ಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ವನಮಹೋತ್ಸವ ಆಚಾರಿಸಲಾಯ್ತು . ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸಾಧ್ವಿ ಶ್ರೀ ಮಾತಾನಂದಮಯೀ ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್. ರೈ ಉಪಸ್ಥಿತರಿದ್ದರು.ಶಾಲಾ ಶಿಕ್ಷಕ ವೃಂದದವರು ಹಾಗು ವಿದ್ಯಾರ್ಥಿಗಳು ಆಟದ ಮೈದಾನದ ಸುತ್ತಲೂ ವಿವಿಧ ಹಣ್ಣು ಹೂಗಳ ಹಾಗು ಮೌಲ್ಯಯುತ ಮರಗಳ ಸಸಿಗಳನ್ನು ನೆಟ್ಟರು.





































































































