ಮಹಾರಾಷ್ಟ್ರದ ಥಾಣೆ ನಗರಿಯ ಪ್ರತಿಷ್ಠಿತ ಬಂಟ ಸಮುದಾಯದ ಸಂಘಟನೆ ಥಾಣೆ ಬಂಟ್ಸ್ ಇದರ ಹತ್ತೊಂಬತ್ತನೇಯ ವಾರ್ಷಿಕ ಮಹೋತ್ಸವವು ನಗರದ ಡಾ.ಕಾಶೀನಾಥ್ ಘಾಣೇಕರ್ ನಾಟ್ಯ ಸಭಾಗೃಹದಲ್ಲಿ ಇದೇ ಬರುವ ದಿನಾಂಕ 13 ಬುಧವಾರ ವಿಜೃಂಭಣೆಯಿಂದ ಜರುಗಲಿದೆ. ಅಂದು ಅಪರಾಹ್ನ ಘಂಟೆ 1.30 ರಿಂದ ಸಂಸ್ಥೆಯ ಅಧ್ಯಕ್ಷರಾದ ಸುನಿಲ್ ಜೆ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಕಾರ್ಯಕ್ರಮ ವೈವಿಧ್ಯಗಳು ಜರುಗಲಿದ್ದು ಆಹ್ವಾನಿತ ಅತಿಥಿಗಳಾಗಿ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಮುಂಬಯಿ, ಸುಗ್ಗಿ ಸುಧಾಕರ್ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಹುಬ್ಬಳ್ಳಿ ಧಾರವಾಡ, ಡಾ ರವಿ ಶೆಟ್ಟಿ ಮೂಡಂಬೈಲು ಉದ್ಯಮಿ ಕತಾರ್, ಕುಶಲ್ ಭಂಡಾರಿ ಮಾಜಿ ಅಧ್ಯಕ್ಷರು ಥಾಣೆ ಬಂಟ್ಸ್ ಅಸೋಸಿಯೇಷನ್, ಜಯ ಕೆ ಶೆಟ್ಟಿ ಮಾಜಿ ಅಧ್ಯಕ್ಷರು ನವೋದಯ ಕನ್ನಡ ಸಂಘ ಥಾಣೆ ಭಾಗವಹಿಸಲಿರುವರು.


ಅಂದು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಜಯಕುಮಾರ್ ಕೊಡಿಯಲ್ ಬೈಲ್ ರಚನೆಯ ಬಾಬಾ ಪ್ರಸಾದ್ ಅರಸ ನಿರ್ದೇಶನದ ಅಜ್ಜೆರ್ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಪರಿಸರದ ಬಂಟ ಕುಟುಂಬದ ಸರ್ವರೂ ಕ್ಲಪ್ತ ಸಮಯಕ್ಕೆ ಹಾಜರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ಸಂಘದ ಅಧ್ಯಕ್ಷರಾದ ಸುನೀಲ್ ಜೆ ಶೆಟ್ಟಿ, ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

		




































































































