ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಮಾತೆ ಶ್ರೀ ಮಾತಾನಂದಮಯಿಯವರ ಆಶೀರ್ವಾದದೊಂದಿಗೆ ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಥಾಣೆ (ಮಹಾರಾಷ್ಟ್ರ) ಘಟಕದ ಭಜನಾ ಸತ್ಸಂಗವು ಆಗಸ್ಟ್ 31 ರ ಹುಣ್ಣಿಮೆಯ ಶುಭ ದಿನದಂದು ಥಾಣೆಯ ವರ್ತಕ್ ನಗರದ ಶ್ರೀ ಹನುಮಾನ್ ಮಂದಿರದಲ್ಲಿ ಉದ್ಘಾಟನೆಗೊಂಡಿತು.


ಬಳಗದ ಹಿರಿಯರಾದ ವಾಮಯ್ಯ ಬಿ ಶೆಟ್ಟಿ, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಮಾಜಿ ಅಧ್ಯಕ್ಷೆ ರೇವತಿ ವಿ ಶೆಟ್ಟಿ, ಅಧ್ಯಕ್ಷೆ ಶ್ವೇತಾ ಸಿ ರೈ, ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಹೆಗ್ಡೆ, ಗುಣಪಾಲ್ ಶೆಟ್ಟಿ ಮತ್ತು ಥಾಣೆಯ ಗುರುಭಕ್ತರು ಉಪಸ್ಥಿತರಿದ್ದು ಭಜನಾ ಸತ್ಸಂಗಕ್ಕೆ ಚಾಲನೆ ನೀಡಲಾಯಿತು.








































































































