ಪುಣೆ ಬಂಟರ ಸಂಘದ ನವರಾತ್ರಿ ಉತ್ಸವ, ತೆನೆ ಹಬ್ಬ, ದಾಂಡಿಯಾ ಕಾರ್ಯಕ್ರಮವು ಅಕ್ಟೋಬರ್ 12ರಂದು ಬಂಟರ ಭವನದಲ್ಲಿ ಜರಗಿತು. ಪುಣೆ ಬಂಟರ ಸಂಘ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರ ಸರಕಾರದ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾದ ಚಂದ್ರಕಾಂತ್ ದಾದಾ ಪಾಟೀಲ್, ಕೇಂದ್ರ ಸರಕಾರದ ಸಚಿವ ಪುಣೆ ಸಂಸದರಾದ ಮುರಳಿಧರ್ ಮೊಹೊಲ್, ಗೌರವ ಅತಿಥಿಗಳಾಗಿ ಬಾರಮತಿಯ ಹೋಟೆಲ್ ಉದ್ಯಮಿ ಪುಣೆ ಬಂಟರ ಸಂಘ ಟ್ರಸ್ಟಿ ಶ್ರೀಧರ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಪ್ರಭಾ ಎಸ್ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಎಸ್ ಶೆಟ್ಟಿ, ಸಂಘದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಲ್ ಹೆಗ್ಡೆ, ಕಾರ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಸದಾನಂದ ಕೆ ಶೆಟ್ಟಿ, ಉಪಾಧ್ಯಕ್ಷರುಗಳಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಮಹಿಳಾ ಗೌರವಾಧ್ಯಕ್ಷೆ ಜಯಂತಿ ಶೆಟ್ಟಿ, ಕಾರ್ಯಾಧ್ಯಕ್ಷೆ ದೇವಿಕಾ ಯು ಶೆಟ್ಟಿ, ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಶೇಖರ್ ಶೆಟ್ಟಿ, ನಾರಾಯಣ ಹೆಗ್ಡೆ, ಸುನಿಲ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆಯರುಗಳಾದ ಪ್ರೇಮಾ ಅರ್ ಶೆಟ್ಟಿ, ಯಶೋದಾ ಶೆಟ್ಟಿ, ಕೃತಿ ಲೋಹಿತ್ ಶೆಟ್ಟಿಯವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಾರಾಮತಿಯ ಖ್ಯಾತ ಹೋಟೆಲ್ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ, ಪುಣೆ ಬಂಟರ ಸಂಘದ ಟ್ರಸ್ಟಿಯಾಗಿ ಆಯ್ಕೆಯಾದ ಹೇರೂರು ಪಡುಮನೆ ಶ್ರೀಧರ್ ಶೆಟ್ಟಿ ಹಾಗೂ ಧರ್ಮಪತ್ನಿ ಬಳ್ಕುಂಜೆ ಪಡುಮನೆ ಶೋಭಾ ಶೆಟ್ಟಿ ದಂಪತಿಗಳನ್ನು ಸಂತೋಷ್ ಶೆಟ್ಟಿಯವರು ಭವನದ ಧರ್ಮಚಾವಡಿಯಲ್ಲಿ ಗಂಧ ಪ್ರಸಾದ ನೀಡಿ ಶುಭ ಹಾರೈಸಿ, ಗಣ್ಯರ ಸಮ್ಮುಖದಲ್ಲಿ ಶಾಲು ಪಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸದಾ ಉತ್ಸಾಹಿ, ಮಾನವೀಯತೆಯ ಸೇವೆಯಲ್ಲಿ ಸುವರ್ಣ ಹೃದಯವುಳ್ಳ, ದೇವರ ಅಪಾರ ಭಯಭಕ್ತಿಯ ಧಾರ್ಮಿಕ ವ್ಯಕ್ತಿಯಾಗಿರುವ ಶ್ರೀಧರ ಶೆಟ್ಟಿಯವರು ಬಾರಮತಿಯಲ್ಲಿ ಅಭಿಷೇಕ್ ಮತ್ತು ಪಂಚರತ್ನ ರೀಜೆನ್ಸಿ ಎಂಬ ಹೋಟೆಲ್ ಹೊಂದಿದ್ದು ಯಶಸ್ವೀ ಉದ್ಯಮಿಯಾಗಿದ್ದಾರೆ. ಕಠಿಣ ಪರಿಶ್ರಮಿ, ಹೆಚ್ಚು ಶಿಸ್ತು, ಆಧ್ಯಾತ್ಮಿಕ ಒಲವು ಸಮುದಾಯದ ಜನರಿಗೆ ಸಹಾಯ ಮಾಡುವಲ್ಲಿ ಶ್ರೀಧರ ಶೆಟ್ಟಿಯವರ ಕಾರ್ಯ ಶ್ಲಾಘನೀಯ. ಪುಣೆ ಬಂಟರ ಸಂಘಕ್ಕೆ ಉದಾತ್ತಾ ಸೇವೆಯನ್ನು ನೀಡಿರುವ ಇವರು ಪತ್ನಿ ಶೋಭಾ ಶೆಟ್ಟಿ, ಮಕ್ಕಳಾದ ಸ್ವಪ್ನಿಲ್ ಶೆಟ್ಟಿ ಮತ್ತು ಸ್ಮರಣ್ ಶೆಟ್ಟಿ, ಸೊಸೆ ಸೋನಾಕ್ಷಿ ಶೆಟ್ಟಿಯವರೊಂದಿಗೆ ಸುಖಿ ಸಂಸಾರಿಯಗಿದ್ದಾರೆ.
ಚಿತ್ರ, ವರದಿ- ಹರೀಶ್ ಮೂಡಬಿದಿರೆ