ರಾಜ್ಯದ ರಾಜಧಾನಿ ಬೆಂಗಳೂರು ವಲಯದ ಬಲು ಪ್ರತಿಷ್ಠಿತ ಬಂಟರ ಸಂಘದ ವಿವಿಧ ಸ್ಥಾನಗಳಿಗೆ ಘಟಾನುಘಟಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದು, ಸಂಘದ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹೆಸರಾಂತ ವಾಸ್ತು ವಿಶೇಷ ತಜ್ಞ ಅಶೋಕ್ ಕುಮಾರ್ ಶೆಟ್ಟಿ ಎಚ್ ಅವರೂ ಒಬ್ಬರು. ಸುಮಾರು ಮೂರು ದಶಕಗಳಿಂದ ಸಂಘದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅಶೋಕ್ ಕುಮಾರ್ ಶೆಟ್ಟಿ ಅವರು ಕೋಶಾಧಿಕಾರಿ ಪದಕ್ಕೆ ಸಮರ್ಥ ಅಭ್ಯರ್ಥಿ ಎಂದು ಬೆಂಗಳೂರು ಬಂಟ ಸಮುದಾಯದ ಜನರು ಆಡಿ ಕೊಳ್ಳುತ್ತಿದ್ದಾರೆ.
ದಿವಂಗತ ಮಹಾಬಲ ಶೆಟ್ಟಿ ಮಾಲಾಡಿ ಹಾಗೂ ಹೆಗ್ಗುಂಜೆ ಶ್ರೀಮತಿ ಜಲಜಾಕ್ಷಿ ಎಂ ಶೆಟ್ಟಿ ದಂಪತಿಯ ಸುಪುತ್ರರಾದ ಶೆಟ್ಟರು ಬಂಟರ ಸಮುದಾಯಕ್ಕೆ ಮಾತ್ರವಲ್ಲದೇ ಸಾರ್ವಜನಿಕ ಚಟುವಟಿಕೆಗಳಲ್ಲಿಯೂ ಗುರುತಿಸಿ ಕೊಂಡವರು. ಸಂಘಟನೆ, ಸಮಾಜ ಸೇವೆಗೆ ಹೆಸರು ಗಳಿಸಿದ ಅಶೋಕ್ ಕುಮಾರ್ ಶೆಟ್ಟಿ ಅವರು ತನ್ನ ಪ್ರಾಥಮಿಕ, ಫ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕ್ರಮವಾಗಿ ಮಂದಾರ್ತಿ, ತೆಕ್ಕಟ್ಟೆ ಮತ್ತು ಉಡುಪಿಯಲ್ಲಿ ಪೂರೈಸಿ ಮುಂದೆ ವಾಸ್ತು ಶಾಸ್ತ್ರ ಸಂಬಂಧಿ ಆಧುನಿಕ ವಿಧಾನ ಶಿಕ್ಷಣವನ್ನು ಪ್ರತಿಷ್ಠಿತ ಹಾಸನ ಎಂ.ಸಿ.ಇ ಮೂಲಕ ಪಡೆದು ಈ ವಿಭಾಗದ ಪದವೀಧರರಾಗಿ ಮುಂದೆ ಜಯನಗರದಲ್ಲಿನ ಪ್ರೋಸೆಸ್ ಆರ್ಕಿಟೆಕ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಧಾನ ವಾಸ್ತುಶಾಸ್ತ್ರಜ್ಞನೆಂಬಂತೆ ಗುರುತಿಸಿಕೊಂಡು ಈ ಕ್ಷೇತ್ರದಲ್ಲಿ ಹೆಸರು ಗಳಿಸಿ ರಾಜ್ಯದ ಅನೇಕ ನಿವೇಶನ, ವಾಣಿಜ್ಯ ಸಂಕೀರ್ಣ ಹಾಗೂ ಶಿಕ್ಷಣ ಸಂಸ್ಥೆಗಳ ಸೃಜನಶೀಲ ವಾಸ್ತು ವಿಶೇಷಜ್ಞನಾಗಿ ಪರಿಚಯಿಸಿಕೊಂಡರು.
