ಕುಂದಾಪುರ ಸೇರಿದಂತೆ ಕರಾವಳಿಯ ಕೃಷಿ ಮತ್ತು ರೈತರಿಗೆ ಸಂಬಂಧಪಟ್ಟ ರೈತನೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸುವ ವಿಶೇಷ ಆಚರಣೆಯೇ ಹೊಸ್ತು ಎನ್ನುವ ಪರಿಕಲ್ಪನೆ ಇಟ್ಟುಕೊಂಡು ಮಾಡುತ್ತಿರುವಂತಹ ವಿಶೇಷ ಆಚರಣೆ. ಈ ಆಚರಣೆಯಲ್ಲಿ ಮನೆ ಮಂದಿ, ಅಂಗಳವನ್ನು ಸಗಣಿಯ ಮೂಲಕ ಲೇಪನ ಮಾಡಿ, ಸ್ವಚ್ಛಗೊಳಿಸಿ, ಮನೆಯ ಎದುರಿಗಿರುವ ಮೆಟ್ಟಿ ಕಂಬಕ್ಕೆ ಪೂಜೆಯನ್ನ ಸಲ್ಲಿಸಿ, ತಂದಿರುವಂತಹ ಕದಿರನ್ನ ಮನೆಯ ಮುಂಭಾಗದಲ್ಲಿ ಇಟ್ಟು ವಿಶೇಷ ಪೂಜೆಯನ್ನು ಸಲ್ಲಿಸಿ, ಮನೆಯ ಯಜಮಾನ ಅದನ್ನು ಹೊತ್ತು ಹೊಸ ಪಸಲನ್ನು ಮನೆಯ ಒಳಗೆ ತರುವ ವಿಶಿಷ್ಟ ಪರಿಕಲ್ಪನೆಯ ಆಚರಣೆ ಈ ಹೊಸ್ತ್ ಎನ್ನುವ ಸಂಭ್ರಮ ತುಂಬಾ ವರುಷಗಳ ಹಿಂದೆ ಆಚರಿಸಲ್ಪಡುತ್ತಿರುವ ಸಾಂಪ್ರದಾಯಿಕ ಹಬ್ಬವಾಗಿ ಪರಿಣಮಿಸಿದೆ.
ಮನೆ ಸೇರಿದಂತೆ ಅಂಗಳದ ಪರಿಸರವನ್ನು ಸ್ವಚ್ಛಗೊಳಿಸಿ ಹೊಸ್ತು ಕದಿರು ಕಟ್ಟುವ ತಯಾರಿ ನಡೆಸುತ್ತಾರೆ. ಹೊಸ್ತ್ ಹಬ್ಬ ಎನ್ನುವ ಪರಿಕಲ್ಪನೆ ಆಧರಿತ ಈ ವಿಶಿಷ್ಟ ಸಂಸ್ಕೃತಿ ಕರಾವಳಿ ಭಾಗದಲ್ಲಿ ಇನ್ನೂ ಆಚರಣೆ ಪ್ರಸ್ತುತವಾಗಿ ನಡೆಸಲ್ಪಡುತ್ತದೆ. ಹೊಸ್ತು ಕದಿರು ಕಟ್ಟುವ ಹಬ್ಬದ ಬೆಳಿಗ್ಗಿನ ಜಾವ ಹತ್ತಿರದ ಗದ್ದೆಯಲ್ಲಿ ಬೆಳೆದ ಭತ್ತದ ತೆನೆ (ಕದಿರು)ಗಳನ್ನು ಹೊಸ್ತು ಹಬ್ಬದ ದಿನ ಮುಂಜಾನೆ ಹಿರಿಯರು ಕೊಯ್ದು ತರುತ್ತಾರೆ. ಬಳಿಕ ಮನೆಯ ಹಿರಿಯರು, ಮಕ್ಕಳು ಶುಚಿಯಾಗಿ ಮನೆಯ ಸಮೀಪದಲ್ಲಿ ಭತ್ತದ ತೆನೆ ತಂದಿಟ್ಟ ಸ್ಥಳಕ್ಕೆ ಪೂಜಾ ಸಾಮಗ್ರಿಗಳೊಂದಿಗೆ ಹೋಗುತ್ತಾರೆ. ಕೃಷಿ ಭೂಮಿಯಲ್ಲಿ ಬೆಳೆದಂತಹ ವಿಶಿಷ್ಟ ಫಸಲನ್ನು ಮನೆಗೆ ತಂದು, ಆಚರಿಸಲ್ಪಡುವ ಆಚರಣೆಯು ಹಿಂದಿನ ದಿನಮಾನಸಗಳಿಗೆ ಹಾಸು ಹೊಕ್ಕಾಗಿದೆ ಎನ್ನುವುದು ವಿಶೇಷ. ಕದಿರುಗಳಿಗೆ ಗಂಧ ಹಚ್ಚಿ ಸಿಂಗಾರ ಹೂವು ಇತರ ಜಾತಿಯ ಹೂವುಗಳಿಂದ ಶೃಂಗರಿಸಿ, ಮುಳ್ಳು ಸೌತೆ, ಬಾಳೆ ಹಣ್ಣು ಅರ್ಪಿಸುತ್ತಾರೆ. ಕದಿರುಗಳನ್ನು ಹೊರುವವರು ಹೊಸ ಬಿಳಿ ಬಟ್ಟೆ ರುಮಾಲು ಸುತ್ತಿ, ಪೂಜಿಸಿದ ಭತ್ತದ ತೆನೆಯ ಕದಿರುಗಳನ್ನು ಕೊಯ್ದು, ಬಾಳೆ ಎಲೆ ಮೇಲಿಟ್ಟು ಹರಿವಾಣಕ್ಕೆ ಹಾಕಿ ಕದಿರುಗಳನ್ನು ತಲೆ ಮೇಲೆ ಹೊತ್ತುಕೊಂಡು ಮಕ್ಕಳು ಜಾಗಟೆ ಹೊಡೆಯುತ್ತಾ ಶಬ್ದದೊಂದಿಗೆ ಮನೆಯಂಗಳಕ್ಕೆ ಬರುತ್ತಿರುವಾಗ ಮನೆಯೊಡತಿ ಕದಿರು ಹೊತ್ತು ತಂದವರ ಕಾಲಿಗೆ ನೀರೆರೆದು, ನಮಸ್ಕರಿಸಿ ಬರ ಮಾಡಿಕೊಳ್ಳುತ್ತಾರೆ.
ಕುಂದಾಪುರ ತಾಲೂಕಿನಲ್ಲಿ ನಡೆಯುವ ಅತ್ಯಂತ ವಿಶೇಷವಾಗಿ ನಡೆಯುವಂತಹ ಹೊಸ್ತು ಜೀವನದ ಪ್ರಮುಖವಾದಂಥಹ ಘಟ್ಟಗಳನ್ನ ಪೂರೈಸುತ್ತದೆ. ಕುಂದಾಪುರ ತಾಲೂಕು ಮಾತ್ರವಲ್ಲದೆ, ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಕಾರ್ಯಕ್ರಮ ವಿಶೇಷವಾಗಿ ನಡೆಯುತ್ತದೆ. ಬೆಳೆದಂತಹ ಬೆಳೆಯು, ಹೊಸತನದ ಹಂಬಲದೊಂದಿಗೆ ಪ್ರಕೃತಿಯ ರಮಣೀಯ ತಾಣದಲ್ಲಿ ನಿಷ್ಕಲ್ಮಶವಾದ ಪ್ರೀತಿಗೆ ಹೊಸ ಹುರುಪು ತರುವಂತಹ ಈ ಕಾರ್ಯಕ್ರಮ ಕೃಷಿ ಬದುಕಿಗೆ ಇನ್ನಷ್ಟು ಮುನ್ನುಡಿ ಬೆಳೆಯುತ್ತದೆ. ಸೃಷ್ಟಿ ಹಾಗೂ ಸೃಷ್ಟಿಗಿಂತಲೂ ಹೆಚ್ಚಿನ ಬದುಕನ್ನು ಪೂರೈಸುವಂತಹ ಬೆಳೆಗಳಿಗೆ ತನ್ನದೇ ಆದಂತ ಪ್ರಾಮುಖ್ಯತೆ ಕರಾವಳಿ ಭಾಗದಲ್ಲಿ ನೀಡುತ್ತಿರುತ್ತಾರೆ. ಹೊಚ್ಚ ಹೊಸದಾಗಿ ಬೆಳೆದಿರುವಂತಹ ಫಸಲನ್ನು ಮನೆಗೆ ತರುವುದರ ಮೂಲಕ ದೇವರನ್ನು ನಾವು ಮನೆಗೆ ತರುವಂತಹ ರೀತಿಯಲ್ಲಿ ಆಹ್ವಾನ ಮಾಡಿಕೊಳ್ಳುತ್ತೇವೆ. ಜಾಗಟೆ ಹಾಗೂ ಗಂಟೆಗಳನ್ನು ಬಾರಿಸುವುದರ ಮೂಲಕ ತೆನೆಯನ್ನು ಹೊತ್ತಂತಹ ಕೃಷಿಕರು ಅಂಗಳದಲ್ಲಿರುವಂತಹ ಮೆಟ್ಟಿ ಕಂಬಕ್ಕೆ ಸುತ್ತುವರಿದು, ತದನಂತರದಲ್ಲಿ ಒಳಭಾಗದ ಮೂಲಕ ಪ್ರವೇಶಿಸಿ ದೇಗುಲ ಇರುವಂತಹ ಕೋಣೆಗೆ ಆಗಮಿಸಿ, ಅಲ್ಲಿ ಒಂದು ಮಣೆಯನ್ನು ಹಾಕಿ ತಂದಿರುವಂತಹ ಹೊಸ ಫಸಲನ್ನು ಮಣೆಯ ಮೇಲಿಟ್ಟು ದೂಪವನ್ನು ಮಾಡಿ ಪೂಜಿಸುತ್ತಾರೆ.
ತಾಲೂಕಿನಾದ್ಯಂತ ಕೃಷಿಕರು ಬೆಳೆದಂತಹ ಪಸಲನ್ನು ಹೆಚ್ಚು ಹೆಚ್ಚು ಇಳುವರಿ ಬರುವ ಹಾಗೆ ಮತ್ತು ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸುವುದರ ಮೂಲಕ ಬೆಳೆಯ ಒಂದು ತೆನೆ ಹಾಗೂ ಮಾವಿನ ಎಲೆ ತುಳಸಿ ಎಲೆಯನ್ನು ಸೇರಿಸಿ, ದೇಗುಲಗಳಿಗೆ ಉಪಯೋಗಿಸುವಂತಹ ವಸ್ತುಗಳಿಗೆ ಹಾಗೂ ಇನ್ನಿತರ ಪರಿಕರಿಗಳಿಗೆ ಕದಿರು ಕಟ್ಟುವ ಸೇವೆಯನ್ನು ಕೂಡ ನಡೆಸುತ್ತಾರೆ. ಇದು ಕರಾವಳಿ ಭಾಗದಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುವಂತಹ ಕೃಷಿದಾಯಕವಾದಂತಹ ಹಬ್ಬ. ಫಸಲಿನ ಮೊದಲ ಬೆಳೆಯು ಬರುವ ಹಾಗೆ ಈ ಬಾರಿಯೂ ಹೊಸ ಬೆಳೆಯನ್ನು ತರುವುದರೊಂದಿಗೆ ಪ್ರಕೃತಿ ಮಾತೆ ತನ್ನದೇ ಆದಂತಹ ವೈಶಿಷ್ಟ್ಯತೆಯನ್ನು ಸಾರುವ ಸಾಂದರ್ಭಿಕವಾದಂತಹ ಫಸಲು ಜಗತ್ತಿಗೆ ಪ್ರೇರಣೆಯಾಗುವಂತಹ ನಿಟ್ಟಿನಲ್ಲಿ ನೀಡುವುದೇ ಕಾಯಕವಾಗಿ ಬಂದಂತಹ ವಿಶೇಷ ಆಚರಣೆಯು ಪ್ರಕೃತಿಗೆ ಪರಿಶುದ್ಧವಾದ ಕೃಷಿ ಕಾರ್ಯಕ್ಕೆ ಬೇಕಾಗುವಂತಹ ಹಬ್ಬದ ಆಚರಣೆಯಲ್ಲಿ ಕದಿರು ಕಟ್ಟುವ ಹಬ್ಬವು ವಿಶೇಷ ಮಾನ್ಯತೆಯನ್ನು ಪಡೆದಿದೆ. ಹೊಸ ಬೆಳೆಯ ವಿಶೇಷ ಫಸಲನ್ನು ಮನೆಗೆ ತರುವಂತಹ ನಿಟ್ಟಿನಲ್ಲಿ ಆಚರಿಸುವಂತಹ ಈ ಕಾರ್ಯಕ್ರಮ ಕರಾವಳಿಯಲ್ಲಿ ಇಂದಿಗೂ ಮನೆ ಮಾತಾಗಿದೆ. ಅದಲ್ಲದೇ ಮದುವೆ ಆದಂತಹ ಮಕ್ಕಳು ಮೊದಲ ಹೊಸ್ತು ಕಾರ್ಯಕ್ರಮಕ್ಕೆ ಬಂದು, ಊಟ ಮಾಡಿ ಹೊಸ ಬೆಳೆಯನ್ನು ಮನೆಗೆ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲೇಬೇಕಿತ್ತು. ಅದೇ ಕಾರಣಕ್ಕಾಗಿ ಈ ಪದ್ಧತಿಯು ಇಂದಿಗೂ ವಿಶೇಷವಾಗಿ ನಡೆಯುತ್ತಿದೆ. ಅದಲ್ಲದೆ ಬಂದಂತಹ ಮೊದಲ ಫಸಲನ್ನು ದೇವಸ್ಥಾನಕ್ಕೆ ಹಾಗೂ ಉಳುಮೆ ಮಾಡಿದಂತಹ ನೇಗಿಲಿಗೆ ಹಾಗೂ ಗುದ್ದಲಿಗೆ ಅದಲ್ಲದೆ ಬೇರೆ ಬೇರೆ ಪರಿಕರಗಳಿಗೆ ವಿಶೇಷ ರೀತಿಯಲ್ಲಿ ಕದಿರು ಕಟ್ಟುವುದರ ಮೂಲಕ ವಿಶೇಷ ಮಾನ್ಯತೆ ಪಡೆದಿದೆ. ಪ್ರತಿಯೊಬ್ಬರ ಮನೆಯಲ್ಲಿಯೂ ವಿಶೇಷ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮಾಡುವುದರೊಂದಿಗೆ ಮತ್ತು ಮಧ್ಯಾಹ್ನದಲ್ಲಿ ಬಗೆ ಬಗೆಯ ಭೋಜನಗಳನ್ನ ಸಿದ್ಧಪಡಿಸಿ, ಬಂಧು ಬಳಗದವರಿಗೆ ನೆಂಟರಿಗೆ ಉಣ ಬಡಿಸುತ್ತಾರೆ. ಈ ಪರಿಕಲ್ಪನೆಯ ಆಚರಣೆ ಕರಾವಳಿ ಭಾಗದಲ್ಲಿ ಸಂಬಂಧವನ್ನು ಇನ್ನಷ್ಟು ಹತ್ತಿರಕ್ಕೆ ತರುವಲ್ಲಿ ಸಹಕಾರಿಯಾಗಿವೆ. ಪ್ರಕೃತಿದತ್ತವಾಗಿ ಆಚರಿಸುವಂತಹ ಈ ಕಾರ್ಯಕ್ರಮ ಇಂದಿಗೂ ನಡೆಯುತ್ತಿರುವುದು ಬಹಳ ವಿಶೇಷವಾಗಿದೆ.
ಸಂತೋಷ್ ಶೆಟ್ಟಿ ಮೊಳಹಳ್ಳಿ