ಪುಣೆ : ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ವರ ಮಹಾಲಕ್ಷ್ಮಿ ಪೂಜೆಯ ಶುಭ ದಿನವಾದ ಅ 25 ಶುಕ್ರವಾರದಂದು ಅರಶಿನ ಕುಂಕುಮ ಕಾರ್ಯಕ್ರಮವು ಕನ್ನಡ ಸಂಘದ ಡಾ ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಶಾಲೆಯ ಸಭಾಂಗಣದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು .
ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಮಿಳಾ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿದ ಈ ಅರಸಿನ ಕುಂಕುಮ ಕಾರ್ಯಕ್ರಮದಂಗವಾಗಿ ಮೊದಲಿಗೆ ಸಮಿತಿಯ ಪದಾಧಿಕಾರಿಗಳು ಶ್ರೀ ಮಹಾಲಕ್ಷ್ಮಿ ದೇವಿ ಫೋಟೋಗೆ ಪೂಜೆ ಗೈದು ಮಹಾಮಂಗಳಾರತಿ ಬೆಳಗಿದರು ,ನಂತರ ಅಧ್ಯಕ್ಷೆ ಪ್ರಮಿಳಾ ಶೆಟ್ಟಿ ಮತ್ತು ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಯಶೋದ ಎಂ.ಶೆಟ್ಟಿ ಪ್ರಾರ್ಥನೆ ಗೈದರು. ಮಹಿಳಾ ವಿಭಾಗದ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು , ನಂತರ ಪ್ರಧಾನ ಕಾರ್ಯಕ್ರಮವಾದ ಅರಶಿನ ಕುಂಕುಮ ಕಾರ್ಯಕ್ರಮ ನೆರೆವೇರಿತು ,ಮುತ್ತೈದೆಯರು ಪರಸ್ಪರ ಅರಶಿನ ಕುಂಕುಮ ಹಚ್ಚಿ ಸಿಹಿ ಹಂಚಿ ಶುಭ ಕೋರಿದರು .
ಪುಣೆ ವಿವಿದ ಸಂಘ ಸಂಸ್ಥೆಗಳ ಮಹಿಳಾ ವಿಭಾಗದ ಗಣ್ಯರನ್ನು ಸಮಿತಿಯ ಸದಸ್ಯರೆಯರು ಪುಷ್ಪಗುಚ್ಛ ನೀಡಿ ಸತ್ಕರಿಸಿದರು . ಭಜನಾ ಕಾರ್ಯಕ್ರಮ ನಡೆಸಿಕಟ್ಟ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು . ಈ ಅರಶಿನ ಕುಂಕುಮ ಕಾರ್ಯಕ್ರಮಕ್ಕೆ ಪ್ರಮುಖರಾದ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಲತಾ ಎಸ್ .ಶೆಟ್ಟಿ ,ಮತ್ತು ಪದಾಧಿಕಾರಿಗಳು ಅಂತರಾಷ್ಟ್ರೀಯ ಮಹಿಳಾ ಪರಿಷತ್ತಿನ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಕೆ .ಹೆಗ್ಡೆ ,ಪುಣೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು .ಶೆಟ್ಟಿ ,ಮತ್ತು ಪದಾಧಿಕಾರಿಗಳು ತುಳುಕೂಟ ಪುಣೆ ಮಹಿಳಾ ಅಧ್ಯಕ್ಷೆ ಸುಜಾತ ಡಿ.ಶೆಟ್ಟಿ ,ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಕಾರ್ಯದರ್ಶಿ ವೀಣಾ ಪಿ .ಶೆಟ್ಟಿ ,ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿ ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ಶೆಟ್ಟಿ ಮತ್ತು ಪದಾಧಿಕಾರಿಗಳು ,,ಅಂತಾರಾಷ್ಟ್ರೀಯ ಮಾನವಾಧಿಕಾರ ಆಯೋಗದ ದಕ್ಷಿಣ ಭಾರತಿಯ ಮಹಿಳಾ ಅಧ್ಯಕ್ಷೆ ಗೀತಾ ಶೆಟ್ಟಿ ,ಬಂಟರ ಸಂಘ ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ಮತ್ತಿತರನ್ನು ಸಮಿತಿಯ ವತಿಯಿಂದ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಂಟ ಸಮಾಜದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು .ಹಾಗೂ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು . ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಪ್ರೇಮ ಅರ್.ಶೆಟ್ಟಿ ,ರೇಣುಕಾ ಡಿ.ಶೆಟ್ಟಿ , ಅರುಣಾ ಅರ್ .ಶೆಟ್ಟಿ ,ಸುಕನ್ಯಾ ಡಿ.ಶೆಟ್ಟಿ ,ರಶ್ಮಿ ವಿ .ಭಂಡಾರಿ ,ರೇಖಾ ಎ .ಶೆಟ್ಟಿ ,ಶಕುಂತಳಾ ವಿ.ಶೆಟ್ಟಿ ,ಸವಿತಾ ಅರ್.ಶೆಟ್ಟಿ ,ಶರ್ಮಿಳಾ ಪಿ .ಶೆಟ್ಟಿ ,ಸರಿತಾ ವಿ.ಶೆಟ್ಟಿ ,ಪೂರ್ಣಿಮಾ ಎಸ್ .ಶೆಟ್ಟಿ ,ಯವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು . ಶ್ವೇತಾ ಪ್ರಸನ್ನ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮನಿರೂಪಿಸಿದರು . ಅರುಣಾ ಅರ್ .ಶೆಟ್ಟಿ ವಂದೀಸಿದರು .ನಂತರ ಲಘು ಉಪಾಹಾರ ಜರಗಿತು
ಚಿತ್ರ ,ವರದಿ ಹರೀಶ್ ಮೂಡಬಿದ್ರಿ ಪುಣೆ