ನವೆಂಬರ್ 24,25,26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೊಟ್ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರೂ ಆಗಿರುವ ಅಶೋಕ್ ರೈ ಅವರು ಆಮಂತ್ರಣ ಪತ್ರ ನೀಡಿ ಕಂಬಳಕ್ಕೆ ಆಹ್ವಾನ ಮಾಡಿದರು.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶಾಸಕರ ನೇತೃತ್ವದ ನಿಯೋಗ ಕಂಬಳದ ಬಗ್ಗೆ ಪೂರ್ಣ ವಿವರಣೆ ನೀಡಿದರು. ನಿಯೋಗದಲ್ಲಿ ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ್ ರೈ ದರ್ಬೆ, ಅಜಿತ್ ಹೆಗ್ಡೆ, ತುಳು ಕೂಟದ ಅಧ್ಯಕ್ಷರಾದ ಸುಂದರ್ ರಾಜ್ ರೈ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಸೇರಿದಂತೆ ತುಳು ಕೂಟ ಹಾಗೂ ಕಂಬಳ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
		




































































































