ಉದ್ಯೋಗ ಅರಸಿ ದೂರದ ಮುಂಬಯಿಗೆ ತೆರಳಿ ಉದ್ಯೋಗದೊಂದಿಗೆ ಗಳಿಕೆಯ ಒಂದಂಶವನ್ನು ಸಮಾಜದ ಏಳಿಗೆಗಾಗಿ ಮೀಸಲಿಡುವ ಶಿವಾಯ ಫೌಂಡೇಶನ್ ಸದಸ್ಯರ ಕಾರ್ಯ ಅನುಕರಣೀಯ ಎಂದು ಆಸ್ಪೆನ್ ಎಸ್ಇಝಡ್ ಮಹಾ ಪ್ರಬಂಧಕ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಪಡುಬಿದ್ರಿ ಬಂಟರ ಭವನದ ಕೃಷ್ಣ ಸುಧಾಮ ಸಭಾಂಗಣದಲ್ಲಿ ಮುಂಬಯಿ ಶಿವಾಯ ಫೌಂಡೇಶನ್ ವತಿಯಿಂದ ನಡೆಸಲಾದ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ ಶೆಟ್ಟಿ ಮಾತನಾಡಿದರು. ವೇ. ಮೂ. ಹೆಜಮಾಡಿ ಹರಿದಾಸ ಭಟ್ ಆಶೀರ್ವಚನ ನೀಡಿದರು. ಪಡುಬಿದ್ರಿ ಪಿಎಸ್ಐ ಪ್ರಸನ್ನ ಎಂ. ಎಸ್. ಶುಭ ಹಾರೈಸಿದರು.
ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದಬೆಟ್ಟು, ಹೆಜಮಾಡಿ ಪ್ರೇಮಾಲಯದ ಪ್ರೇಮನಾಥ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ರಾಷ್ಟೀಯ ಕ್ರೀಡಾ ಪಟು ಹೆಜಮಾಡಿ ಪ್ರಕಾಶ್ ಶೆಟ್ಟಿ, ಆದ್ಯ ಫೌಂಡೇಶನ್ ನ ರಾಕೇಶ್ ಅಜಿಲ ಕೆ. ಆರ್., ಪಲಿಮಾರು ಗ್ರಾಪಂ ಉಪಾಧ್ಯಕ್ಷ ರಾಯೇಶ್ವರ ಪೈ, ಪಲಿಮಾರು ಗ್ರಾಪಂ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು ಉಪಸ್ಥಿತರಿದ್ದರು.
ಸನ್ಮಾನ : ಜೇಸಿಐ ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್ ಹಾಗೂ ಬಂಟ್ವಾಳದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅವರನ್ನು ಸನ್ಮಾನಿಸಲಾಯಿತು. ರಾಜೇಂದ್ರ ಭಟ್ ಮಾತನಾಡಿದರು. ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು. ಶಿವಾಯ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜ ವಂದಿಸಿದರು. ಪಡುಬಿದ್ರಿ, ಪಲಿಮಾರು, ಹೆಜಮಾಡಿ ಪರಿಸರದ ಸುಮಾರು 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶೈಕ್ಷಣಿಕ ಸಹಾಯ ಧನವಾಗಿ ಸುಮಾರು 4.50 ಲಕ್ಷ ರೂ. ವಿತರಿಸಲಾಯಿತು.