ಬೆಂಗಳೂರು ಲಯನ್ಸ್ ಕ್ಲಬ್ ಇದರ ಸ್ಥಾಪಕ ಸದಸ್ಯರಾಗಿ ಸೇರಿ ಕೊಂಡು ಮುಂದೆ ವಿವಿಧ ಉನ್ನತ ಸ್ಥಾನಗಳನ್ನು ಪಡೆದು ನಂತರದ ಮೂರು ದಶಕಗಳ ಕಾಲದ ಸುದೀರ್ಘ ಸೇವೆಯಲ್ಲಿ ಅನೇಕ ಪ್ರಭಾವಶಾಲಿ ಕಾರ್ಯಕ್ರಮಗಳನ್ನು ಸಂಯೋಜಿಸಿ ಬೆಂಗಳೂರು ಪ್ರಶಾಂತ್ ನಗರ ಲಯನ್ಸ್ ಕ್ಲಬ್ ಬೆಸ್ಟ್ ಪ್ರೆಸಿಡೆಂಟ್, ಔಟ್ ಸ್ಟ್ಯಾಂಡಿಂಗ್ ಝೋನ್ ಛೇರ್ಮನ್, ಔಟ್ ಸ್ಟ್ಯಾಂಡಿಂಗ್ ರಿಜಿನಲ್ ಛೇರ್ಮನ್ ಮೊದಲಾದ ಪ್ರಶಸ್ತಿ ಬಿರುದಾವಲಿಗಳಿಂದ ಗೌರವಿಸಲ್ಟಟ್ಟಿದ್ದಾರೆ. ಮೂವತ್ತು ವರ್ಷಗಳ ಕಾಲ ಬೆಂಗಳೂರು ಬಂಟರ ಸಂಘದ ಕ್ರೀಯಾಶೀಲ ಸದಸ್ಯನಾಗಿ ತಾನು ಪಡೆದ ಸುದೀರ್ಘ ಅನುಭವದ ಪರಿಣಾಮವಾಗಿ ಅಶೋಕ್ ಶೆಟ್ಟಿ ಅವರು 2018 ರಿಂದ 2022 ರ ವರೆಗೆ ಬೆಂಗಳೂರು ಬಂಟರ ಸಂಘದ ಪ್ರೋಜೆಕ್ಟ್ ಕಮಿಟಿಯ ಸಂಚಾಲಕರಾಗಿ ಹುದ್ದೆಯನ್ನು ತನ್ನ ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ವೈಖರಿಯಿಂದ ಪ್ರಶಂಸೆಗೆ ಪಾತ್ರರಾದರು.
ತನ್ನ ವಿಶಿಷ್ಟ ಜ್ಞಾನ ಮೇಧಾ ಶಕ್ತಿಗಳನ್ನು ಉಪಯೋಗಿಸಿಕೊಂಡ ಅಶೋಕ್ ಶೆಟ್ಟಿ ಅವರು ಬೆಂಗಳೂರು ಬಂಟರ ಸಂಘದ ಆರ್ ಎನ್ ಎಸ್ ವಿದ್ಯಾನಿಕೇತನ ಎರಡನೇಯ ಪ್ರಾಜೆಕ್ಟನ್ನು ಸಂಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ಸಂಘದ ಸಂಪನ್ಮೂಲಗಳನ್ನು ತುಂಬಾ ಎಚ್ಚರಿಕೆಯಿಂದ ಪರಿಣಾಮಕಾರಿಯಾಗಿ ಬಳಸಿಕೊಂಡ ಶೆಟ್ಟಿ ಅವರು ಸಂಘದ ಯೋಜನೆಗಳು ಸಫಲವಾಗುವಲ್ಲಿ ಶಕ್ತಿ ಮೀರಿ ಶ್ರಮಿಸಿದ್ದಾರೆ. ತನಗೆ ನಿರ್ವಹಿಸಿದ ಕರ್ತವ್ಯಗಳನ್ನು ನಿಗದಿತ ವೇಳೆಯೊಳಗೆ ಶಿಸ್ತು ಬದ್ಧವಾಗಿ ಸಂಪೂರ್ಣಗೊಳಿಸುತ್ತಿದ್ದ ಇವರು ಸಂಘದ ಸರ್ವ ಪದಾಧಿಕಾರಿಗಳ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಿವಂಗತ ಹೊಸಮಠ ಸಂಜೀವ ಶೆಟ್ಟಿ ಮತ್ತು ಶಾನಾಡಿ ಚಿಕ್ಕಮ್ಮ ಶೆಟ್ಟಿ ದಂಪತಿಯರ ಸುಪುತ್ರಿ ಶ್ರೀಮತಿ ರಮಾದೇವಿ ಎ.ಶೆಟ್ಟಿ ಅವರೊಂದಿಗೆ ನೆಮ್ಮದಿಯ ಸಾಂಸಾರಿಕ ಜೀವನ ನಡೆಸುತ್ತಿರುವ ಅಶೋಕ ಶೆಟ್ಟಿ ಅವರು ಸಿಎ ಅಶೋಕ್ ಶೆಟ್ಟಿಯವರ ತಂಡದಿಂದ ಬೆಂಗಳೂರು ಬಂಟರ ಸಂಘದ ಖಜಾಂಚಿ ಹುದ್ದೆಗೆ ಬಹುಮತದಿಂದ ಆಯ್ಕೆಯಾಗಿ ಸಂಘದ ಉತ್ತರೋತ್ತರ ಪ್ರಗತಿಯಲ್ಲಿ ತನ್ನ ಬಹು ಅಮೂಲ್ಯ ಸೇವೆ ಸಲ್ಲಿಸಲಿ ಎಂಬ ಸದಾಶಯ ನಮ್ಮೆಲ್ಲರದು.
ಶುಭವಾಗಲಿ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು