಪದರಂಗಿತ, ಅಯೋಧ್ಯಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನೀಡಿರುವ ಪ್ರಖ್ಯಾತ ವಾದಕ ಪ್ರಶಾಂತ್ ಜೋಗಿ ಸಜೀಪ ಮತ್ತು ಬಳಗದವರಿಂದ ಸ್ಯಾಕ್ಷೋಪೋನ್ ಮತ್ತು ವಾದ್ಯ ಸಂಗೀತ ನಡೆಯಿತು.
ತುಳುನಾಡಿನ ಖ್ಯಾತ ನಿರೂಪಕ ಕದ್ರಿ ನವನೀತ್ ಶೆಟ್ಟಿ, ಪ್ರಿಯಾ ಹರೀಶ್ ಶೆಟ್ಟಿ, ಅಕ್ಷತಾ ಸುಜಿತ್ ಶೆಟ್ಟಿ, ತಾರಾನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ವರದಿ : ಹರೀಶ್ ಮೂಡಬಿದಿರೆ