ನಾವು ಒಂದಾಗಿ ಬಾಳಬೇಕು. ಇದ್ದಾಗ ಮಹತ್ವ, ಮೌಲ್ಯ ಇರುತ್ತದೆ. ಕಳಕೊಂಡಾಗ ದುಃಖ, ದುಮ್ಮಾನ. ನಾವು ಯಾವುದನ್ನು ನೆನಸದೇ ಬರುತ್ತದೋ ಅವಾಗ ಅತಿಯಾದ ನೋವು ಯಾತನೆ ಆಗುತ್ತದೆ. ಅನುಭವ ಎಂಬುವುದು ಬಹಳ ಮಹತ್ತರವಾದದ್ದು. ಹಾಗೆಯೇ ಅನುಕಂಪ ಎಂಬುವುದು ಕೂಡ ಅಷ್ಟೇ ಘನತ್ತರವಾದುದು.
ಹ್ಞಾಂ.. ಅಂದ್ಹಾಗೆ ಅಗಲುವಿಕೆ ಮತ್ತು ಯಾತನೆ ಎಂಬುವುದು ನಾವು ಪಡುವ ತುಮುಲತೆ, ದುಗುಡತೆ… ಅಲ್ಲದೇ ವ್ಯಾಕುಲತೆ, ನೊಂದುವಿಕೆ ಇತ್ಯಾದಿ ಇವುಗಳಲ್ಲಿ ಅವ್ಯಕ್ತವಾಗಿರುತ್ತದೆ. ಒಂದು ವಿಚಾರ ಏನಪ್ಪಾಂದ್ರೆ? ನಮ್ಮಿಂದ ಯಾರು ಅಗಲಿದ್ದಾರೆ..? ಅವರ ಅಸ್ತಿತ್ವ, ಮನೆಯ ಗೋಚರವಾಗುತ್ತದೆ. ಏಕತನ ಕಾಡುತ್ತದೆ. ಅಂಥವರ ಪ್ರಾಧ್ಯಾನತೆ ಎಷ್ಟು? ಅವರ ಒಡನಾಟ ಎಷ್ಟು? ಪ್ರಭಾವ ಎಷ್ಟು? ಪ್ರೀತಿ ಎಷ್ಟು? ಹೊಂದಾಣಿಕೆ ಯಾವ ತರಹದು..? ಬಂಧುತ್ವ ಎಷ್ಟು? ಕಾರ್ಯಪ್ರವರ್ತನೆ ಎಷ್ಟು ಇತ್ಯಾದಿ… ಒಟ್ಟಾರೆ ಒಂದರ್ಥ ಹೇಳುವುದಾದರೆ ಅಸ್ತಿತ್ವ ಎಷ್ಟು? ಎಂದು ಆವಾಗ ಕಣ್ಣೀರು ಬರುತ್ತದೆ. ಖೇದ ಕೂಡವು ಆಗುತ್ತೆ, ಅಘಾತವಾಗುತ್ತೆ. ಹ್ಞಾಂ… ಅಂದ್ಹಾಗೆ… ಅಗಲುವಿಕೆಯಲ್ಲಿ ನೋವು ಇದೆ. ಇರುವಿಕೆ ಸಹ ಅಷ್ಟೇ ಪ್ರಮುಖವಾಗಿರುತ್ತದೆ. ಅಂಥವರು ಬಳಸಿದ್ದ ವಸ್ತು, ಸಾಮಗ್ರಿಗಳು, ಬಳಕೆಗಳು, ಹಿತವಾದ ಮಾತುಗಳು, ಅಂತೆಯೇ ವರ್ತನೆ, ನಡುವಳಿಕೆ ಇನ್ನು ಅನೇಕ ವಿಚಾರ – ವಿಷಯಗಳು ಮನಸ್ಸಿನಲ್ಲಿ ಹುದುಗಿ ಕೊಂಡಿರುತ್ತದೆ. ಕೆಲವೊಂದು ದೃಶ್ಯಗಳು ಕಣ್ಣಿನ ಅಲೆಗಳಲ್ಲಿ ಮಿಂಚಾಗಿರುತ್ತದೆ. ಆವಾಗ ನೊಂದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ.
