ಬಂಟರ ಸಂಘ ಸಾಲೆತ್ತೂರು ವಲಯದಿಂದ ಆಯೋಜಿಸಲಾದ ? “ಆಟಿಡೊಂಜಿ ಬಂಟೆರ್ನ ಸ್ನೇಹಕೂಟ” ವಿಜಯ್ ಶ್ರೀ ಕಲ್ಯಾಣ ಮಂಟಪ ಕುಡ್ತಮುಗೇರುವಿನಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಗಂಟೆ ಒಂಬತ್ತಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘ ಬಂಟ್ವಾಳದ ಕಾರ್ಯದರ್ಶಿ ಶ್ರೀ ಜಗನ್ನಾಥ ಚೌಟ ಮಾಣಿ ವಹಿಸಿಕೊಂಡರು.
ಶ್ರೀ ದೇವಣ್ಣ ಆಳ್ವ ಎರ್ಮೆನಿಲೆ ಪ್ರಗತಿಪರ ಕೃಷಿಕರು, ಶ್ರೀ ಜತ್ತಪ್ಪ ಪೂಂಜ ಕೊಡಂಗೆ ಪ್ರಗತಿಪರ ಕೃಷಿಕರು, ಶ್ರೀ ಕೆ.ಎಂ. ಶಿವರಾಮ ಶೆಟ್ಟಿ, ನಿವೃತ ಸೀನಿಯರ್ ಮ್ಯಾನೇಜರ್ ವಿಜಯ ಬ್ಯಾಂಕ್ ಇವರುಗಳು ಗೌರವ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಸಮಾಜದ ಬಂಟ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ವರ್ಧೆಗಳು, ರಸಮಂಜರಿ ಮನೋರಂಜನಾ ಕಾರ್ಯಕ್ರಮ ಮುಂತಾದವುಗಳು ಜರುಗಿದವು.
ಮದ್ಯಾಹ್ನ 12 ರ ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ದೇವಪ್ಪ ಶೇಖ ಅಧ್ಯಕ್ಷರು ಬಂಟರ ಸಂಘ ಸಾಲೆತ್ತೂರು ವಹಿಸಿಕೊಂಡರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದಂತಹ ಶ್ರೀ ಲೋಕೇಶ್ ಶೆಟ್ಟಿ – ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ, ಶ್ರೀಮತಿ ರಮಾ ಎಸ್ ಭಂಡಾರಿ – ಅಧ್ಯಕ್ಷರು ಮಹಿಳಾ ಬಂಟರ ಸಂಘ ಬಂಟ್ವಾಳ, ಶ್ರೀ ಭುಜಂಗ ರೈ ಪಡಾರಗುತ್ತು – ಆಡಳಿತ ಮೊಕ್ತೇಸರರು ಶ್ರೀ ಮಲರಾಯಿ ಮೂವರ್ ದೈವಗಳು ಕಾಪು ಮಜಲು, ಶ್ರೀ ಲಕ್ಷ್ಮೀನಾರಾಯಣ ಅಡ್ಯಂತಾಯ – ಮಾಜಿ ಅಧ್ಯಕ್ಷರು ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ ಕೊಡಂಗಾಯಿ, ಶ್ರೀ ಗಿರೀಶ್ ಭಂಡಾರಿ ಕುಳಾಲು – ಕೋಶಾಧಿಕಾರಿ ಶ್ರೀ ಧೂಮಾವತಿ ಬಂಟ ದೈವಗಳ ಸೇವಾ ಟ್ರಸ್ಟ್ (ರಿ) ಸಭೆಯನ್ನುದ್ದೇಶಿಸಿ ಮಾತನಾಡಿದರು.
ತದನಂತರ S. S. L. C ಮತ್ತು P. U. C ಯಲ್ಲಿ ಶೇಕಡಾ 90% ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಭಾಗ್ಯರಾಜ್ ಶೆಟ್ಟಿ ಹರೇಕಳ ನಿರೂಪಿಸಿದರು.