ಅಕ್ಟೋಬರ್ 16ರಿಂದ 20 ರ ವರೆಗೆ ಛತ್ತೀಸ್ಗಢದ ರಾಯ್ ಪುರದಲ್ಲಿ ಜರುಗಿದ ಆಲ್ ಇಂಡಿಯಾ ಫಾರೆಸ್ಟ್ ಕೀಡಾಕೂಟದಲ್ಲಿ ಸುಳ್ಯದ ಎಸಿಎಫ್ ಪ್ರವೀಣ್ ಶೆಟ್ಟಿಯವರು ಭಾಗವಹಿಸಿದ್ದು, ಶಾಟ್ ಫುಟ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಹ್ಯಾಮರ್ ಥ್ರೋ ದಲ್ಲಿಯೂ ಕೂಡಾ ಭಾಗವಹಿಸಿ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.