ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯು, 2023-24ನೇ ಸಾಲಿನ ಅರ್ಧ ವಾರ್ಷಿಕ ಅವಧಿ ದಿನಾಂಕ 30.09.2023ಕ್ಕೆ ರೂ. 900 ಕೋಟಿ ಮೀರಿದ ಒಟ್ಟು ವ್ಯವಹಾರವನ್ನು ದಾಖಲಿಸಿ ಪ್ರಗತಿ ಪಥದಲ್ಲಿ ಯಶಸ್ಸಿನ ಹೊಸ ಮೈಲಿಗಲ್ಲನ್ನು ದಾಟಿದ ಸಾಧನೆ ಮಾಡಿದೆ.
ದಿನಾಂಕ30.09.2023ಕ್ಕೆಠೇವಣಾತಿಯು ರೂ.484 ಕೋಟಿ,ಹೊರಬಾಕಿ ಸಾಲ ರೂ.417 ಕೋಟಿ,ಒಟ್ಟು ವ್ಯವಹಾರ ರೂ.901 ಕೋಟಿಯನ್ನು ಮೀರಿದ್ದು ತನ್ನ “Vision 2025”ರರೂ. 1,000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದೆ.
ಹಿಂದಿನ ಸಾಲಿನ30.09.2022ಕ್ಕೆಹೋಲಿಸಿದಾಗ, ಠೇವಣಾತಿಯು ರೂ. 72 ಕೋಟಿ ಹೆಚ್ಚಳಗೊ0ಡು ಶೇ.18 ರಷ್ಟು ವೃದ್ಧಿಗೊ0ಡಿರುವುದು, ಹೊರಬಾಕಿ ಸಾಲವು ರೂ.75 ಕೋಟಿ ಹೆಚ್ಚಳಗೊ0ಡು ಶೇ.22ರಷ್ಟು ವೃದ್ಧಿಗೊ0ಡಿರುವುದು, ಒಟ್ಟು ವ್ಯವಹಾರವು ರೂ.148 ಕೋಟಿ ಹೆಚ್ಚಳಗೊ0ಡು ಶೇ.20 ರಷ್ಟು ವೃದ್ಧಿಯಾಗಿರುವುದು.ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 16 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿರುವುದು.ಸ್ಥಾಪನೆಯಾದಾಗಿನಿಂದಲೂ ಡಿವಿಡೆಂಡ್ ನೀಡುತ್ತಿರುವ ಸಂಸ್ಥೆ, ಕಳೆದ 5ವರ್ಷಗಳಿಂದ ಸದಸ್ಯರಿಗೆ ನಿರಂತರವಾಗಿ ಶೇ. 25 ಡಿವಿಡೆಂಡ್ ನೀಡುತ್ತಿರುವುದು. ತನ್ನ ಕಾರ್ಯವ್ಯಾಪ್ತಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ25 ಶಾಖೆಗಳನ್ನು ಹೊಂದಿ, ಕಳೆದ 29 ವರ್ಷಗಳಿಂದ ಸದಸ್ಯರ ಸೇವೆಯನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಘದ vision 2025ರಂತೆ, 31-03-2025ಕ್ಕೆ ರೂ.10 ಕೋಟಿ ಮೀರಿದ ನಿವ್ವಳ ಲಾಭ ಹಾಗೂ ಒಟ್ಟು30 ಶಾಖೆಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ. ಸಂಘದ ಕೇಂದ್ರ ಕಛೇರಿಗೆ 36,000 ಚ.ಅ. ವಿಸ್ತೀರ್ಣದ ಸುಸಜ್ಜಿತ ನೂತನ ಸ್ವಂತ ಕಟ್ಟಡದ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಸೆಪ್ಟೆಂಬರ್ 2024ರೊಳಗೆ ಲೋಕಾರ್ಪಣೆ ಮಾಡುವ ಗುರಿಯನ್ನು ಸಂಘವು ಹೊಂದಿದೆ.
ಸಂಘವು ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿಯನ್ನು ನೀಡುತ್ತಿದ್ದು,42 ತಿಂಗಳಿಂದ 60 ತಿಂಗಳ ಅವಧಿಯ ನಿರಖು ಠೇವಣಿಗೆ ಶೇ. 9ರ ಬಡ್ಡಿಯನ್ನು ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಹಾಗೂ ಭಾರತೀಯ ಯೋಧರಿಗೆ ಶೇ.1/2 ರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡುತ್ತಿದೆ. ಇದೀಗ, ದಿನಾಂಕ 01.10.2023ರಿಂದ ಅನ್ವಯಿಸುವಂತೆ ಭಾರತೀಯ ಯೋಧರ ವಿಧವೆಯರ ಹಾಗೂ ವಿಕಲಚೇತನ ಸದಸ್ಯರ, ನಿರಖು ಠೇವಣಿಗಳಿಗೆ ಶೇಕಡಾ ಳಿರಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ.
ಸಂಘದ, ಸಂತೃಪ್ತ ಠೇವಣಿದಾರರ ನಂಬಿಕೆ, ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪರಿಶ್ರಮಗಳು ಈವರೆಗಿನ ಸಾಧನೆಗೆ ಕಾರಣವಾಗಿದ್ದು, ಇವರೆಲ್ಲರ ಸಹಕಾರದೊಂದಿಗೆ ಸಂಘವು ಮುಂದಿನ ಗುರಿಗಳನ್ನು ಖಂಡಿತವಾಗಿ ಸಾಧಿಸುವುದು ಎಂದು ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.