ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾದ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 22ನೇ ವಾರ್ಷಿಕೋತ್ಸವ ಕಾರ್ಯಕ್ರಮವು ನವೆಂಬರ್ 17ರ ಆದಿತ್ಯವಾರದಂದು ಅಪರಾಹ್ನ 3.00 ಗಂಟೆಯಿಂದ ಕಲ್ಯಾಣ್ ಪಶ್ಚಿಮ, ಶಹಾಡ್ ರೈಲ್ವೆ ನಿಲ್ದಾಣ ಬಳಿಯ ಪಾಟೀದಾರ ಭವನ ಎ.ಸಿ ಸಭಾಂಗಣದಲ್ಲಿ ಭಾವಗೀತೆ, ಸಮೂಹ ಗಾಯನ ಸ್ಪರ್ಧೆ, ಜಾನಪದ ಸಮೂಹ ನೃತ್ಯ ಸ್ಪರ್ಧೆ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯ ಅಧ್ಯಕ್ಷ ಕುಂಠಿನಿ ಪ್ರಕಾಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟಕರಾಗಿ ಚಂದ್ರಶೇಖರ್ ಪೂಜಾರಿ (ಮಾಜಿ ಅಧ್ಯಕ್ಷ ಬಿಲ್ಲವರ ಎಸೋಸಿಯೇಷನ್ ಮುಂಬಯಿ), ಮುಖ್ಯ ಅತಿಥಿಗಳಾಗಿ ಕಡಂದಲೆ ಸುರೇಶ್ ಭಂಡಾರಿ (ಆಡಳಿತ ಮೊಕ್ತೇಸರ: ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು) ಮತ್ತು ಗೌರವ ಅತಿಥಿಗಳಾಗಿ ರಮೇಶ್ ಶೆಟ್ಟಿ ಸಿದ್ದಕಟ್ಟೆ (ಜೊತೆ ಕಾರ್ಯದರ್ಶಿ : ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ) ಆಗಮಿಸಲಿದ್ದಾರೆ.
ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಕೊಡಮಾಡುವ ರೂ. 10,000 ನಗದು ಗೌರವ ಧನದೊಂದಿಗೆ ಕಲ್ಯಾಣ್ ಕಸ್ತೂರಿ ಸಾಹಿತ್ಯ ಪ್ರಶಸ್ತಿ (2024) ಯನ್ನು ಡಾ. ಈಶ್ವರ ಅಲೆವೂರು (ಸಂಪಾದಕ :ಅಕ್ಷಯ ಮಾಸಿಕ, ಮುಖವಾಣಿ ಬಿಲ್ಲವರ ಎಸೋಸಿಯೇಷನ್ ಮುಂಬಯಿ) ಅವರಿಗೆ ನೀಡಲಾಗುವುದು. ಗಣ್ಯರ ಸಮ್ಮುಖದಲ್ಲಿ ನಮ್ಮ ಸಂಸ್ಥೆಯ ಹಿರಿಯ ಸದಸ್ಯ ರಮೇಶ್ ಡಿ. ಶೆಟ್ಟಿ (ಹೋಟೆಲ್ ರಾಮದೇವ್ ಕಲ್ಯಾಣ್) ಅವರನ್ನು ಸನ್ಮಾನಿಸಲಾಗುವುದು.ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು, ಕನ್ನಡಾಭಿಮಾನಿಗಳು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಜೆ ಲಘು ಉಪಹಾರ ಮತ್ತು ರಾತ್ರಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಪ್ರಕಾಶ್ ನಾಯ್ಕ್ (8097534624)ರವರನ್ನು ಸಂಪರ್ಕಿಸಬಹುದಾಗಿದೆ.