ಅಯ್ಯೋ.. ನಮ್ಮನ್ನು.. ಯಾ.. ನನ್ನನ್ನು ಬಿಟ್ಟು ಹೋದೆಯಾ? ಎಂದು ವಿಷಾದ, ಪರಿತಾಪ ಉಂಟಾಗುತ್ತದೆ. ಅಳಿವು -ಉಳಿವು ನಮ್ಮ ಕೈಯಲ್ಲಿ ಇಲ್ಲಾ ತಾನೇ? ಊಂ… ಒಂದು ಮಾತು…. ಸಪ್ತಪದಿಯನ್ನು ಗಂಡು – ಹೆಣ್ಣು (ಹೆಂಡತಿ) ಒಟ್ಟಿಗೆ (ಹಿಂದೆ ಮುಂದೆ, ಕೈ ಹಿಡಿದು, ಶಾಲು- ಸೆರಗು ಹಿಡಿದು) ತುಳಿಯುತ್ತಾರೆ. ಆದರೆ ನಾವು ಕೂಗಿ ಕರೆದಾಗ ಒಂಟಿಯಾಗಿ ಸಾಗುತ್ತಾರೆ. ಅದಕ್ಕೆ ಬದುಕು ಎಂಬುವುದು ಸಂಕೀರ್ಣ. ತಿಳಿದಷ್ಟು ಆಗಾಧವಾಗಿರುತ್ತದೆ. ಹಾಗೆಯೇ ಅಗಲುವಿಕೆ ಮತ್ತು ಯಾತನೆ ಯಾ ಅಗಲುವಿಕೆಯ ನೋವು ಕೂಡ ಅಷ್ಟೇ ಪ್ರಬುಲ ಆಗುತ್ತದೆ. ಎಷ್ಟೇ ಬೇಸರ ಮಾಡಿದರೂ ಯಾರೇ ಸಮಾಧಾನಪಡಿಸಿದರೂ ಎಲ್ಲವೂ ಪಥ್ಯ ಆಗದೇ ಇರಬಹುದು. ಕೆಲವು ಸಲ ಕಟಕುತನ, ದುಷ್ಕೃತ್ಯ ಎಸಗಿದವರು ಹಾಗೂ ಸಮಾಜಘಾತಗಾರರು ಅಗಲಿದಾಗ ನೋವು ಆಗದೆ ಇರಬಹುದು. ಉಪದ್ರ ಜೀವಿ ತೊಲಗಿತ್ತಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳಬಹುದು. ಹ್ಞಾಂ… ಕೆಲವೊಂದು ಸಾರಿ ಅಗಲುವಿಕೆಗಾರರನ್ನು ಮರೆಯಲು ಸಾಕಷ್ಟು ಸಮಯಬೇಕಾಗುತ್ತದೆ. ಬಹುಶಃ ಅದು ನಮಗೆ ಒಂದು ದೌರ್ಬಲ್ಯ ಎಂದರೂ ಅತಿಶಯೋಕ್ತಿ ಆಗಲಾರದು. ಒಮ್ಮೆ ಅಂಥವರು ಕಣ್ಣೆದುರಿಗೆ ಬಂದು ಮಾತಾಡಿದ ಅನುಭವ ಆಗಬಹುದು. ಆವಾಗ ಪಶ್ಚತ್ತಾಪ ಪಡುವ ಸ್ಥಿತಿ ಬರುತ್ತದೆ. ಅಂದ್ಹಾಗೆ ನಮ್ಮನ್ನು ಬಿಟ್ಟು ಹೋಗುವ ಮನಸ್ಸಾದರೂ ಹೇಗೆ ಬಂತು… ದೇವಾ?! ಒಂಟಿತನ ಎಂಬುವುದೇ ಪಾಲಿಗೆ ಬಂದು ಕಾಡಿತ್ತಲ್ಲಾ?! ಎಂದು ಒಳಮನಸ್ಸು ಹೇಳುತ್ತಿರುತ್ತದೆ.
ವ್ಯಕ್ತತೆ ಎಂಬುವುದು ಪ್ರಬುದ್ಧವಾದದು. ಕೊನೆಯ ಮಾತು : ಅಗಲುವಿಕೆ ಮತ್ತು ಯಾತನೆ ಯಾ ಅಗಲುವಿಕೆಯ ನೋವು ಎಂಬುವುದು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಇದೆಲ್ಲಾ ಅನುಭವಕ್ಕೆ ಒಳಪಟ್ಟಾಗ ಇದರ ಅರ್ಥ, ಅಂತೆಯೇ ಅರಿವು ಎಲ್ಲವೂ ಗೊತ್ತಾಗುತ್ತದೆ. ಅಂತಹ ದುಃಸ್ಥಿತಿ ಬಂದಾಗ ನೊಂದುಕೊಳ್ಳುವಿಕೆ ಜಾಸ್ತಿ ಆಗುತ್ತದೆ. ಛೇ… ಹೀಗಾಗಿ ಹೋಯಿತ್ತಲ್ಲಾ. ಎಂಬ ವಿಷಾದ ಗಾಢವಾಗುತ್ತದೆ. ಆ ಜಾಗವನ್ನು ತುಂಬಲು ಬಹಳ ಕಷ್ಟ. ಕೆಲವೊಮ್ಮೆ ಅದು ಸರಿಯಲ್ಲ ಕೂಡ. ಸಹಾನುಭೂತಿ ಅನುಕಂಪ ನಮ್ಮ ಜಾಯಮಾನ ಆಗಿರಲೂಬಹುದು. ಸಹಿಸುವ ಶಕ್ತಿ ದೇವರು ಕೊಡಲೆಂದು ಹೇಳುವವರೂ ಇದ್ದಾರೆ. ಗಾಢವಾಗಿ ಹಚ್ಚಿಕೊಂಡವರು. ಏನಿದ್ದರೂ ಆಯುಷ್ಯವನ್ನು ಮೆಟ್ಟಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ ತಾನೇ? ಕಳೆದು ಹೋದದನ್ನು ಹಿಂದೆ ಪಡೆಯಲು ಆಗದಿದ್ದಾಗ ನೆನೆದು ಕೊರಗಿ ಏನು ಪ್ರಯೋಜನ? ಇದು ಯಾತನೆ, ನೋವಿನ ಜಂಜಾಟತನ ಎಂದರೂ ಅತಿಶಾಯೋಕ್ತಿ ಆಗಲಾರದು. ಇರುವಿಕೆ ತನ್ನ ಪ್ರಭಾವತೆಯನ್ನು ತೋರಿಸುತ್ತದೆ ಅಲ್ಲವೇ? ಏನು ಅನ್ನುತ್ತೀರಾ ನೊಂದ ಹೃದಯವೇ? ಕಣ್ಣೀರ ಹನಿಗಳೇ….?
ಕೃಷ್ಣಾನಂದ ಶೆಟ್ಟಿ ಐಕಳ