ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾದ ಕುಂದಾಪುರ ತಾಲೂಕು ಎಡ್ವರ್ಡ್ ಮೆಮೊರಿಯಲ್ ಕ್ಲಬ್ ನ ವಾರ್ಷಿಕ ಮಹಾ ಸಭೆಯಲ್ಲಿ ತೀರಾ ಅನಾರೋಗ್ಯ ಪೀಡಿತರಿಗೆ“ಆರೋಗ್ಯ ನಿಧಿ” ಯೋಜನೆಗೆ ಕ್ಲಬ್ ನ ಅಧ್ಯಕ್ಷರಾದ ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರು ಚಾಲನೆ ನೀಡಿದರು.
ತೀರಾ ಅನಾರೋಗ್ಯ ಪೀಡಿತ ಜನರಿಗೆ ತಲಾ 10000 ರೂ ಚೆಕ್ ನ್ನು ವಿತರಿಸಲಾಯಿತು ಹಾಗೆಯೇ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಆ ಮಹಾಸಭೆಯಲ್ಲಿ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಕಾಳಾವರ ಉದಯ್ ಶೆಟ್ಟಿ ಲೆಕ್ಕ ಪತ್ರ ಮಂಡನೆ ಮಾಡಿ ಧನ್ಯವಾದ ಸಮರ್ಪಣೆ ಮಾಡಿದರು. ನಿವೃತ ಮುಖ್ಯ ಉಪಾಧ್ಯಾಯರಾದ ವೀರಣ್ಣ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.